ನಿಮಗೆ ನಾಚಿಕೆ ಆಗಲ್ಬಾ, ನೀವೇನು ಅಲ್ಪ ಸಂಖ್ಯಾತರ ಮುಖ್ಯಮಂತ್ರಿಗಳೇ..?: ಅರವಿಂದ್ ಬೆಲ್ಲದ್

Hubballi Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ಪ್ರತಿಭಟನೆಯಲ್ಲಿ, ಶಾಸಕ ಅರವಿಂದ್ ಬೆಲ್ಲದ್ ಭಾಷಣ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕರ್ನಾಟಕದಲ್ಲಿ ಆದಿಲ್ ಶಾ ಆಡಳಿತ ಶುರುವಾಗಿದೆ. ಮತ್ತೊಮ್ಮೆ ಟಿಪ್ಪು ಸಂತತಿ ಕರಾಳ ಇತಿಹಾಸ ರಾಜ್ಯದಲ್ಲಿದೆ. ಔರಂಗಜೇಬನ ಕಾಲದ ಇತಿಹಾಸ ರಾಜ್ಯದಲ್ಲಿ ಬಂದಿದೆ. ಕಾಂಗ್ರೆಸ್ ಸರ್ಕಾರ ಟಿಪ್ಪು ಆಡಳಿತ, ಔರಂಗಜೇಬನ ಆಡಳಿತ ತಗೆದುಕೊಂಡು ಬರೋ ಪ್ರಯತ್ನ ಮಾಡಿದೆ. ಶ್ರೀಕಾಂತ್ ಪೂಜಾರಿ ಆಟೋದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ಅರೆಸ್ಟ್ ಮಾಡಿದ್ದಾರೆ. 32 ವರ್ಷದ ನಂತರ ಸಿದ್ದರಾಮಯ್ಯ ಸರ್ಕಾರ, ಟಿಪ್ಪು ಸರ್ಕಾರ ಅವರನ್ನು ಅರೆಸ್ಟ್ ಮಾಡ್ತು. ಕೋರ್ಟ್ ಬಂದ್ ಇರೋವಾಗ ಅರೆಸ್ಟ್ ಮಾಡಿದೆ. ಪೊಲೀಸರ ಕಡೆ FiR ಇಲ್ಲ‌ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಕೇವಲ ಅಲ್ಪ ಸಂಖ್ಯಾತರ ವೋಟ್ ನಿಂದ ಬಂದಿಲ್ಲ. ನಿಮಗೆ ಹಿಂದೂಗಳ ವೋಟ್ ಹಾಕಿಲ್ವಾ..? ರಾಮ ಮಂದಿರ ಆದ್ರೆ ಸಿದ್ದರಾಮಯ್ಯಗೆ ಹೊಟ್ಟೆಯಲ್ಲಿ ಯಾಕೆ ಸಂಕಟ..? ರೈತರಿಗೆ ದುಡ್ಡಿಲ್ಲ ಅಂದ್ರು, ನಾವ ಲಬೋ ಲಬೋ ಹೊಯ್ಕೊಂಡರು ಏನೂ ಕೊಡಲಿಲ್ಲ. ಆದ್ರೆ ಇಲ್ಲಿ ಬಂದು 10 ಸಾವಿರ ಕೋಟಿ ಕೊಡ್ತೀನಿ ಅಂತಾರೆ‌. ನಿಮಗೆ ನಾಚಿಕೆ ಆಗಲ್ಬಾ, ನೀವೇನು ಅಲ್ಪ ಸಂಖ್ಯಾತರ ಮುಖ್ಯಮಂತ್ರಿಗಳೇ..? ಎಂದು ಬೆಲ್ಲದ್ ಪ್ರಶ್ನಿಸಿದ್ದಾರೆ.

ಗೋದ್ರಾ ಘಟನೆ ಸಮಸ್ತ ಜನತೆಗೆ ನೆನಪಿದೆ. ಜೀವಂತ ಸುಟ್ಟಿದ್ದು ಯಾರೂ, ಅದನ್ನು ಹರಿಪ್ರಸಾದ್‌ ಯಾಕೆ ನೆನಪು ಮಾಡ್ತೀರಿ..? ಅದನ್ನು ನೆನಪು ಮಾಡಿ ಹೆದರಿಕೆ ಹಾಕ್ತೀರಾ‌..? ಮುಸ್ಲಿಂರಿಗೆ ಪ್ರಚೋದನೆ ಕೊಡ್ತೀದಿರಾ..? ಹಿಂದೂಗಳ ನರಮೇಧ ಮಾಡೋಕೆ ಪ್ರಚೋದನೆ ಕೊಡ್ತಿದೀರಾ..? ಹರಿಪ್ರಸಾದ್‌ ಅವರನ್ನು ಒಳಗೆ ಹಾಕಿ. ಕಾಂಗ್ರೆಸ್ ನವರೇ ನಿಮಗೆ ನಾಚಿಕೆ ಬರಬೇಕು. ರಾಮ ಭಕ್ತರನ್ನು ಅರೆಸ್ಟ್ ಮಾಡಿದ್ದೀರಿ. ಇವತ್ತು ಎಂತಹ ಸರ್ಕಾರ ತಂದಿದ್ದೇವೆ ಎಂದು ಜನ ಪಶ್ಚಾತ್ತಾಪ ಪಡುತ್ತಿದ್ದಾರೆ. ಇವತ್ತು ದೇಶ ಸಂಭ್ರಮಿಸೋ ಕಾಲಕ್ಕೆ ಅಡ್ಡಗಾಲ ಹಾಕಿದ್ದೀರಿ. ಇದು ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ಆಗಿರೋದು‌ ಎಂದು ಬೆಲ್ಲದ್ ಆಕ್ರೋಶ ಹೊರಹಾಕಿದ್ದಾರೆ.

ರಾಮ ಮಂದಿರ ಉದ್ಘಾಟನೆ ಆಗೋ ಸಮಯದಲ್ಲಿ ರಾಮ ಭಕ್ತನ ಅರೆಸ್ಟ್ ಯಾಕೆ ಮಾಡ್ತೀರೀ..? ಟಿಪ್ಪು ಶಾಸನ, ಔರಂಗಜೇಬನ ಶಾಸನ ತಗೊಂಡು ಬಂದ್ರೆ ನಾವ ಒಪ್ಪಲ್ಲ. ಈ ಕೂಡಲೇ ಶ್ರೀಕಾಂತ್ ಪೂಜಾರಿ ಬಿಡುಗಡೆ ಆಗಬೇಕು. ಇನ್ಸಪೆಕ್ಟರ್ ಅಮಾನತ್ತು ಮಾಡಬೇಕು. ಅಶೋಕ ಮಾತಾಡಿದ ನಂತರ ನಾವು ಸ್ಟೇಶನ್ ಗೆ ಮುತ್ತಿಗೆ ಹಾಕ್ತೀವಿ ಎಂದು ಬೆಲ್ಲದ್ ಹೇಳಿದ್ದಾರೆ.

ಗೋದ್ರಾ ದುರಂತ ಮರುಕಳಿಸುತ್ತದೆ ಅಂದ್ರೆ ಏನು..? ಹಿಂದೂಗಳನ್ನು ಸುಡ್ತೀರಾ..?: ಬೆಲ್ಲದ್ ಪ್ರಶ್ನೆ..

ನಾವು ರಾಮ ಭಕ್ತರಾಗಿ ಬಂದಿದ್ದೇವೆ,ಆಂಜನೇಯ ಆಗೋಕೆ ಬಿಡಬೇಡಿ: ಪೊಲೀಸರಿಗೆ ಆರ್.ಅಶೋಕ್ ಎಚ್ಚರಿಕೆ

“ರಾಮಭಕ್ತರನ್ನು ಕೆಣಕಿದರೆ ಕಾಂಗ್ರೆಸ್ ಸರ್ಕಾರ ಧೂಳಿಪಟವಾದೀತು ಎಚ್ಚರ”

About The Author