Sunday, May 26, 2024

Latest Posts

ನಿಮ್ಮ ಮುತ್ತಾತ ಬಂದ್ರು ಕಾಶ್ಮೀರದಲ್ಲಿ 370 ಆರ್ಟಿಕಲ್ ವಾಪಸ್ ತರೋಕ್ಕೆ ಆಗಲ್ಲ: ಪ್ರಹ್ಲಾದ್ ಜೋಶಿ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಬಿಜೆಪಿ ಮಹಿಳಾ ಮತ್ತು ಯುವ ಮೋರ್ಚಾ ಸಮಾವೇಶ ನಡೆದಿದ್ದು, ಈ ವೇಳೆ ಮಾತನಾಡಿದ ಪ್ರಹ್ಲಾದ್ ಜೋಶಿ, ಅಣ್ಣಾಮಲೈ ಕರ್ನಾಟಕ ಪೊಲೀಸ್ ಅಧಿಕಾರಿಯಾಗಿ ಅಪರಾಧಿಗಳನ್ನು ಮಟ್ಟಹಾಕಿದ್ದರು. ಇಂದು ಸನಾತನ ಧರ್ಮವನ್ನ ನಿರ್ನಾಮ ಮಾಡ್ತೀನಿ ಎಂದಿರುವ ಡಿಎಂಕೆ ವಿರುದ್ಧ ಘರ್ಜಿಸುತ್ತಿದೆ. ಅಣ್ಣಾಮಲೈ ಬೆಂಗಳೂರು ಬಿಟ್ಟು ಹೋಗುವ ಮೊದಲು ತಮಿಳುನಾಡಿನಲ್ಲಿ ದ್ರಾವಿಡ ಪಾರ್ಟಿ ಯಾರನ್ನು ಗುರುತಿಸುವುದಿಲ್ಲ ಎಂದಿತ್ತು. ಆದ್ರೆ ಇಂದು ಮೋದಿ ಹಾಗೂ ಅಣ್ಣಾಮಲೈ ಕಂಡರೆ ಅವರಿಗೆ ನಿದ್ದೆ ಬರುತ್ತಿಲ್ಲ ಎಂದು ಜೋಶಿ ಹೇಳಿದ್ದಾರೆ.

ಡಿಎಂಕೆ ಸಂತಾನರು ಕರ್ನಾಟದಲ್ಲಿ ಸಿದ್ದರಾಮಯ್ಯರಿದ್ದಾರೆ. ಸಿದ್ದರಾಮಯ್ಯ ಯಾರನ್ನು ಪಕ್ಕಕ್ಕೆ ಇಟ್ಟುಕೊಂಡಿದ್ದರು ಅಂದು. ಪಾಕಿಸ್ತಾನ ಜಿಂದಾಬಾದ್ ಎನ್ನುವುದು ಇಡೀ ಟಿವಿಯಲ್ಲಿ ತೋರಿಸಿದ್ದಾರೆ. ಆದ್ರೆ ಸಿದ್ದರಾಮಯ್ಯ ನನಗೆ ಕೇಳಿಲ್ಲ ಅಂತಾರೆ. ಕಿವಿ ಕೇಳದಿದ್ದರೆ ಮಶೀನ್ ಹಾಕಿಕೊಳ್ಳಿ. ಪಾಕ್ ಜಿಂದಾಬಾದ್ ಎನ್ನುವವರು ಒಂದು ಕಡೆಯಾದ್ರೆ. ಮತ್ತೊಂದು ಕಡೆ ಪೊಲೀಸ್ ಸ್ಟೇಶನ್ ಸುಟ್ಟು ಹಾಕಿದವರನ್ನ ಇವರು ಬಂದ ಮೇಲೆ ಬಿಡುತ್ತಾರೆ. ಪಿಎಫ್ಐ ಜೊತೆ ಸಂಪರ್ಕ ಇರುವವರನ್ನ ಇವರು ಬಿಡ್ತಾರೆ ಇಲ್ಲಿ.

ವಯನಾಡ್ ನಲ್ಲಿ ಮುಸ್ಲಿಂ ಲೀಗ್ ದ್ವಜ ಹಿಡಿದು ರಾಹುಲ್ ಹೋಗಿದ್ದಾರೆ. ಅದರಲ್ಲಿ ಕೇಸರಿ ಇದೆ ಎನ್ನುವ ಕಾರಣಕ್ಕೆ ಅವರ ಧ್ವಜ ಹಿಡಿದು ಹೋದ್ರು. ಇಂತವರು ದೇಶಕ್ಕೆ ಒಳ್ಳೇದು ಹೇಗೆ ಮಾಡ್ತಾರೆ..? ಆರ್ಟಿಕಲ್ 370 ಪರಿಣಾಮ ನಾವೇ ಬೇರೆ ನಮ್ಮ ದೇಶ ಬೇರೆ ಎನ್ನುವ ರೀತಿ ಇತ್ತು. ಅದರ ಪರಿಣಾಮ ಎಲ್ಲಿ ಬೇಕಾದಲ್ಲಿ ಬಾಂಬ್ ಹಾಕುತ್ತಿದ್ದರು. 370 ಕಿತ್ತು ಹಾಕಿದಮೇಲೆ ಕಾಂಗ್ರೆಸ್ ಪಾರ್ಟಿಯವರ ಮನೆಯಲ್ಲಿ ಯಾರೋ ಸತ್ತವರ ರೀತಿ ಇದ್ದರೂ, ಕಾಶ್ಮೀರದಲ್ಲಿ ರಕ್ತ ಹರಿಯುತ್ತೆ ಅಂತ ಹೇಳಿದ್ರು. ಆದ್ರೆ ಕಾಶ್ಮೀರ ಇಂದು ಸ್ವಿಡ್ಜರ್ ಲ್ಯಾಂಡ್ ಆಗಿದೆ. ನಿಮ್ಮ ಮುತ್ತಾತ ಬಂದ್ರು 370ವಾಪಾಸ್ ತರಲು ಆಗುವುದಿಲ್ಲ. ಬಾಂಬ್ ಹಾಕಿದ ಮೇಲೆ ಮೇಣದ ಬತ್ತಿ ಹಚ್ಚವ ಕಾಲ ಹೋಗಿದೆ. ಅವರ ಮನೆಗೆ ಹೊಕ್ಕು ಹೊಡೆಯುವ ಕಾಲ ಬಂದಿದೆ ಎಂದು ಜೋಶಿ ಹೇಳಿದ್ದಾರೆ.

ಜಗತ್ತು ನಮ್ಮನ್ನು ನೋಡಿ ನಗುತ್ತಿತ್ತು. 300 ಜನರನ್ನ ಮುಂಬೈನಲ್ಲಿ ಕೊಂದು ಹಾಕಿದ್ರು. ನಮ್ಮ ಸೈನ್ಯ ಹೇಳಿದ್ರು ಅವಕಾಶ ಕೊಡಿ ಎಂದು. ಆದ್ರೆ ಸೋನಿಯಾ ಗಾಂಧಿ ಹೇಳಿದ್ರು ಯುದ್ಧ ಮಾಡೋದು ಬೇಡ ರಕ್ತಪಾತ ಆಗುತ್ತೆ ಅಂದ್ರು. ಸರ್ಜಿಕಲ್ ಸ್ಟ್ರೈಕ್ ನಲ್ಲಿ 40 ಜನರನ್ನ ಕೊಂದ್ವಿ. ಸ್ಟ್ರೈಕ್ ಮಾಡುವಾಗ ಅಭಿನಂದನ್ ಸಿಕ್ಕಾಕಿಕೊಂಡಿದ್ದರು. ಆಗ ಕಾಂಗ್ರೆಸ್ ಖುಷಿಯಿಂದ ಇತ್ತು. ಹಿಂದೆ ದೇಶದ ಸೈನಿಕನ ರುಂಡ ಬೇರ್ಪಡಿಸಿ ದೇಹ ಕಳುಹಿಸಿದ್ದರು. ಇದು ಹಾಗೆ ಆಗುತ್ತೆ ಎಂದು ಆದ್ರೆ. ಮೋದಿ ಮಾತ್ರ ಅಭಿನಂದನ್ ಗೆ ಏನಾದ್ರು ಆದ್ರೆ ನಾವು ಸುಮ್ಮನೆ ಬಿಡುವುದಿಲ್ಲ ಅಂತ ಎಚ್ಚರಿಸಿದ್ದರು. ಬಾಲ ಮುಚ್ಚಿಕೊಂಡು ಸುಮ್ಮನೆ ಬಿಟ್ಟು ಹೋದರು ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಸದ್ದಾಂ ಎಂಬುವವನಿಂದ ಅಪ್ರಾಪ್ತೆ ಗರ್ಭಿಣಿ ಕೇಸ್ – ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

ಲವ್ ಜಿಹಾದ್ ಜಾಲ ವ್ಯಾಪಕವಾಗಿದೆ, ದೊಡ್ಡಮಟ್ಟದ ತನಿಖೆಯಾಗಬೇಕು: ಸಿ.ಟಿ.ರವಿ..!

ಕಾಂಗ್ರೆಸ್ ತುಷ್ಟಿಕರಣ ರಾಜಕಾರಣದಿಂದ ಎಲ್ಲೆಡೆಯೂ ಕೊ*ಲೆ, ಲವ್ ಜಿಹಾದ್ ನಡೆಯುತ್ತಿದೆ: ವಿಜಯೇಂದ್ರ..!

- Advertisement -

Latest Posts

Don't Miss