ಎ.ಆರ್.ರೆಹಮಾನ್ ರವರು ಒಬ್ಬ ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕ, ಧ್ವನಿಸುರಳಿ-ಧ್ವನಿಮುದ್ರಣ ನಿರ್ಮಾಪಕ, ಸಂಗೀತಗಾರ ಹಾಗೂ ಗಾಯಕ. ರೋಜಾ ಸಿನಿಮಾಕ್ಕೆ ಸಂಗೀತ ನೀಡುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಅವರು ನೀಡಿರುವ ಹಾಡುಗಳು ಸೂಪರ್ ಸಕ್ಸಸ್ ಕಂಡಿವೆ.
ಮೊದಲು ಜಾಹೀರಾತುಗಳಿಗೆ ಎ.ಆರ್.ರೆಹಮಾನ್ ಜಿಂಗಲ್ಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದರು. ಮೊದಲಿಗೆ ಇವರು ತಮಿಳಿನ ‘ರೋಜಾ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದರು. ಅದಾದ ನಂತರ ಸಾಕಷ್ಟು ಚಿತ್ರಗಳಿಗೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. ಇದಷ್ಟೇ ಅಲ್ಲದೆ ಇವರಿಗೆ ಹಲವು ಪ್ರಶಸ್ತಿಗಳು ದೊರಕಿದೆ.
ಎ.ಆರ್.ರೆಹಮಾನ್ ಅವರಂತೆ ತಮ್ಮ ಪುತ್ರಿ ಖತೀಜಾ ರೆಹಮಾನ್ ಕೂಡ ಮ್ಯೂಸಿಷಿಯನ್. ಕೆಲವು ಸಿನಿಮಾಗಳ ಹಾಡುಗಳಿಗೆ ಖತೀಜಾ ರೆಹಮಾನ್ ದನಿಯಾಗಿದ್ದಾರೆ. ಇದೀಗ ಅವರ ಮಗಳು ಖತೀಜಾ ರೆಹಮಾನ್ ಅವರ ವಿವಾಹ ಮಹೋತ್ಸವ ನೆರವೇರಿದೆ. ಖತೀಜಾ ರೆಹಮಾನ್ ಜೊತೆ ರಿಯಾಸ್ದೀನ್ ಶೇಖ್ ಮೊಹಮ್ಮದ್ ಅವರ ಮದುವೆ ಜರುಗಿದ್ದು, ಮಗಳ ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಎ.ಆರ್.ರೆಹಮಾನ್ ಹಂಚಿಕೊಂಡು, ‘’ನವ ದಂಪತಿಗೆ ದೇವರು ಆಶೀರ್ವದಿಸಲಿ. ನಿಮ್ಮೆಲ್ಲರ ಪ್ರೀತಿ ಮತ್ತು ಶುಭ ಹಾರೈಕೆಗೆ ಧನ್ಯವಾದಗಳು’’ ಎಂದು ಇನ್ಸ್ಟಾಗ್ರಾಮ್ನಲ್ಲಿ ಎ.ಆರ್.ರೆಹಮಾನ್ ಬರೆದುಕೊಂಡಿದ್ದಾರೆ.
ಇನ್ನು ಖತೀಜಾ ರೆಹಮಾನ್ ರವರು ಕೂಡ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದು, ‘’ಇದು ನನ್ನ ಜೀವನದ ಬಹು ನಿರೀಕ್ಷಿತ ದಿನ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ’’ ಎಂದಿದ್ದಾರೆ.
ಈ ನವ ಜೋಡಿಗಳಿಗೆ ಸಿನಿಪ್ರಿಯರ ಹಾಗೂ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಗಾಯಕಿ ಶ್ರೇಯಾ ಘೋಶಾಲ್, ನಿರ್ಮಾಪಕ ಬೋನಿ ಕಪೂರ್ ಸೇರಿದಂತೆ ಅನೇಕ ತಾರೆಯರು ನವ ದಂಪತಿಗೆ ಶುಭ ಹಾರೈಸಿದ್ದಾರೆ.
ಇನ್ನು ರಿಯಾಸ್ದೀನ್ ಶೇಖ್ ಮೊಹಮ್ಮದ್ ಅವರೂ ಕೂಡ ಸಂಗೀತ ಕ್ಷೇತ್ರದಲ್ಲೇ ಇದ್ದಾರೆ. ಸೌಂಡ್ ಇಂಜಿನಿಯರ್ ಆಗಿರುವ ರಿಯಾಸ್ದೀನ್ ಶೇಖ್ ಮೊಹಮ್ಮದ್ ಉದ್ಯಮಿ ಕೂಡ ಹೌದು. ಎ.ಆರ್.ರೆಹಮಾನ್ ಅವರ ಲೈವ್ ಈವೆಂಟ್ಗಳಲ್ಲಿ ರಿಯಾಸ್ದೀನ್ ಶೇಖ್ ಮೊಹಮ್ಮದ್ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ