Tuesday, July 22, 2025

Latest Posts

ಶ್ರದ್ಧಾ ನೋಡಿದ ತಕ್ಷಣ ಅಯ್ಯೋ ಅಂದ್ರು ಪ್ರಧಾನಿಮೋದಿ..!

- Advertisement -

Ayyio Shraddha

ಬೆಂಗಳೂರು(ಫೆ.13): ಬೆಂಗಳೂರಿನ ಏರ್ ಇಂಡಿಯಾ ಶೋಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು, 5 ದಿನಗಳ ಕಾಲ ನಡೆಯಲಿರುವ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಇಂದಿನಿಂದ ಯಲಹಂಕದಲ್ಲಿ ಆಗಸದಲ್ಲಿ ಲೋಹದ ಹಕ್ಕಿಗಳು ಹಾರಾರುತ್ತವೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ಗಣ್ಯರನ್ನು ಭೇಟಿ ಮಾಡಿ ಭೋಜನವನ್ನು ಸವಿದರು.

ಪ್ರಧಾನಿ ಭೇಟಿ ವೇಳೆ, ನಟ ಯಶ್, ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ, ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ, ಹೊಂಬಾಳೆ ಫಿಲ್ಮ್ಸ್​​ನ ವಿಜಯ್​ ಕಿರಗಂದೂರು ಅವರನ್ನು ಭೇಟಿ ಆಗಿದ್ದಾರೆ. ಇವರ ಜತೆ ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ ಕೂಡ ಇದ್ದರು. ಪ್ರಧಾನಿ ಮೋದಿ ಜೊತೆ ದಿಗ್ಗಜರು ಸಮಯ ಕಳೆದರು.

ಇನ್ನು, ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ಆ್ಯಕ್ಟಿವ್ ಆಗಿರುವ ಶ್ರದ್ಧಾ ಅವರು ಮೋದಿ ಭೇಟಿ ಮಾಡಿದ ನಂತರ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಶ್ರದ್ಧಾ ಅವರು ಅಯ್ಯೋ ಶ್ರದ್ಧಾ ಎಂದು ಪರಿಚಿತರಿರುವ ಇವರು ಅನೇಕ ರೀಲ್ಸ್ ಮೂಲಕ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನ ಖುಷಿಯನ್ನು ವ್ಯಕ್ತಪಡಿಸುತ್ತಾ, ಮೋದಿ ಅವರನ್ನು ನೋಡಿದ ತಕ್ಷಣ ಮೋದಿ ಅವರು ಅಯ್ಯೋ ಅಂದ ಕರೆದರು, ಇದು ನನಗೆ ಖುಷಿ ನೀಡಿದೆ. ಇದಕ್ಕಿಂದ ಸಂತೋಷ ಮತ್ತೊಂದಿಲ್ಲ ಎಂದು ಬರೆದುಕೊಂಡಿದ್ದಾರೆ.

ಇವರು ಮೂಲತಃ ದಕ್ಷಣಕನ್ನಡದವರಾಗಿದ್ದು, ಓದಿದ್ದು ಎಂಜಿನಿಯರಿಂಗ್, ಐಟಿ ಕ್ಷೇತ್ರದಲ್ಲಿ ಕೆಲದ ಮಾಡುತ್ತಿದ್ದ ಇವರು ಆ ಕ್ಷೇತ್ರ ಬಿಟ್ಟು ಮಾಧ್ಯಮದ ಕಡೆ ಮನಸ್ಸು ಮಾಡಿ ನೆಟ್ಟಿಗರ ಮನಗೆದ್ದಿದ್ದಾರೆ. ಇದೀಗ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಖುಷಿಯಲ್ಲಿದ್ದಾರೆ ಅಯ್ಯೋ ಶ್ರದ್ಧಾ!.

- Advertisement -

Latest Posts

Don't Miss