ಸರ್ಕಾರಿ ನೌಕರರು ‘ಕಂಪ್ಯೂಟರ್ ಪರೀಕ್ಷೆ’ ಉತ್ತೀರ್ಣರಾಗದೇ ಇದ್ರೇ, ಮುಂಬಡ್ತಿ, ವೇತನ ಹೆಚ್ಚಳವಿಲ್ಲ – ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮುಂಬಡ್ತಿ, ವೇತನ ಹೆಚ್ಚಳಕ್ಕೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗೋದು ಕಡ್ಡಾಯವಾಗಿದೆ. 2015ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಹೀಗೆ ನಿಗದಿ ಪಡಿಸಿರುವಂತ ಪರೀಕ್ಷೆಯನ್ನು ಹತ್ತು ವರ್ಷಗಳಲ್ಲಿ ಮುಗಿಸುವಂತೆ ಅವಕಾಶ ನೀಡಿತ್ತು. ಆದ್ರೇ ಇದೀಗ ದಿನಾಂಕ 31-12-2022ರೊಳಗಾಗಿ ಪರೀಕ್ಷೆ ಪಾಸ್ ಮಾಡುವಂತೆ ಡೆಡ್ ಲೈನ್ ನೀಡಿದೆ. ಈ ಮೂಲಕ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡಿದೆ.

ರಾಜ್ಯ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದ್ದು, ಈ ಮೊದಲು ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸ್ ಮಾಡೋದಕ್ಕೆ 10 ವರ್ಷಗಳ ಕಾಲಾವಧಿ ನೀಡಲಾಗಿತ್ತು. ಈ ನಿಯಮವನ್ನು ತಿದ್ದುಪಡಿ ತರಲಾಗುತ್ತಿದೆ. ದಿನಾಂಕ 31-12-2022ರೊಳಗಾಗಿ ನೌಕರರು ಪರೀಕ್ಷೆ ಉತ್ತೀರ್ಣರಾಗುವಂತೆ ಸೂಚಿಸಿದೆ.

ಇನ್ನೂ ದಿನಾಂಕ 31-12-2022ರೊಳಗಾಗಿ ರಾಜ್ಯ ಸರ್ಕಾರಿ ನೌಕರರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಒಂದು ವೇಳೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಇದ್ದಲ್ಲಿ, ಮುಂಬಡ್ತಿ, ವೇತನ ಹಚ್ಚಳವಿಲ್ಲ ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದೆ.

About The Author