Political news: ಧಾರವಾಡ: ಶಾಸಕ ಅರವಿಂದ್ ಬೆಲ್ಲದ್, ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದು, ಗ್ಯಾರಂಟಿಗಳ ಆಸೆ ತೋರಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ, ಮಸೀದಿಗಳ ಸೌಂಡ್ ಹೆಚ್ಚಾಗಿದೆ ಎಂದಿದ್ದಾರೆ.
ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ಮತದಾರರಿಗೆ ಕೃತಜ್ಞತಾ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಬೆಲ್ಲದ್, ಕಾಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳೂ ಕಳಿಯಲಿಲ್ಲ. ಆಗಲೇ ರಾಜ್ಯದಲ್ಲಿ ಕಳ್ಳತನ, ದರೋಡೆ, ನಡೆಯೋಕ್ಕೆ ಶುರುವಾಗಿದೆ. ಈ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಏನಾಗುತ್ತಿದೆ ಎಂದು ಜನರಿಗೆ ಗೊತ್ತಾಗುತ್ತಿದೆ ಎಂದಿದ್ದಾರೆ.
ಇನ್ನು ಅಮೃತ್ ದೇಸಾಯಿ ಸೋಲಿನ ಬಗ್ಗೆ ಮಾತನಾಡಿದ ಬೆಲ್ಲದ್, ಅಮೃತ್ ದೇಸಾಯಿ ಮೊದಲ ಬಾರಿ ಸೋತಿಲ್ಲ. ಸೋತರೂ ಅವರಿಗೆ ಮುಂದೆ ಗೆಲ್ಲುವುದು ಹೇಗೆ ಎಂಬುದು ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ಅವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸವಿದೆ. ಕಾಂಗ್ರೆಸ್‌ನ ಸುಳ್ಳು ಗ್ಯಾರಂಟಿಗಳನ್ನು ಹೇಳಿ ಗೆಲುವು ಸಾಧಿಸಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ವಾತಾವರಣ ಬದಲಾಗಲಿದೆ ಎಂದು ಬೆಲ್ಲದ್ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ಇಂದಿನಿಂದ ಕಾನೂನು ಸಹಾಯವಾಣಿ- ತೇಜಸ್ವಿ ಸೂರ್ಯ