Tuesday, September 16, 2025

Latest Posts

ಏಷ್ಯಾ ಕಪ್‌ T20 ಶುಭಾರಂಭ UAE ಸವಾಲಿಗೆ ಇಂಡಿಯಾ ಸಿದ್ಧ!

- Advertisement -

ಬಹು ನಿರೀಕ್ಷಿತ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ, ಹಾಂಗ್ ಕಾಂಗ್‌ ತಂಡವನ್ನು ಮಣಿಸಿ ಜಯಭೇರಿ ಬಾರಿಸಿದೆ. ಬುಧವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಆತಿಥೇಯ ಯುಎಇ ಮುಖಾಮುಖಿಯಾಗಲಿವೆ. ಈ ಮೂಲಕ ಟೀಮ್ ಇಂಡಿಯಾ ತನ್ನ ಅಭಿಯಾನಕ್ಕೆ ಚಾಲನೆ ನೀಡಲಿದೆ. ಸೂರ್ಯಕುಮಾರ್‌ ಯಾದವ್ ನೇತೃತ್ವದ ತಂಡ, ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡುವ ಗುರಿಯಲ್ಲಿದೆ.

ಇದುವರೆಗೆ ಭಾರತ ಮತ್ತು ಯುಎಇ ನಡುವೆ ಕೇವಲ ಒಂದೇ ಟಿ20 ಅಂತರರಾಷ್ಟ್ರೀಯ ಪಂದ್ಯ ನಡೆದಿದ್ದು, 2016ರ ಏಷ್ಯಾ ಕಪ್‌ನಲ್ಲಿ ಭಾರತ 9 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದಿತ್ತು. ಪ್ರಸ್ತುತ ಪಿಚ್‌ನಲ್ಲಿ ಟಾಸ್‌ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ಆಸಕ್ತಿ ತೋರಬಹುದು. ಇಲ್ಲಿ ನಡೆದ 93 ಪಂದ್ಯಗಳಲ್ಲಿ 47 ಬಾರಿ ಎರಡನೇ ಬಾರಿ ಬ್ಯಾಟ್ ಮಾಡಿದ ತಂಡವೇ ಗೆದ್ದಿದೆ. ಈ ಮೈದಾನದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಅನುಭವವನ್ನೂ ಹೊಂದಿರುವುದರಿಂದ ಅದು ತಂಡಕ್ಕೆ ಸಹಾಯವಾಗಬಹುದು. ಪಿಚ್‌ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮಾನವಾಗಿ ಅನುಕೂಲಕರವಾಗಿದ್ದು, ವಿಶೇಷವಾಗಿ ಸ್ಪಿನ್‌ ಬೌಲರ್‌ಗಳು ನಿರ್ಣಾಯಕ ಪಾತ್ರವಹಿಸುವ ನಿರೀಕ್ಷೆ ಇದೆ.

ಟೀಮ್ ಇಂಡಿಯಾದ ಆರಂಭಿಕರ ಕುರಿತ ಕುತೂಹಲ ಹೆಚ್ಚಾಗಿದೆ. ವಿಶ್ವದ ನಂಬರ್ 1 ಬ್ಯಾಟರ್ ಅಭಿಷೇಕ್‌ ಶರ್ಮಾ ಆರಂಭಿಕರಾಗಿ ಕಾಣಿಸಿಕೊಳ್ಳುವುದು ಖಚಿತ. ಅವರ ಜೊತೆಗೆ ಸಂಜು ಸ್ಯಾಮ್ಸನ್ ಅಥವಾ ಶುಭಮನ್‌ ಗಿಲ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ. ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಗಿಲ್ ಹೆಚ್ಚು ಸಾಧ್ಯತೆಯಲ್ಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಹಾಗೂ ನಾಲ್ಕನೇ ಸ್ಥಾನದಲ್ಲಿ ಸೂರ್ಯಕುಮಾರ್‌ ಯಾದವ್ ಆಡಲಿದ್ದಾರೆ. ಇವರಿಬ್ಬರೂ ತಂಡದ ಅವಶ್ಯಕತೆಗೆ ತಕ್ಕಂತೆ ತಂತ್ರಬದ್ಧವಾಗಿ ಆಟವಾಡಬಲ್ಲರು. ಆಲ್‌ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ತಂಡದಲ್ಲಿ ಅಂಗಳಕ್ಕಿಳಿಯಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಮತ್ತು ಕುಲ್‌ದೀಪ್ ಯಾದವ್ ಬೌಲಿಂಗ್ ಹೊಣೆ ಹೊರುವ ನಿರೀಕ್ಷೆಯಿದೆ. ವೇಗದ ದಾಳಿಯನ್ನು ಅರ್ಷದೀಪ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss