Political News: ಮದ್ಯನೀತಿ ಪ್ರಕರಣದಡಿ ಜೈಲು ಸೇರಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಅವರ ಪತ್ನಿ, ಸ್ವತಂತ್ರ ಹೋರಾಟಗಾರರಿಗೆ ಹೋಲಿಸಿದ್ದಾರೆ. ಹಿಂದಿನ ಜನ್ಮದಲ್ಲಿ ಅರವಿಂದ್ ಕೇಜ್ರಿವಾಾಲ್ ಅವರು ಸ್ವಾತಂತ್ರ ಹೋರಾಟಗಾರರಾಗಿದ್ದರು ಎಂದೆನ್ನಿಸುತ್ತದೆ. ಇನ್ನುವರೆಗೂ ಅವರು ಹೋರಾಡುತ್ತಲೇ ಇದ್ದಾರೆ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ದೆಹಲಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ್ದು, ಕೇಜ್ರಿವಾಲ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹೇಳುತ್ತಿದೆ. ಅವರ್ಯಾಕೆ ರಾಜೀನಾಮೆ ನೀಡಬೇಕು..? ಬಹುಶಃ ಅವರು ಕಳೆದ ಜನ್ಮದಲ್ಲಿ ಸ್ವಾತಂತ್ರ ಹೋರಾಟಗಾರರಾಗಿರಬೇಕು. ಹೋರಾಟದ ವೇಳೆ ಹುತಾತ್ಮರಾಗಿ ಅವರು ಇಂದಿಗೂ ಹೋರಾಟ ಮಾಡುತ್ತಿದ್ದಾರೆ ಎಂದಿದ್ದಾರೆ.
ಅಲ್ಲದೇ ಬಂಧನವಾಗಿರುವ ಕೇಜ್ರಿವಾಲ್ 6 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಇಡೀ ದೇಶದಲ್ಲಿ 24 ಗಂಟೆ ಕರೆಂಟ್, ಬಡವರಿಗೆ ಉಚಿತ ವಿದ್ಯುತ್, ಪ್ರತೀ ಊರಲ್ಲಿ ಒಳ್ಳೆಯ ಶಾಲೆ, ಅತ್ಯುತ್ತಮ ಸರ್ಕಾರಿ ಆಸ್ಪತ್ರೆ ನಿರ್ಮಿಸಿ, ಬಡವರಿಗೆ ಉಚಿತ ಚಿಕಿತ್ಸೆ, ರೈತರಿಗೆ ಸ್ವಾಮಿನಾಥನ್ ವರದಿ ಅನುಷ್ಠಾನ, ದೇಹಲಿ ರಾಜ್ಯದ ಅಸ್ತಿತ್ವ ನೀಡುವ ಘೋಷಣೆ ಮಾಡಿದ್ದಾರೆಂದು ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ.
ಜೋಶಿಯವರನ್ನ ಸೋಲಿಸುವುದೇ ನಮ್ಮ ಗುರಿ. ಅವರನ್ನು ಎದುರಿಸಲು ನಾನೊಬ್ಬನೇ ಮಠಾಧೀಶ ಸಾಕು: ದಿಂಗಾಲೇಶ್ವರ ಶ್ರೀ
ಕರ್ಕಶ ಶಬ್ದ ಮಾಡುವ ಬೈಕ್ ಗಳಿಗೆ ಬಿಸಿ: ಸ್ಯಾಲೆನ್ಸರ್ ವಶಕ್ಕೆ ಪಡೆದ ಪೊಲೀಸರು