ರಾಮಮಂದಿರ ಸ್ಪೋಟಿಸುವುದಾಗಿ ಹೇಳಿದ್ದ ಇಬ್ಬರ ಬಂಧನ..

National Political News: ಮೊನ್ನೆಯಷ್ಟೇ ರಾಮಮಂದಿರ ಸ್ಪೋಟಿಸುತ್ತೇವೆ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ, ಓರ್ವ ಮೇಲ್ ಮಾಡಿದ್ದ. ಇದೀಗ ಹಾಗೆ ಬೆದರಿಕೆ ಹಾಕಿದ ಇಬ್ಬರನ್ನು ಬಂಧಿಸಲಾಗಿದೆ ಎಂದು, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಆಶ್ಚರ್ಯವೆಂದರೆ ಈ ಕಿಡಿಗೇಡಿಗಳು, ಹಿಂದೂ ಮತ್ತು ಸಿಖ್ ಮತದವರಾಗಿದ್ದು, ತಾಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಮೊಬೈಲ್ ಸೇರಿ, ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಭೂತಿ ಬ್ಲಾಕ್ ಗೋಮತಿ ಪ್ರದೇಶದಲ್ಲಿ ಇವರಿಬ್ಬರನ್ನು ಬಂಧಿಸಲಾಗಿದೆ.

ಭಾರತೀಯ ಕಿಸಾನ್ ಮಂಚ್ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ, ಬೆದರಿಕೆ ಮೇಲ್ ಬಂದಿದ್ದು, ಅದರಲ್ಲಿ ನಾನು ಯೋಗಿ ಆದಿತ್ಯನಾಥ್, ರಾಮಮಂದಿರಕ್ಕೆ ಗೀಟು ಹಾಕಿರುವ ಫೋಟೋ ಇತ್ತು. ಅಲ್ಲದೇ, ತಾನು ಜುಬೈರ್ ಹುಸೇನ್. ನನಗೆ ಪಾಕಿಸ್ತಾನದ ಐಸಿಸ್ ಜೊತೆ ನಂಟಿದೆ. ನಾನು ಗೋರಕ್ಷಕರಾದ ಯೋಗಿ, ದೇವೇಂದ್ರ ತಿವಾರಿ, ಅಮಿತಾಬ್ ಯಶ್ ಅವರನ್ನು ಮುಗಿಸುತ್ತೇನೆ ಎಂದು ಬರೆದಿದ್ದ. ಇದೀಗ ಆರೋಪಿಗಳು ಸಿಕ್ಕಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಗೋಧ್ರಾ ವಿವಾದಾತ್ಮಕ ಹೇಳಿಕೆ: ಹರಿಪ್ರಸಾದರನ್ನು ಬಂಧಿಸಿ ಎಂದ ಪ್ರಮೋದ್ ಮುತಾಲಿಕ್

ಹಿಂದೂ ರಾಷ್ಟ್ರ ಮಾಡೇ ಮಾಡ್ತೀವಿ ಗಂಡಸ್ತನ ಇದ್ರೆ ತಡಿರಿ: ಕಾಂಗ್ರೆಸ್‌ಗೆ ಮುತಾಲಿಕ್ ಸವಾಲ್

ಜೋಶಿ ಬದಲು ಶ್ರೀಕಾಂತ್ ಗೆ ಟಿಕೆಟ್ ಕೊಡಿ ಅಭಿಯಾನ ಆರಂಭಿಸಿದ ಕಾಂಗ್ರೆಸ್..!

About The Author