ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಅವರ ವರ್ತನೆ ಈಗ ಎಲ್ಲರ ಗಮನ ಸೆಳೆದಿದೆ. ಕಿಚ್ಚನ ಖಡಕ್ ಕ್ಲಾಸ್ನ ನಂತರ ಅಶ್ವಿನಿ ಇದೀಗ ಸಂಪೂರ್ಣ ಸೈಲೆಂಟ್ ಮೋಡ್‌ಗೆ ಹೋಗಿದ್ದಾರೆ. ಮೊದಲು ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಿದ್ದ ಅಶ್ವಿನಿ, ಈಗ ಆರೋಪಗಳನ್ನು ನಗುತ್ತಾ ಸ್ವೀಕರಿಸುತ್ತಿದ್ದಾರೆ. ಈ ಬದಲಾವಣೆ ವೀಕ್ಷಕರಲ್ಲೂ ಕುತೂಹಲ ಹುಟ್ಟಿಸಿದೆ.
ನವೆಂಬರ್ 10ರ ಎಪಿಸೋಡ್‌ನಲ್ಲಿ ನಡೆದ “ಹಸಿ ಮೆಣಸು ಟಾಸ್ಕ್” ವೇಳೆ ಅನೇಕರು ಅಶ್ವಿನಿ ಗೌಡ ಅವರ ಹೆಸರನ್ನೇ ತೆಗೆದುಕೊಂಡರು. ಮೊದಲಿನಂತೆ ಅವರು ಆಕ್ರೋಶದಿಂದ ಪ್ರತಿಕ್ರಿಯಿಸದೆ, ಈ ಬಾರಿ ಮೌನವಾಗೇ ಇದ್ದರು. ಯಾರು ಏನೇ ಹೇಳಿದರೂ ನಗುತ್ತಾ ಕೇಳಿಸಿಕೊಂಡ ಅಶ್ವಿನಿ – ಇದು ಅವರಲ್ಲಿ ಕಂಡುಬರುತ್ತಿರುವ ಹೊಸ ಮುಖ.
ಅಶ್ವಿನಿ ಗೌಡಗೆ ಯಾವಾಗ್ಲೂ ಟಕ್ಕರ್ ಕೊಡೊ ಗಿಲ್ಲಿಯೇ ಈ ಬದಲಾವಣೆಯನ್ನ ಗಮನಿಸಿದ್ದಾರೆ, “ಅಶ್ವಿನಿ ಮೇಡಂ ಈಗ ಸೈಲೆಂಟ್ ಆಗಿದ್ದಾರೆ, ಯಾವುದಕ್ಕೂ ಪ್ರತಿಕ್ರಿಯೆ ಕೊಡ್ತಿಲ್ಲ, ಹೀಗಾಗಿ ಎಲ್ಲರೂ ಅವರ ಹೆಸರನ್ನೇ ತೆಗೆದುಕೊಳ್ತಿದ್ದಾರೆ” ಎಂದು ಗಿಲ್ಲಿ ಹೇಳಿದ್ದು ಗಮನಾರ್ಹ.ಇದು ವೀಕ್ಷಕರಿಗಷ್ಟೇ ಅಲ್ಲ, ಮನೆಯವರಿಗೂ ಹೊಸ ಶಾಕ್ ಕೊಟ್ಟಿದೆ.
ಕಳೆದ ವಾರ ಅಶ್ವಿನಿ ಗೌಡ ಅವರಿಗೆ ಕಿಚ್ಚನ ಕಠಿಣ ಪಾಠ ಸಿಕ್ಕಿತ್ತು. ಒಂದು ಸಂಪೂರ್ಣ ಎಪಿಸೋಡ್ ಅವರ ವರ್ತನೆ ಕುರಿತು ನಡೆದಿತ್ತು. ಇದೇ ಕಾರಣಕ್ಕೆ ಅವರು ಈಗ ಮೌನವನ್ನು ಆಯ್ಕೆ ಮಾಡಿಕೊಂಡ್ರಾ ಅಥವಾ ಹೊಸ ತಂತ್ರ ರೂಪಿಸ್ತಿದ್ದಾರಾ ? ವೀಕ್ಷಕರು ಈಗ ಅದೇ ಪ್ರಶ್ನೆ ಕೇಳುತ್ತಿದ್ದಾರೆ. “ಅಶ್ವಿನಿ ಗೌಡ ಬದಲಾಗಿದ್ದಾರಾ ?”ಬಿಗ್ ಬಾಸ್ ಮನೆಯಲ್ಲಿ ಮುಂದೇನಾಗುತ್ತೆ ಕಾದು ನೋಡಬೇಕಾಗಿದೆ…
ಗಾಯತ್ರಿ ಗುಬ್ಬಿ

