Tuesday, May 28, 2024

Latest Posts

ಸದ್ದಾಂ ಎಂಬುವವನಿಂದ ಅಪ್ರಾಪ್ತೆ ಗರ್ಭಿಣಿ ಕೇಸ್ – ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

- Advertisement -

Hubli News: ಹುಬ್ಬಳ್ಳಿ: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿರುವ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕಾಲಿಗೆ ಗುಂಡೇಟು ತಿಂದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಗ್ರಾಮದ ಬಳಿ ನಡೆದಿದೆ.

ಅಪ್ರಾಪ್ತೆ ಗರ್ಭಿಣಿ ಮಾಡಿದ್ದ ಆರೋಪಿ ಸದ್ದಾಂನನ್ನು ಹಿಡಿಯಲು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು ಪೊಲೀಸರ ತಂಡ ರಚನೆ ಮಾಡಿದ್ದರು. ಈ ವೇಳೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂಗಮೇಶ ದಿಡಿಗನಾಳ ನೇತೃತ್ವದ ತಂಡಕ್ಕೆ ಆರೋಪಿ ಸುತಗಟ್ಟಿ ಗ್ರಾಮದ ಬಳಿ ಇರುವ ಮಾಹಿತಿ ಸಿಕ್ಕಿದೆ. ಆರೋಪಿ ಹಿಡಿಯಲು ಹೋಗಿದ್ದ ಸಂಗಮೇಶ ಹಾಗೂ ಮತ್ತೋರ್ವ ಪೊಲೀಸ್ ಪೇದೆ ಮೇಲೆ ಆರೋಪಿ ಸದ್ದಾಂ ಪೆನ್‌ನೈಫ್‌ನಿಂದ ದಾಳಿ ಮಾಡಲು ಯತ್ನಿಸಿದ್ದಾನೆ.

ಈ ವೇಳೆ ಇನ್‌ಸ್ಪೆಕ್ಟರ್ ಸಂಗಮೇಶ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಕೊನೆಗೆ ಆರೋಪಿಯನ್ನು ಕಂಟ್ರೋಲ್ ಮಾಡಲು ಯತ್ನಿಸಿದ ವೇಳೆ ಆರೋಪಿ ಸದ್ದಾಂ ಮತ್ತೆ ಚಾಕುವಿನಿಂದ ಇನ್‌ಸ್ಪೆಕ್ಟರ್ ಮಂಡಿ ಮತ್ತು ಬೆನ್ನಿಗೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಸಂಗಮೇಶ ಅವರು ಆರೋಪಿ ಎಡಗಾಲಿಗೆ ಗುಂಡು ಹಾರಿಸಿದ್ದಾರೆ.

ಸದ್ಯ ಆರೋಪಿ ಸದ್ದಾಂಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸರ ಮೇಲೆ ದಾಳಿ ಮಾಡಿದ ಮತ್ತೊಂದು ಪ್ರಕರಣವನ್ನು ಆರೋಪಿ ವಿರುದ್ಧ ದಾಖಲಿಸುವ ಬಗ್ಗೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಮಾಹಿತಿ ನೀಡಿದ್ದಾರೆ.

ನಾನು ಗೆದ್ದರೆ ರೈತರಿಗೆ ನೀರು ತರುವೆ: ರಾಜುಗೌಡ ಭರವಸೆ

ಪ್ರಜ್ವಲ್ ರೇವಣ್ಣ ದುಬೈ ಬಿಟ್ಟು ಇನ್ನು ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

ರಾಯ್ ಬರೇಲಿಯಲ್ಲಿ ರಾಮಪತ್ರ ಸಲ್ಲಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

- Advertisement -

Latest Posts

Don't Miss