Friday, April 18, 2025

Latest Posts

ಪಿಜ್ಜಾ ಕೊಡಲು ನಿರಾಕರಿಸಿದ್ದಕ್ಕೆ ಕೆಫೆಯಲ್ಲಿ ಗುಂಡು ಹಾರಿಸಿದ ಆಸಾಮಿ: Viral Video

- Advertisement -

Madhya Pradesh: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವ್ಯಕ್ತಿಯೋರ್ವ ರಾತ್ರಿ ಲೇಟಾಗಿ ಬಂದು ಕೆಫೆಯೊಂದರಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದಾನೆ. ಆದರೆ ಕೆಫೆಯವರು ಲೇಟಾಗಿದೆ, ಕೆಫೆ ಮುಚ್ಚುವ ಸಮಯವಾಗಿದೆ. ಈಗ ಆರ್ಡರ್‌ ತೆಗೆದುಕೊಳ್ಳಲಾಗುವುದಿಲ್ಲ ಎಂದಿದ್ದಾರೆ.

ಆದರೆ ಆತನ ಹಸಿವಿನ ಮಟ್ಟ ಎಷ್ಟಿತ್ತೆಂದರೆ, ಹೊಟ್ಟೆಗೇನಾದರೂ ಬೀಳದಿದ್ದಲ್ಲಿ ಆತ ರಾಕ್ಷಸನೇ ಆಗುತ್ತಾನೇನೋ ಅನ್ನೋ ಹಂತದಲ್ಲೇ ಇತ್ತು. ಎಷ್ಟು ಬಾರಿ ಕೇಳಿದರೂ, ಪಿಜ್ಜಾ ಮಾಡಿ ಕೊಡಲಾಗುವುದಿಲ್ಲ ಎಂದಾಗ, ಆತ ಥೇಟ್ ರಾಕ್ಷಸನಂತೆ, ಗನ್ ಹಿಡಿದು ಬಂದು ಕೆಫೆಯಲ್ಲಿ ಗುಂಡು ಹಾರಿಸಿದ್ದಾನೆ.

ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ವೀಡಿಯೋ ರೆಕಾರ್ಡ್ ಆಗಿದೆ. ಆತ ಗುಂಡು ಹಾರಿಸಿದ್ದಕ್ಕೆ, ಅಲ್ಲಿದ್ದ ಸಿಬ್ಬಂದಿಗಳು ಹೆದರಿ, ತರಾತುರಿಯಲ್ಲಿ ಪಿಜ್ಜಾ ಮಾಡಿ ಕೊಟ್ಟಿದ್ದಾರೆ. ಬಳಿಕ ಆತ ಪಿಜ್ಜಾ ತಿಂದು ಹೊರನಡೆದಿದ್ದಾನೆ. ಆದರೆ ಈ ಘಟನೆಯನ್ನು ಸುಮ್ಮನೆ ಬಿಡದ ಕೆಫೆಯವರು, ಈ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನು ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ವೀಡಿಯೋ ನೋಡಿ ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss