Thursday, December 12, 2024

Latest Posts

ಸಾಯಿ ಪಲ್ಲವಿ ವಿರುದ್ಧ ಧನುಷ್ ಮತ್ತು ಸೂರ್ಯ ಫ್ಯಾನ್ಸ್ ಬೇಸರ.. ಕಾರಣವೇನು ಗೊತ್ತಾ..?

- Advertisement -

Movie News: ದಕ್ಷಿಣ ಭಾರತದಲ್ಲಿ ಸಂಪ್ಲಿಸಿಟಿಗೆ ಹೆಸರಾಗಿರುವ ನಟಿ ಅಂದ್ರೆ ಸಾಯಿ ಪಲ್ಲವಿ. ಈಕೆ ಮೇಕಪ್ ಹಾಾಕದೇ, ಸಿಂಪಲ್ ಆಗಿ ಸೀರೆಯುಟ್ಟು ಬಂದರೆ, ದೇವತೆ ಥರಾನೇ ಕಾಣ್ತಾಳೆ ಅಂತಾ ಇವರ ಅಭಿಮಾನಿಗಳು ಹೇಳ್ತಾರೆ. ಅಷ್ಟು ಗೌರವಯುತವಾದ ನಟಿ. ಕೆಲ ತಿಂಗಳ ಹಿಂದೆ ಹಿಂದೂ ಮುಸ್ಲಿಂ ಮಾರಾಮಾರಿ ಕೇಸ್‌ಗೆ ಸಂಬಂಧಪಟ್ಟಂತೆ ಹೇಳಿಕೆ ಕೊಟ್ಟು ಟ್ರೋಲ್ ಆಗಿದ್ದರು. ಆದರೆ ಜನ ಅದನ್ನ ಕೆಲ ತಿಂಗಳಲ್ಲೇ ಮರೆತು. ಈಕೆಯ ಒಳ್ಳೆಯತನಕ್ಕೆ ಬೆಲೆ ಕೊಟ್ಟಿದ್ದಾರೆ.

ಆದರೆ ಇದೀಗ ಸಾಯಿ ಪಲ್ಲವಿ ವಿರುದ್ಧ ಧನುಷ್ ಮತ್ತು ಸೂರ್ಯ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಕಾರಣವೇನು ಅಂದ್ರೆ, ಸಾಯಿ ಪಲ್ಲವಿ ನಟಿಸಿರುವ ಅಮರನ್ ಸಿನಿಮಾ ಸಖತ್ ಹಿಟ್ ಆಗಿದೆ. ಈ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಾಯಿ ಪಲ್ಲವಿ, ಇದು ನಮ್ಮ ಮೊದಲ ತಮಿಳು ಹಿಟ್ ಸಿನಿಮಾ ಎಂದಿದ್ದಾರೆ. ಇದಕ್ಕೆ ಧನುಷ್ ಮತ್ತು ಸೂರ್ಯ ಅಭಿಮಾಾನಿಗಳು ಬೇಸರ ಹೊರಹಾಕಿದ್ದಾರೆ.

ಯಾಕಂದ್ರೆ ಸಾಯಿ ಪಲ್ಲವಿ, ಧನುಷ್ ಮತ್ತು ಸೂರ್ಯ ಜೊತೆ ಹಲವು ಸಿನಿಮಾಗಳನ್ನು ಮಾಡಿದ್ದು, ಅವುಗಳ ಹಾಡೆಲ್ಲವೂ ಫೇಮಸ್ ಆಗಿತ್ತು. ಆದರೆ ಸಿನಿಮಾ ಆ ರೇಂಜಿಗೆ ಹಿಟ್ ಆಗಿರಲಿಲ್ಲ. ಸಾಯಿ ಪಲ್ಲವಿ, ಆ ಸಿನಿಮಾಾಗಳು ಫ್ಲಾಪ್ ಅನ್ನೋ ರೀತಿ ಮಾತನಾಡಿದ್ದಾರೆ ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ನಟಿ ಹೇಳಿದ್ದು ಸತ್ಯವೇ ಆಗಿದ್ದರೂ, ಅಭಿಮಾನಿಗಳಿಗೆ ನೋವುಂಟು ಮಾಡಿದೆ.

ಸದ್ಯ ಸಾಯಿಪಲ್ಲವಿ ಬಾಲಿವುಡ್‌ನಲ್ಲಿ ಬ್ಯುಸಿ ಇದ್ದಾರೆ. ಅಮೀರ್ ಖಾನ್ ನಿರ್ಮಾಣದ, ಅವರ ಪುತ್ರನೇ ನಟನಾಗಿ ನಟಿಸಿರುವ ಚಿತ್ರದಲ್ಲಿ ಸಾಾಯಿ ಪಲ್ಲವಿ ಬಣ್ಣ ಹಚ್ಚಿದ್ದಾರೆ. ಬಿಗ್‌ಬಜೆಟ್ ಸಿನಿಮಾ ಅಂತಲೇ ಹೇಳಲಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ಮಿಂಚಿದ್ದಾರೆ.

- Advertisement -

Latest Posts

Don't Miss