Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಸಿಎಲ್ ಪಿ ಸಭೆಯಲ್ಲಿ ಚರ್ಚೆ ನಡೆಸುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಅಜೆಂಡಾ ಇನ್ನೂ ಫಿಕ್ಸ್ ಆಗಿಲ್ಲ. ಸಿಎಲ್ ಪಿ ಸಭೆಯಲ್ಲಿ ಏನು ಚರ್ಚೆ ಆಗುತ್ತದೆ ಅದನ್ನ ನಾವು ಹೇಳುತ್ತೇವೆ. ಗಾಂಧಿ ಭಾರತ ಕಾರ್ಯಕ್ರಮ ಬಗ್ಗೆ ಚರ್ಚೆ ಆಗುತ್ತದೆ. ಸಹಜವಾಗಿಯೇ ಶಾಸಕರು ಏನೆಲ್ಲಾ ಮಾತನಾಡುಹುದು ಅದು ಅವಕಾಶ ಇರುತ್ತದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ನಾನು ಸಿಎಂ ಆಗಲಿಕ್ಕೆ ಯಾವುದೇ ಶಾಸಕರ ಬೆಂಬಲ ಬೇಡ ಎಂಬ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿರುವ ಸಂತೋಷ್ ಲಾಡ್, ಈ ಬಗ್ಗೆ ಡಿ ಕೆ ಶಿವಕುಮಾರ್ ಅವರನ್ನೇ ಕೇಳಿ. ಸಿಎಂ ಅಧಿಕಾರ ಹಂಚಿಕೆ ವಿಚಾರ ಸಿಎಂ ಅವರನ್ನೇ ಕೇಳಿ. ನನಗೆ ಕೇಳಿದರೆ ನಾನು ಏನು ಹೇಳಲಿ..? ಅವರು ಅವರ ಅಭಿಪ್ರಾಯ ಹೇಳಿದ್ದಾರೆ ಅದಕ್ಕೆ ನಾನು ಏನು ಹೇಳಬೇಕು..? ಎಂದು ಲಾಡ್ ಮರುಪ್ರಶ್ನಿಸಿದರು.
ನಕ್ಸಲ್ ಶರಣಾಗತಿ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಭವೀಕರಣ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಮಾತನಾಡಿರುವ ಸಂತೋಷ್ ಲಾಾಡ್, ನಕ್ಸಲ್ ರು ಸಿಎಂ ಮುಂದೆ ಶರಣಾಗತಿ ಆದ ಬಗ್ಗೆ ಆಗಲಿ, ನಕ್ಸಲರೇ ಶರಣಾಗತಿ ಆದ ಬಗ್ಗೆ ಮಾತನಾಡಿದಾರಾ ಅಂತಾ ಗೊತ್ತಿಲ್ಲ ಎಂದು ಲಾಡ್ ಹೇಳಿದ್ದಾರೆ.
ಅಂಬೇಡ್ಕರ್ ನ್ನ ಕಾಂಗ್ರೆಸ್ ನಡೆದುಕೊಂಡ ರೀತಿ ಸರಿಯಾಗಿರಲಿಲ್ಲ ಎಂಬ ಬಿಜೆಪಿ ಗಂಭೀರ ಆರೋಪ ವಿಚಾರದ ಬಗ್ಗೆ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು, ಅಂಬೇಡ್ಕರ್ ಮತ್ತು ನಮ್ಮ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಇತ್ತು. ಮೊದಲನೇ ಸಲ ಜವಾಹರಲಾಲ್ ನೆಹರು ಪಿಎಂ ಆದಾಗ ಕಾನೂನು ಸಚಿವರನ್ನಾಗಿ ಅಂಬೇಡ್ಕರ್ನ್ನ ಮಾಡಲಾಯಿತು. ಸಂವಿಧಾನ ಸಭಾಧ್ಯಕ್ಷರನ್ನ ಮಾಡಿದವರಲ್ಲಿ ಯಾರ ಪಾತ್ರ ಇದೆ..? ನೀವೆ ಉತ್ತರ ಕೊಡಿ. ನೀವು ಮೊದಲು ಬಿಜೆಪಿಯವರನ್ನ ಕೇಳಿ. ಹಿಂದು ಕೋಡಿಫೆಕೇಶನ್ ಬಿಲ್ ಅಂಬೇಡ್ಕರ್ ತಂದಾಗ ಪಾಸ್ ಮಾಡಿದವರು ಯಾರು..? ಯಾರ ಸಚಿ ಸಂಪುಟದಲ್ಲಿ ಅಂಬೇಡ್ಕರ್ ಇದ್ದರು ಗೊತ್ತಾ..? ಯಾರ ಸಚಿವ ಸಂಪುಟದಲ್ಲಿ ಬರೆದರು..? ಈ ಬಿಲ್ ಪಾಸ್ ಆಗದೇ ಇರುವಾಗ ಅಂಬೇಡ್ಕರ್ ರಾಜೀನಾಮೆ ಕೊಡುತ್ತಾರೆ.
ಎರಡನೇ ಹಂತದಲ್ಲಿ ಅದು ಲೋಕಸಭೆಯಲ್ಲಿ ಪಾಸ್ ಆಗುತ್ತದೆ. ಈ ಬಿಲ್ ಬಹಳ ಹಂತದಲ್ಲಿ ಪಾಸ್ ಆಗುತ್ತದೆ. ಇದನ್ನ ಮಾಡಿದವರು ಯಾರು ಮೊದಲು ಹೇಳಿ. ಆವಾಗ ಹಿಂದು ಕೊಡಿಫಿಕೇಷನ್ ಬಿಲ್ ಪಾಸ್ ಮಾಡುವಾಗ ಏನೆಲ್ಲಾ ಆಯಿತು ಗೊತ್ತಾ. ಅಂದು ಹಿಂದೂ ಪರ ಸಂಘಟನೆಗಳಾದ ಆರ್ ಎಸ್ ಎಸ್ ಸೇರಿದಂತೆ ಅನೇಕ ಸಂಘಟನೆಗಳು ಏನಂದ್ರು ಗೊತ್ತಾ. ಹಳೆಯದನ್ನ ಸ್ವಲ್ಪ ಬಿಜೆಪಿ ಅವರಿಗೆ ಕೇಳಿ. ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಮಾತಾನಾಡುತ್ತಾರೆ. ಬಿಜೆಪಿಯವರು ಅವರ ಒಂದು ಪೋಟೋ ಸಹ ಹಾಕಿಕೊಂಡಿಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.