Saturday, September 14, 2024

Latest Posts

ಇಂಥ ಸ್ಥಳದಿಂದ ಎಷ್ಟು ದೂರವಿರುತ್ತೀರೋ ಅಷ್ಟು ಉತ್ತಮ ಅಂತಾರೆ ಚಾಣಕ್ಯರು

- Advertisement -

Spiritual: ನಾವು ಜೀವಿಸುವ ಸ್ಥಳ, ನಮ್ಮ ಸುತ್ತಮುತ್ತಲಿನ ಜನ, ಸಂಬಂಧಿಕರು ಒಳ್ಳೆಯ ಗುಣ ಹೊಂದಿದವರಾಗಿದ್ದರೆ, ಅವರೊಂದಿಗೆ ನೆಮ್ಮದಿಯಾಗಿ ಜೀವಿಸಬಹುದು. ನಾವು ಇರುವ ಜಾಗ ಸ್ವಚ್ಛವಾಗಿ, ಸೇಫ್ ಆಗಿರುವ ಜಾಗವಾಗಿದ್ದರೆ, ಆ ಜಾಗದಲ್ಲೂ ನಾವು ನೆಮ್ಮದಿಯಾಗಿ ಇರಬಹುದು. ಅಲ್ಲದೇ, ನಾವಿರುವ ಪ್ರದೇಶದಲ್ಲಿ ಕೆಲಸ ಕಾರ್ಯಗಳಿಗೆ ಏನೂ ಕೊರತೆ ಇಲ್ಲವೆಂದಲ್ಲಿ ಕೂಡ ನಾವು ಖುಷಿಯಿಂದ ಜೀವಿಸಬಹುದು. ಆದರೆ ನಿಮಗೆ ಇದ್ಯಾವುದರ ಸೌಕರ್ಯವೂ ಇಲ್ಲದೇ, ಸುತ್ತಮುತ್ತಲೂ ಕೆಟ್ಟ ಜನಗಳೇ ತುಂಬಿದ್ದರೆ, ಅಂಥ ಜಾಗದಿಂದ ಇಂದೇ ಹೊರಟುಬಿಡಿ ಎಂದಿದ್ದಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ವಿದ್ಯೆ ಕಲಿಯಲು ಸಾಧ್ಯವಿಲ್ಲದ ಜಾಗ. ಯಾವ ಸ್ಥಳದಲ್ಲಿ ಉತ್ತಮ ಶಾಲೆ ಇಲ್ಲ. ಅಥವಾ ಶಾಲೆಯಲ್ಲಿ ಉತ್ತಮ ಶಿಕ್ಷಣ ಕಲಿಯುವ ಅವಕಾಶವಿಲ್ಲವೋ, ಅಂಥ ಜಾಗದಲ್ಲಿ ನಾವೆಂದಿಗೂ ವಾಸಿಸಬಾರದು. ಇಂದಿನ ಕಾಲದಲ್ಲಿ ಇಂಥ ಶಾಲೆಗಳು ಅದೆಷ್ಟೋ ಇದೆ. ಹೇಳುವುದಕ್ಕಷ್ಟೇ ಶಾಲೆಯಂತಿದ್ದು, ಅಲ್ಲಿನ ಮಕ್ಕಳಿಗೆ ವಿದ್ಯಾಭ್ಯಾಸದ ಬಗ್ಗೆ ತಿಳುವಳಿಕೆಯೇ ಇರುವುದಿಲ್ಲ. ಅವರು ನೋಡಿ ಪರೀಕ್ಷೆ ಬರೆದು, ಮುಂದೆ ಹೋಗಿರುತ್ತಾರೆ. ಅಂಥ ಮಕ್ಕಳು ಭವಿಷ್ಯದಲ್ಲೆಂದೂ ಉದ್ಧಾರವಾಗುವುದಿಲ್ಲ. ಹಾಗಾಗಿ ಚಾಣಕ್ಯರು ವಿದ್ಯೆ ಕಲಿಯಲು ಸಾಧ್ಯವಾಗದ ಸ್ಥಳದಲ್ಲಿ ಎಂದಿಗೂ ವಾಸಿಸಬಾರದು ಎಂದಿದ್ದಾರೆ.

ಉತ್ತಮ ಕೆಲಸ ಸಿಗದ ಜಾಗ. ನಿಮ್ಮ ಅರ್ಹತೆಗೆ ತಕ್ಕಂತೆ, ಕೆಲಸ ಮಾಡಲು ಆಗದ, ಅಥವಾ ಕೆಲಸವೇ ಸಿಗುುದಿಲ್ಲ ಎಂಬ ಸ್ಥಳದಲ್ಲಿ ವಾಸಿಸಬಾರದು ಅಂತಾರೆ ಚಾಣಕ್ಯರು. ನಿಮ್ಮ ಅರ್ಹತೆಗೆ ತಕ್ಕ ಕೆಲಸ ಸಿಗದೇ, ಮಾಮೂಲಿ ಕೆಲಸ ಮಾಡಿದರೆ, ನಿಮಗೆ ಎಲ್ಲಿಯೂ ಬೆಲೆ ಸಿಗುವುದಿಲ್ಲ. ಹಾಗಾಗಿ ಉತ್ತಮ ಕೆಲಸ ಮಾಡಲು ಅವಕಾಶವೇ ಸಿಗದ ಜಾಗದಲ್ಲಿ ಎಂದಿಗೂ ವಾಸಿಸಬಾರದು ಅಂತಾರೆ ಚಾಣಕ್ಯರು.

ನಿಮಗೆ ಗೌರವ ಸಿಗದ ಜಾಗ. ಯಾವ ಜಾಗದಲ್ಲಿ ನಿಮಗೆ ಗೌರವ ಸಿಗುವುದಿಲ್ಲವೋ, ಅಂಥ ಜಾಗದಲ್ಲಿ ನೀವು ವಾಸಿಸಬಾರದು ಅಂತಾರೆ ಚಾಣಕ್ಯರು. ಅದು ಮನೆಯೇ ಆಗಲಿ, ಸಂಬಂಧಿಕರ ಮನೆಯೇ ಆಗಲಿ ಅಥವಾ ಕೆಲಸ ಮಾಡುವ ಸ್ಥಳವೇ ಆಗಲಿ. ನಿಮ್ಮ ಕೆಲಸವನ್ನು ನೀವು ಅಚ್ಚುಕಟ್ಟಾಗಿ ಮಾಡಿದರೂ, ನೀವು ಮನೆಯಲ್ಲಿ ಉತ್ತಮ ರೀತಿಯಲ್ಲಿ ಇದ್ದರೂ, ನಿಮಗೆ ಆ ಸ್ಥಳದಲ್ಲಿ ಗೌರವ ಸಿಗಲಿಲ್ಲವೆಂದಲ್ಲಿ, ಅಂಥ ಮನೆ ಬಿಟ್ಟು ಹೋಗುವುದು ಉತ್ತಮ.

ದಯೆ ಇಲ್ಲದ ಜಾಗ. ನೀವು ವಾಸಿುವ ಜಾಗ, ನೀವು ಕೆಲಸ ಮಾಡುವ ಜಾಗದಲ್ಲಿ, ಜನರಿಗೆ ಕರುಣೆಯೇ ಇಲ್ಲ. ಅವರು ಇನ್ನೊಬ್ಬರ ನೋವಿಗೆ ಸ್ಪಂದಿಸುವುದಿಲ್ಲವೆಂದಲ್ಲಿ, ಅಂಥ ಜಾಗದಲ್ಲಿ ಇರಬಾರದು. ಮತ್ತು ಕರುಣೆ ಇಲ್ಲದವರ ಸಂಗವನ್ನೂ ಮಾಡಬಾರದು.

ದುಷ್ಚಟ ತುಂಬಿರುವ ಜನರಿರುವ ಜಾಗ: ಅಂದರೆ, ನಿಮ್ಮ ಸ್ನೇಹಿತರಿಗೆ ದುಷ್ಚಟವಿದ್ದರೆ, ಅಂಥವರಿಂದ ದೂರ ಉಳಿಯಬೇಕು. ಇಲ್ಲದಿದ್ದರೆ, ಕೆಲ ದಿನಗಳಲ್ಲಿ ನಿಮಗೂ ಆ ದುಷ್ಚಟ ಹತ್ತಿಕೊಳ್ಳುತ್ತದೆ. ನೀವು ಒಳ್ಳೆಯರಾಾಗಿದ್ದರೂ, ನಿಮ್ಮನ್ನು ಕೆಟ್ಟ ದಾರಿಗೆ ಆ ದುಷ್ಚಟ ಕೊಂಡೊಯ್ಯುತ್ತದೆ. ಹಾಗಾಗಿ ದುಷ್ಚಟವಿರುವವರಿಂದ ದೂರವಿರಬೇಕು ಅಂತಾರೆ ಚಾಣಕ್ಯರು.

- Advertisement -

Latest Posts

Don't Miss