ಸೋಮವಾರ ದೆಹಲಿಯಲ್ಲಿ ಪ್ರಥಮ ಡಿಟಿಸಿ ಎಲೆಕ್ಟ್ರಿಕ್ ಬಸ್‌ಗೆ ಅರವಿಂದ್ ಕೇಜ್ರಿವಾಲ್ ಚಾಲನೆಯನ್ನು ನೀಡಿದರು.
300 ಎಲೆಕ್ಟ್ರಿಕ್ ಬಸ್‌ಗಳನ್ನು ಶೀಘ್ರದಲ್ಲೇ ಡಿಟಿಸಿಯ ಫ್ಲೀಟ್‌ಗೆ ಸೇರಿಸಲಾಗುವುದೆಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ, ಅರವಿಂದ್ ಕೇಜ್ರಿವಾಲ್ ಜೊತೆಗೆ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಸಹ ಚಾಲನೆಯನ್ನು ನೀಡಿದರು. ಇ-44 ಸಂಖ್ಯೆಯ, 12 ಮೀಟರ್ ಉದ್ದ÷ದ, ಲೋ ಫ್ಲೋರ್ ಎಸಿ ಬಸ್ ಸೋಮವಾರ ಈಪಿ ಡಿಪೋ ಮತ್ತು ಪ್ರಗತಿ ಮೈದಾನದ ನಡುವೆ ಸಂಚರಿಸಿತು. ಇದು ಸಿಸಿಟಿವಿ ಮತ್ತು ಪ್ಯಾನಿಕ್ ಬಟನ್‌ನಂತಹ ಇತರ ಸೌಲಭ್ಯಗಳ ಜೊತೆಗೆ ಅಂಗವಿಕಲರಿಗಾಗಿ ರಾಂಪ್ ಅನ್ನು ಹೊಂದಿದೆ.
ಪ್ರಮುಖವಾಗಿ ಇದು ದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಥಮ ಎಲೆಕ್ಟ್ರಿಕ್ ಬಸ್ ಆಗಿದೆ. ದೆಹಲಿಯಲ್ಲಿ ಸಾರಿಗೆ ಕ್ಷೇತ್ರದಲ್ಲಿ ಇದು ಹೊಸ ಯುಗಕ್ಕೆ ನಾಂದಿಯಾಗಿದೆ. ಜೊತೆಗೆ ನಿಮ್ಮ ವಾಹನವನ್ನು ಎಲೆಕ್ಟ್ರಿಕ್ ಬದಲಾಯಿಸುವ ಮೂಲಕ ಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ನೀವು ಸಹ ಕೊಡುಗೆ ನೀಡಬೇಕು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿ ಪ್ರಥಮ ಡಿಟಿಸಿ ಎಲೆಕ್ಟ್ರಿಕ್ ಬಸ್‌ಗೆ ಅರವಿಂದ್ ಕೇಜ್ರಿವಾಲ್ ಚಾಲನೆ
- Advertisement -
- Advertisement -