Hubli News: ಹುಬ್ಬಳ್ಳಿ: ಮಾರಕಾಸ್ತ್ರ ಹೊಂದಿದ್ದ ನಾಲ್ವರನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಕಸಬಾಪೇಟ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಟಗರ ಓಣಿಯ ಮಹಮ್ಮದಸಾಧಿಕ ಬಾಬಾಸಾಧಿಕ್ ಬೇಪಾರಿ (28), ದಾದಾಪೀರ್ ಚೌಧರಿ (28), ಕೋಳೆಕರ ಪ್ಲಾಟ್‌ನ ಆಸೀಫ್ ಹಜರತಬಿಲಾಲ್ ಬೇಪಾರಿ (26), ಬುಲ್ಲೋಜರ ನಗರದ ಮೋಹಿನಖಾನ್ ಧಾರವಾಡ (24) ಬಂಧಿತರು.
ಹಳೇಹುಬ್ಬಳ್ಳಿಯ ಗೌಸಿಯಾಟೌನ್ ಗಾರ್ಡನ್ ಹತ್ತಿರ ಅಪರಾಧ ಮಾಡುವ ಉದ್ದೇಶದಿಂದ ತಲವಾರ ಹಿಡಿದು ನಿಂತಿರುವ ಬಗ್ಗೆ ಮಾಹಿತಿ ಕಲೆಹಾಕಿದ ಪಿಐ ರಾಘವೇಂದ್ರ ಹಳ್ಳೂರ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ
ಮೂಲಕ ದಾಳಿ ನಡೆಸಿ ಬಂಧಿಸಿದೆ. ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಹಾಜರುಪಡಿಸಲಾಗಿದೆ.
ಕ್ರಿಮಿನಲ್‌ಗಳ ಜೊತೆ ಹುಬ್ಬಳ್ಳಿ ಪೊಲೀಸರ ಸಂಪರ್ಕ: ಅರವಿಂದ ಬೆಲ್ಲದ್ ಶಾಕಿಂಗ್ ಹೇಳಿಕೆ!
ಹ*ತ್ಯೆಯಾದ ಯುವತಿ ಅಂಜಲಿ ಸಹೋದರಿ ಆತ್ಮಹ*ತ್ಯೆಗೆ ಯತ್ನ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಹುಬ್ಬಳ್ಳಿಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪಿ.ರಾಜೀವ್ ತಲೆದಂಡ