Sunday, September 8, 2024

Latest Posts

ಸೆ.23ರಿಂದ ಏಷ್ಯಾನ್ ಗೇಮ್ಸ್ : ವೇಳಾಪಟ್ಟಿ ಕುರಿತು ಭಾರತ ಅಸಮಾಧಾನ

- Advertisement -

ಕುವೇಟ್/ಬೀಜಿಂಗ್: ಮುಂದೂಡಲ್ಪಟ್ಟಿದ್ದ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಸೆ.23ರಿಂದ ಅ.8ರವರೆಗೆ ನಡೆಯಲಿದೆ ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಘೋಷಿಸಿದೆ.

19ನೇ ಆವೃತ್ತಿಯ ಏಷ್ಯಾನ್ ಗೇಮ್ಸ್ ಸೆ.10ರಿಂದ ಸೆ.25ರವರೆಗೆ ನಡೆಯಬೇಕಿತ್ತು. ಆದರೆ ಮೆ6ರ ನಂತರ ಚೀನಾದಲ್ಲಿ ಕೋವಿಡ್ ಹೆಚ್ಚಿದ್ದರಿಂದ ಕ್ರೀಡಾಕೂಟವನ್ನು ಮುಂದೂಡಲಾಯಿತು.

ಟಾಸ್ಕ್ ಫೋರ್ಸ್ ಕಳೆದ 2 ತಿಂಗಳಿನಿಂದ ಚೀನಾ ಒಲಿಂಪಿಕ್ ಸಮಿತಿ ಮತ್ತು ಹ್ಯಾಂಗ್ಜು ಏಷ್ಯಾನ್ ಗೇಮ್ಸ್ ಸಮಿತಿ ಜೊತೆ ಕ್ರೀಡಾಕೂಟವನ್ನು ನಡೆಸುವ ಹಲವಾರು ಸುತ್ತಿನ ಚರ್ಚೆ ನಡೆಸಿತು. ಶಿಫಾರಸು ಮಾಡಿರುವ ದಿನಾಂಕವನ್ನು  ಸಿಒಎ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಹೇಳಿದೆ.

ಈಗ ನಿಗದಿಪಡಿಸಿರುವ ಏಷ್ಯಾನ್ ಕ್ರೀಡಾಕೂಟದಂದು ಬೇರೆ ಯಾವ ದೊಡ್ಡ ಮಟ್ಟದ ಕ್ರೀಡಾಕೂಟ ನಡೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

2023ರ  ವಿಶ್ವ ರೆಸ್ಲಿಂಗ್ ಚಾಂಪಿಯನ್‍ಶಿಪ್ ಅರ್ಹತಾ ಸುತ್ತು ಸೆ.16ರಿಂದ ಸೆ.24ರವರೆಗೆ ನಡೆಯಲಿದ್ದು ಒಂದು ದಿನ ಹೆಚ್ಚು ಕಡಿಮೆಯಾಗಿದೆ ಎಂದಿದೆ.

ಕುಸ್ತಿಪಟುಗಳು ಚಿಕ್ಕ ಸಮಯದಲ್ಲಿ ರ್ಸಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಭಾರತದ ಕುಸ್ತಿಪಟುಗಳು ಕೂಡ ವಿಶ್ರಾಂತಿ ಪಡೆಯದೇ ರಷ್ಯಾದಿಂದ ನೇರವಾಗಿ ಚೀನಾಕ್ಕೆ ಬರಬೇಕು.

ಏಷ್ಯಾನ್ ಗೇಮ್ಸ್ ವೇಳಾ ಪಟ್ಟಿಗೆ ಭಾರತ ವಿರೋಧ 

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪರಿಷ್ಕೃತ ವೇಳಾಪಟ್ಟಿಗೆ ರೆಸ್ಲಿಂಗ್ ಫೆಡರೇಶ್‍ನ್ ಆಪ್ ಇಂಡಿಯಾ ವಿರೋಧ ವ್ಯಕ್ತಪಡಿಸಿದೆ. ಒಲಿಂಪಿಕ್‍ಗೆ ಅರ್ಹತೆ ಪಡೆಯಲು ವಿಶ್ವ ಚಾಂಪಿಯನ್‍ಶಿಪ್ ಒಂದೇ ದಾರಿ. ಕೂಟಗಳ ನಡುವೆ ಅಂತರ ಇರಬೇಕು. ಅದು ಹೇಗೆ ವಿಶ್ವ ಕ್ರೀಡಾ ಮಂಡಳಿ ಇದಕ್ಕೆ ಒಪ್ಪಿಕೊಂಡಿದೆ ಎಂದು ರೆಸ್ಲಿಂಗ್ ಫೆಡರೇಶನ್‍ನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಪ್ರಶ್ನಿಸಿದ್ದಾರೆ.ಚೀನಾ ಒಲಿಂಪಿಕ್ ಸಮಿತಿಗೆ ಈ ಬಗ್ಗೆ ತಿಳಿಸುವುದಾಗಿ ಹೇಳಿದ್ದಾರೆ.

 

 

 

- Advertisement -

Latest Posts

Don't Miss