ಕರಸೇವಕ ಶ್ರೀಕಾಂತ್‌ ಪೂಜಾರಿ ಬಂಧನ ದೊಡ್ಡ ಸುದ್ದಿಯಾಗುತ್ತಿದ್ದಂತೆ ಎಡವಟ್ಟು ಮಾಡಿದ ಪೊಲೀಸರು

Hubballi News: ಹುಬ್ಬಳ್ಳಿ : ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣ ಇಡೀ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ. ಹುಬ್ಬಳ್ಳಿ-ಧಾರವಾಡ ಪೊಲೀಸರ ಬಂಧಿತ ಆರೋಪಿ ಶ್ರೀಕಾಂತ್ ಪೂಜಾರಿ ಕ್ರೈಂ ರೆಕಾರ್ಡ್ ಬಿಡುಗಡೆ ಮಾಡಿದ್ದಾರೆ.

ಶ್ರೀಕಾಂತ್ ಪೂಜಾರಿ ಮೇಲೆ ದಾಖಲಾದ ಪ್ರಕರಣಗಳ ವಿವರ ಬಿಡುಗಡೆ ಮಾಡಿದ ಪೊಲೀಸರು. 1992 ರಲ್ಲಿ ಶ್ರೀಕಾಂತ್ ಪೂಜಾರಿ ಮೇಲೆ ರಾಮಜನ್ಮಭೂಮಿ ಹೋರಾಟದ ವೇಳೆ ನಡೆದ ಗಲಭೆ ಕೇಸ್‌ ದಾಖಲಿಸಿದ್ದ ಪೊಲೀಸರು. ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಶ್ರೀಕಾಂತ್. ಇದಾದ ಬಳಿಕ 1994 ರಿಂದ 2014 ವರೆಗೆ ಒಟ್ಟು 12 ಪ್ರಕರಣ ದಾಖಲಿಸಿರುವ ಪೊಲೀಸರು. ಇದರಲ್ಲಿ ಮೂರು ದೊಂಬಿ ಗಲಭೆ ಕೇಸ್, 8 ಅಬಕಾರಿ ಕಾಯ್ದೆಯಡಿ ಸಾರಾಯಿ ಮಾರಾಟ ಪ್ರಕರಣ. ಒಂದು ಮಟ್ಕಾ ಜೂಜಾಟ ಪ್ರಕರಣ ಇವೆಲ್ಲವನ್ನೂ ಈಗ ಬಿಡುಗಡೆ ಮಾಡಿದ್ದಾರೆ.

ಇನ್ನು ಪೊಲೀಸರ ದಾಖಲೆ ಬಿಡುಗಡೆ ಹಿಂದಿನ ಉದ್ದೇಶವೇನೂ..?ರಾಮಜನ್ಮಭೂಮಿ ಹೋರಾಟಗಾರರ ಬಂಧನದ ವಿಚಾರ ದೊಡ ಸುದಿಯಾಗುತಿದಂತೆ ಸರ್ಕಾರ ಅಲರ್ಟ್ ಆಗಿದೆ. ಪೊಲೀಸರು ಬಿಡುಗಡೆ ಮಾಡಿದ ಕೇಸ್ ಲಿಸ್ಟ್ ನಲ್ಲಿ ಮತ್ತೊಂದು ಟ್ವಿಸ್ಟ್ ಕಂಡಿದೆ.

ಶ್ರೀಕಾಂತ್ ಪೂಜಾರಿ ಬಂಧನ ದೀರ್ಘ ಕಾಲದ ಬಾಕಿ ಉಳಿಸಿಕೊಂಡ ಪ್ರಕರಣ ಎಂದಿದ್ದ ಪೊಲೀಸರು. ಬರೋಬ್ಬರಿ 31 ವರ್ಷದ ಹಿಂದಿನ ಪ್ರಕರಣದಲ್ಲಿ ಶ್ರೀಕಾಂತ್ ಬಂಧನವಾಗಿದೆ. ಆದ್ರೆ ಪೊಲೀಸರು ಶ್ರೀಕಾಂತ್ ಪೂಜಾರಿಯನ್ನು ಮೇಲಿಂದ ಮೇಲೆ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದರು. ಹಾಗಾಗಿ ಇದೀಗ ಮುಂಜಾಗ್ರತಾ ಕ್ರಮವಾಗಿ ಮೂರು ಬಾರಿಗೆ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ.

ಇನ್ನು 2004,2009 ಹಾಗು 2018 ರಲ್ಲೂ ಶ್ರೀಕಾಂತ್ ಪೂಜಾರಿಯನ್ನ ಠಾಣೆಗೆ ಕರೆಸಿ, ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಹಾಗಿದ್ದರೆ ಶ್ರೀಕಾಂತ್ ಮೇಲಿನ ರಾಮಜನ್ಮ ಭೂಮಿ ಹೋರಾಟದ ಪ್ರಕರಣ ಲಾಂಗ್ ಪೆಂಡಿಂಗ್ ಯಾಕಾಯ್ತು…? ಶ್ರೀಕಾಂತ್ ಪೂಜಾರಿ ಎಲ್ಲಿಯೂ ತಲೆಮರೆಸಿಕೊಂಡಿರಲ್ಲ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಇದು ಪೊಲೀಸರ ಕಾರ್ಯವೈಖರಿ ಮೇಲೆ ಸಂಶಯ ಹುಟ್ಟುವಂತೆ ಮಾಡಿದೆ.

2006 ರಲ್ಲಿಯೇ ಶ್ರೀಕಾಂತ್ ಪೂಜಾರಿ ಮೇಲಿನ ಕೇಸ್ LPC ಆಗಿತ್ತು. ಆದಾದ ಮೇಲೆ ಶ್ರೀಕಾಂತ್ ಪೂಜಾರಿ ಮೇಲಿಂದ ಮೇಲೆ ಠಾಣೆಗೆ ಪೊಲೀಸರ ಎದುರು ಹಾಜರಾಗಿದ್ದ. ಮೇಲಿಂದ ಮೇಲೆ ಶ್ರೀಕಾಂತ್ ಪೊಲೀಸ್ ಠಾಣೆಗೆ ಹಾಜರಾಗಿದ್ದರು ಯಾಕೆ ಈಗ ಆಗ್ ಶ್ರೀಕಾಂತ ನನ್ನ ಬಂಧಿಸಲಿಲ್ಲ. ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ತಲೆ ಎತ್ತುತ್ತಿರುವಾಗಲೇ ಯಾಕೆ ಬಂಧನ ಮಾಡಿದ ಪೊಲೀಸರ ವರ್ತನೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ ಅಧಿಕಾರಿ ಯಾರು? ಇಲ್ಲಿದೆ ಮಾಹಿತಿ

ಕರಸೇವಕನ ಬಂಧನ, ಹುಬ್ಬಳ್ಳಿಯಲ್ಲಿ ಬಿಜೆಪಿ VS ಕಾಂಗ್ರೆಸ್ ಹೋರಾಟ

ಹಿಂದೂ ರಾಷ್ಟ್ರ ಮಾಡೇ ಮಾಡ್ತೀವಿ ಗಂಡಸ್ತನ ಇದ್ರೆ ತಡಿರಿ: ಕಾಂಗ್ರೆಸ್‌ಗೆ ಮುತಾಲಿಕ್ ಸವಾಲ್

About The Author