Saturday, November 23, 2024

Latest Posts

ಪಕ್ಷದ ಚೌಕಟ್ಟನಲ್ಲಿ ಮಾತನಾಡಲು ರೇಣುಕಾಚಾರ್ಯಗೆ ಹೇಳುವೆ: ಜೋಶಿ

- Advertisement -

Hubballi News: ಹುಬ್ಬಳ್ಳಿ: ಮಾಜಿ ಶಾಸಕ ರೇಣುಕಾಚಾರ್ಯರಿಗೆ ನೋಟೀಸ್ ಕೊಟ್ಟ ವಿಚಾರದ ಬಗ್ಗೆ ಮಾತನಾಡಿದ ಕೇಂದ್ರ ಸಚಿವ, ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಪಕ್ಷದ ಚೌಕಟ್ಟನಲ್ಲಿ ಮಾತನಾಡಲು ರೇಣುಕಾಚಾರ್ಯಗೆ ಹೇಳುವೆ ಎಂದಿದ್ದಾರೆ.

ಅಲ್ಲದೇ, ಬಿಎಸ್‌ವೈ  ಆಪ್ತರೆಂದು ನೋಟೀಸ್ ಎಂದು ಆರೋಪಕ್ಕೆ ಉತ್ತರ ಕೊಟ್ಟ ಅವರು, ಯಾರನ್ನೆಲ್ಲ ಕರೆದಿದ್ದೀವಲ್ಲ, ಅದರ ನೇತೃತ್ವ ಬಿ ಎಸ್ ಯಡಿಯೂರಪ್ಪ ಅವರೇ ವಹಿಸಿದ್ದರು. ಬಿಎಸ್‌ವೈ ಅವರೂ ರೇಣುಕಾಚಾರ್ಯ ಕರೆದು ಮಾತನಾಡಿದ್ದಾರೆ. ನಾನು ಸಹ ಇವತ್ತು ರೇಣುಕಾಚಾರ್ಯರನ್ನು ಕರೆದು ಮಾತನಾಡುವೆ. ನಮ್ಮದು ಒಂದು ಪರಿವಾರ ಇದ್ದಂತೆ ಎಂಬ ಮನವರಿಕೆ ಮಾಡುವೆ ಪಕ್ಷದ ಚೌಕಟ್ಟಿನಲ್ಲಿಯೇ ಮಾತನಾಡುವಂತೆ ವಿನಂತಿ ಮಾಡುವೆ ಎಂದಿದ್ದಾರೆ.

ಒಂದಿಷ್ಟು ಆಕ್ರೋಶದಲ್ಲಿ ಕೆಲವರು ಮಾತನಾಡಿದ್ದಾರೆ. ಆದರೆ ಈಗ ಅದು ಸರಿ ಹೋಗಿದೆ. ಪಕ್ಷದ ಮೇಲೆ ಯಾರಿಗೂ ಅಸಮಾಧಾನ ಇಲ್ಲ. ಇದು ಯಾವದೋ ದುರುರುದ್ದೇಶ ಇಲ್ಲ. ಪರಸ್ಪರ ಭಿನ್ನಾಭಿಪ್ರಾಯದಿಂದಾಗಿ ಮಾತನಾಡಿದ್ದಾರೆ. ಆದರೆ ಸಾರ್ವಜನಿಕವಾಗಿ ಮಾತನಾಡದಂತೆ ಸೂಚನೆ ಕೊಟ್ಟಿದ್ದೇವೆ ಎಂದರು.

ಇನ್ನು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲವರ ಅಧ್ಯಕ್ಷತೆ, ಬಿಎಸ್‌ವೈ ನೇತೃತ್ವದಲ್ಲಿಯೇ ಸಭೆ ಆಗಿದ್ದು ಇಲ್ಲಿ ಅವರ ಪರ, ಇವರ ಪರ ಎಂಬ ಪ್ರಶ್ನೆಯೆ ಇಲ್ಲ. ಯಾರೂ ಸಾರ್ವಜನಿಕವಾಗಿ ಹೇಳಿಕೆ ಕೊಡಬಾರದೆಂಬ ನಿಯಮ ಹೇಳಿದ್ದೇವೆ . ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಹೇಳಿದ್ದೇವೆ ಎಂದರು .

ನಾಳೆಯಿಂದ  ಅಧಿವೇಶನ ಆರಂಭ ಹಿನ್ನೆಲೆಯಲ್ಲಿ, ಸದನದ  ಒಳಗೆ ಮತ್ತು ಹೊರಗೆ ಬಿಜೆಪಿ ಪ್ರತಿಭಟನೆ ಮಾಡಲಿದ್ದು, ಇವರ ಬೋಗಸ್ ಗ್ಯಾರಂಟಿ ಬಗ್ಗೆ ಹೋರಾಟ ಮಾಡುತ್ತೇವೆ. ನೀವು 10ಕೆಜಿ ಅಕ್ಕಿಯ ಹಣ ಕೊಡಬೇಕು ಇಲ್ಲವೇ ಕ್ಷಮೆ ಕೇಳಬೇಕು. ನಾವು 5 ಕೆಜಿ ಹಣ ಕೊಡುತ್ತಿದ್ದೇವೆ, ಪ್ರಧಾನಿ ನರೇಂದ್ರ ಮೋದಿಯವರು 5ಕೆಜಿ ಅಕ್ಕಿ ಕೊಡುತ್ತಿದ್ದಾರೆ ಎಂಬ ಸತ್ಯ ಹೇಳಬೇಕು. ಈ ಸತ್ಯವನ್ನು ಹೇಳಿ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಜನರಿಗೆ 10 ಕೆಜಿ ಅಕ್ಕಿಯ ಹಣ ಕೊಡಬೇಕು ಎಂದು ಆಗ್ರಹ ಪಡಿಸಿದರು‌.

ವಿರೋಧ ಪಕ್ಷದ ನಾಯಕ ಸ್ಥಾನ ಉತ್ತರ ಕರ್ನಾಟಕ್ಕೆ ಸಿಗುತ್ತಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ರಾಜ್ಯ ವಿಧಾನ ಸಭೆಯಲ್ಲಿ ಯಾರಿಗೆ ಸಿಗುತ್ತೇ ನೋಡೊಣ ಎಂದರು‌. ಇದೇ ಸಂದರ್ಭದಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಕಲ್ಲೆಸದ ಪ್ರಕರಣ ಇದೊಂದು ವಿಕೃತ ಮನೋಭಾವ ಆಗಿದ್ದು, ದೇಶದ ಅನೇಕ ಭಾಗದಲ್ಲಿ ಈ ರೀತಿ ಆಗುತ್ತಿದೆ, ಇದು ಒಳ್ಳೆಯದಲ್ಲವಂದೇ ಭಾರತ ರೈಲು ದೇಶದ ಆಸ್ತಿದೇಶದಲ್ಲಿ ಆಧುನಿಕ ಸೌಲಭ್ಯ ಬೆಳೆಯಲು ಈ ರೈಲು ಆಗಿದೆ ಎಂದರು.

ಭಾರತದಲ್ಲಿ ತಯಾರಾಗಬೇಕೆಂಬ ಕಾಳಜಿಯಿಂದ ಪ್ರಧಾನಿಗಳು ಈ ರೈಲುಗಳನ್ನು ಮಾಡುತ್ತಿದ್ದಾರೆರಸ್ತೆ ಪಕ್ಕಕ್ಕೆ ನಿಂತು ಕಲ್ಲು ಎಸೆಯುತ್ತಿದ್ದಾರೆಹೀಗಾಗಿ ರೈಲಿನ ಒಳಗೆ ಇದ್ದವರಿಗೆ ಅವರು ಯಾರು ಅಂತಾ ಗೊತ್ತಾಗುವುದಿಲ್ಲ ಹೀಗಾಗಿ ಅಲ್ಲಲ್ಲಿ ಸಿಸಿ ಟಿವಿ ಕ್ಯಾಮರಾ ಹಾಕಬೇಕು ಇನ್ನುರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಬಲಪಡಿಸಬೇಕು ಎಂದು ಒತ್ತಾಯ ಮಾಡಿದರು.

Sunil Kumarಗೆ ಆ ಶಕ್ತಿ ಇದೆಯಾ.? Rahul Gandhi ಭವಿಷ್ಯ ಹೇಗಿರುತ್ತೆ.?

ವಂದೇ ಭಾರತ ಎಕ್ಸ್ ಪ್ರೆಸ್: ದಾವಣಗೆರೆಯಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು

ಬಿಳಿಕೆರೆ ಹೋಬಳಿ ರಂಗನಕೊಪ್ಪಲು ಬಳಿ ಭೀಕರ ಅಪಘಾತ

- Advertisement -

Latest Posts

Don't Miss