Sunday, July 6, 2025

Latest Posts

ಅರಸೀಕೆರೆ ಬಿಗ್ ಫೈಟ್.. ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ

- Advertisement -

ಹಾಸನ: ಅರಸಿಕೆರೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಆರೋಪ ಕೇಳಿಬಂದಿದೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೆ.ಎಂ.ಶಿವಲಿಂಗೇಗೌಡ ಅವರ ಬೆಂಬಲಿಗರಿಂದ, ಜೆಡಿಎಸ್ ಕಾರ್ಯಕರ್ತ ಕಿರಣ್  ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ. ಕಿರಣ್ ಮೇಲೆ ಬ್ಲೇಡ್‌ನಿಂದ ಹಲ್ಲೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ 9.30 ರ ನಂತರವೂ ಯಾಕೆ ಪ್ರಚಾರ ಮಾಡ್ತಿದ್ದೀರಾ ಅಂತಾ ಕೇಳಿದೆ. ಅಷ್ಟಕ್ಕೆ ನನ್ನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆಗೆ ಬಂದ್ರು. ಆ ಕಾಂಗ್ರೆಸ್ ಗುಂಪಿನಲ್ಲಿ ಶಿವಲಿಂಗೇಗೌಡ್ರ ಮಗ ಕೂಡಾ ಇದ್ದರು. ಆ ಗುಂಪಿನಲ್ಲಿದ್ದ ಕೆಲವರು ನನ್ನ ಮೇಲೆ ಹಲ್ಲೆ ಮಾಡಿ, ಬ್ಲೇಡ್ ನಿಂದ ಕೊಯ್ದಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಗೊಳಗಾದ ಕಿರಣ್ ಆರೋಪ ಮಾಡಿದ್ದಾರೆ. ಗಂಡಸಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.

ಹಾಸನದ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ

ತುರಿಕೆ, ಗಜಕರ್ಣ ಸಮಸ್ಯೆಗೆ ಪವರ್ಫುಲ್ ಮನೆಮದ್ದುಗಳು..

ಪ್ರಚಾರದ ವೇಳೆ ಮಾಜಿ ಡಿಸಿಎಂ ಪರಮೇಶ್ವರ್ ತಲೆಗೆ ಕಲ್ಲಿನೇಟು, ಡಿಕೆಶಿ ಆಕ್ರೋಶ..

- Advertisement -

Latest Posts

Don't Miss