- Advertisement -
ಹೊಸದಿಲ್ಲಿ: ಕೊರೋನದಿಂದಾಗಿ ಮುಂದೂಡಲ್ಪಟ್ಟಿದ್ದ ಏಷ್ಯಾನ್ ಪ್ಯಾರಾ ಕ್ರೀಡಾಕೂಟ ಮುಂದಿನ ವರ್ಷ ಹ್ಯಾಂಗ್ಜುನಲಲಿ ನಡೆಯಲಿದೆ ಎಂದು ಕ್ರೀಡಾ ಆಯೋಜಕರು ಹೇಳಿದ್ದಾರೆ.
ಪ್ರತಿಷ್ಠಿತ ಕ್ರೀಡಾಕೂಟದ ಈ ವರ್ಷ ಅಕ್ಟೊಬರ್ 9ರಿಂದ 15ರವರೆಗೆ ನಡೆಯಬೇಕಿತ್ತು.
ಆದರೆ ಚೀನಾದಲ್ಲಿ ಕೊರೋನಾ ಹೆಚ್ಚಾದರಿಂದ ಕ್ರೀಡಾಕೂವನ್ನು ಮುಂದೂಡಲಾಯಿತು ಎಂದು ಏಷ್ಯನ್ ಪ್ಯಾರಾ ಒಲಿಂಪಿಕ್ಸ್ ಸಮಿತಿ ಹೇಳಿದೆ.
ಚೀನಾದ ರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಸ್ ಮತ್ತು ಸಂಘಟಕರ ಜೊತೆ ಮಾತುಕತೆ ನಂತರ ಈ ನಿರ್ಧಾರಕ್ಕೆ ಬರಲಾಯಿತೆಂದು ತಿಳಿದು ಬಂದಿದೆ.
2010ರ ನಂತರ ಚೀನಾ ಎರಡನೆ ಬಾರಿಗೆ ಏಷ್ಯಾನ ಪ್ಯಾರಾ ಗೇಮ್ಸ್ ಅನ್ನು ಆಯೋಜಿಸುತ್ತಿದೆ.
- Advertisement -