Saturday, December 28, 2024

Latest Posts

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದೀರಾ..?ಈ ಸಮಸ್ಯೆಗೆ ಪರಿಹಾರವೇನು..?

- Advertisement -

Health Tips: ದೇಹದ ತ್ಯಾಜ್ಯವನ್ನು ಹೊರಗೆ ಹಾಕಿ, ರಕ್ತದ ಶುದ್ಧತೆ ಮಾಡುವುದು ಮೂತ್ರ ಪಿಂಡದ ಕೆಲಸ. ಆಗ ನಾವು ಆರೋಗ್ಯವಾಗಿ ಇರಲು ಸಾಧ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೂತ್ರಪಿಂಡದ ಖಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಪವಿತ್ರಾ ಹೇಳಿದ್ದಾರೆ ನೋಡಿ.

ಕಿಡ್ನಿ ಸಮಸ್ಯೆಗೆ ಪರಿಹಾರ ಅಂದ್ರೆ ಡಯಾಲಿಸಿಸ್. ಡಯಾಲಿಸಿಸ್ ಅಂದ್ರೆ, ಕಿಡ್ನಿ ಮಾಡುವ ಕೆಲಸವನ್ನು ಒಂದು ಮಿಷನ್ ಮಾಡುತ್ತದೆ. ಅಂದ್ರೆ, ದೇಹವನ್ನು ಶುದ್ಧ ಮಾಡಿ, ರಕ್ತವನ್ನು ದೇಹಕ್ಕೆ ಸರಿಯಾಗಿ ಸಪ್ಲೈ ಮಾಡಿ, ಬಿಪಿ ಕಂಟ್ರೋಲ್‌ನಲ್ಲಿಡುವ ಕೆಲಸವನ್ನು ಮೂತ್ರಪಿಂಡ ಮಾಡುತ್ತದೆ. ಆದರೆ ಮೂತ್ರಪಿಂಡದ ವೈಫಲ್ಯವಿದ್ದಾಗ, ಡಯಾಲಿಸಿಸ್ ಮಾಡಲಾಗುತ್ತದೆ.

ಆದರೆ ಡಯಾಲಿಸಿಸ್ ಕೂಡ ಬೇಕಾದಾಗ ಮಾಡುವುದಿಲ್ಲ. ಬದಲಾಗಿ, ಸರಿಯಾಗಿ ಮೂತ್ರ ವಿಸರ್ಜನೆಯಾಗುತ್ತಿಲ್ಲ. ತಿಂದ ಆಹಾಾರ, ವಾಂತಿಯ ಮೂಲಕ ಹೊರಗೆ ಬರುತ್ತಿದೆ. ಕೆಮ್ಮು ಹೆಚ್ಚಾಗಿದೆ. ಇಂಥ ಆರೋಗ್ಯ ಸಮಸ್ಯೆ ಸಂಭವಿಸಿದಾಗ ಮಾತ್ರ, ಡಯಾಲಿಸಿಸ್ ಮಾಡಲಾಗುತ್ತದೆ. ಆದರೆ ವೈದ್ಯರು ಅದಾಗಲೇ ನಿಮಗೆ ಒಮ್ಮೆ ಚಿಕಿತ್ಸೆ ಕೊಟ್ಟಿದ್ದರೆ, ಈ ಬಗ್ಗೆ ಟಿಪ್ಸ್ ಕೂಡ ಕೊಟ್ಟಿರುತ್ತಾರೆ. ಹೆಚ್ಚು ನೀರು ಕುಡಿಯಬಾರದು. ನೀರು ಕುಡಿಯುವ ಪ್ರಮಾಣ ಇಷ್ಟೇ ಇರಬೇಕು. ಆಹಾರ ಸೇವನೆಯ ಪ್ರಮಾಣ ಇಷ್ಟೇ ಇರಬೇಕು ಎಂದು ಹೇಳಿರುತ್ತಾರೆ. ಆ ನಿಯಮವನ್ನು ನೀವು ಅನುಸರಿಸಿದರೆ, ಡಯಾಲಿಸಿಸ್ ಕೂಡ ಅಪರೂಪಕ್ಕೆ ಮಾಡಿಸಿಕೊಳ್ಳಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss