National Political News: ಇಂದು ಕೇಂದ್ರ ಸಚಿವೆಯಾಗಿರುವ ಸ್ಮೃತಿ ಇರಾನಿ, ಈ ಮೊದಲು ಹಿಂದಿ ಧಾರಾವಾಹಿ ಸಾಸ್ ಭಿ ಕಭಿ ಬಹು ಥಿ ಸಿರಿಯಲ್‌ನಲ್ಲಿ ನಟಿಸುತ್ತಿದ್ದರು. ಈ ವೇಳೆ ಸಂದರ್ಶನ ಮಾಡಿದಾಗ, ಅವರಿಗೆ ಎಂಥ ಅವಮಾನವಾಯಿತು. ಬಳಿಕ ಅವರಿಗೆ ಸಿರಿಯಲ್‌ನಲ್ಲಿ ನಟಿಸಲು ಹೇಗೆ ಅವಕಾಶ ಸಿಕ್ಕಿತು..? ಸ್ಮೃತಿ ಅವರನ್ನು ಕಂಡ ಜ್ಯೋತಿಷಿ ಏನು ಹೇಳಿದರು ಎಂಬುದನ್ನು ಸ್ಮೃತಿ ಇರಾನಿ ಸಂದರ್ಶನದಲ್ಲಿ ಹೇಳಿದ್ದಾರೆ.
ಸ್ಮೃತಿ ಇರಾನಿ ಮಾತಿನ ಮಲ್ಲಿ. ಅಲ್ಲದೇ, ಹಲವು ವಿಚಾರಗಳ ಬಗ್ಗೆ ಉತ್ತಮ ಜ್ಞಾನ ಹೊಂದಿದವರು. ಆದರೆ, ಅವರು ನೋಡಲು ಅಷ್ಟು ಸುಂದರವಾಗಿರಲಿಲ್ಲ. ಹಾಗಾಗಿ ಅವರು ಸಿರಿಯಲ್ ಆಡಿಷನ್ ನೀಡಲು ಹೋದಾಗ, ಅವರನ್ನು ಜನ ಹಲವು ರೀತಿ ಮಾತನಾಡಿ, ಅವಮಾನಿಸಿದ್ದರಂತೆ. ಕಪ್ಪು ಇದ್ದಾಳೆಂದು ಅವರ ದೇಹದ ಬಣ್ಣದ ಬಗ್ಗೆ ಕೀಳಾಗಿ ಮಾತನಾಡಿದ್ದರಂತೆ. ಅಲ್ಲದೇ, ದೇಹದಲ್ಲಿ ಬಲವೇ ಇಲ್ಲದಂತಿದ್ದಾಳೆ ಅಂತ, ಹೀಗೆ ಹಲವು ರೀತಿ ಅವಮಾನಿಸಿದ್ದರಂತೆ.
ಹೀಗೆ ಅವಮಾನ ಎದುರಿಸಿ, ಕೊನೆಗೆ ಇವರನ್ನು ಸಾಸ್ ಭಿ ಕಭಿ ಬಹು ಥಿ ಅನ್ನುವ ಸಿರಿಯಲ್‌ಗೆ ನಿರ್ದೇಶಕಿ ಏಕ್ತಾ ಕಪೂರ್ ಆಯ್ಕೆ ಮಾಡಿಕೊಂಡರು. ಈ ವೇಳೆ ಸ್ಮೃತಿ ಏಕ್ತಾ ಆಫೀಸಿನಲ್ಲಿ ಕುಳಿತಾಗ, ಅಲ್ಲಿ ಒಬ್ಬ ಜ್ಯೋತಿಷಿಗಳು ಬಂದಿದ್ದರಂತೆ. ಅವರು ಸ್ಮೃತಿ ಇರಾನಿ ಮುಖ ನೋಡಿ, ಇವಳನ್ನು ತಡಿಯಿರಿ. ಇಲ್ಲದಿದ್ದಲ್ಲಿ, ಇವಳು ಬಹು ಯಶಸ್ವಿ ವ್ಯಕ್ತಿಯಾಗುವಳು ಎಂದಿದ್ದರಂತೆ.
ಇನ್ನು ಈ ಸಿರಿಯಲ್‌ನಲ್ಲಿ ಸ್ಮೃತಿ ಇರಾನಿ ಯಾರದ್ದೋ, ತಂಗಿಯ ಪಾತ್ರ ಮಾಡುವ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಲು ಬಂದಿದ್ದರಂತೆ. ಆದರೆ ಜ್ಯೋತಿಷಿಯ ಮಾತು ಕೇಳಿ, ಏಕ್ತಾ ಕಪೂರ್, ಸ್ಮೃತಿಗೆ ಮೇನ್ ರೋಲ್ ಪ್ಲೇ ಮಾಡುವ ಅವಕಾಶ ಕೊಟ್ಟರಂತೆ. ಇಲ್ಲಿಯವರೆಗೂ ಮೆಕ್‌ಡೊನಾಲ್ಡ್‌ನಲ್ಲಿ ಕಸ ಗುಡಿಸುತ್ತಿದ್ದ ಸ್ಮೃತಿ ಇರಾನಿ ಎಂಬ ಹುಡುಗಿ, ಸಿರಿಯಲ್ ಹಿರೋಯಿನ್ ಆಗಿ ಆಯ್ಕೆಯಾದರು. ಜ್ಯೋತಿಷಿಗಳ ಭವಿಷ್ಯದಂತೆ ಇದೀಗ ಕೇಂದ್ರ ಸಚಿವೆಯೂ ಆಗಿದ್ದಾರೆ.
ಯುವರಾಜರೇ ರಾಜರಾಗಿರಿ ಮಂತ್ರಿಯಾಗಬೇಡಿ: ಯದುವೀರ್ ಒಡೆಯರ್ ಅಭಿಮಾನಿಗಳ ಅಭಿಯಾನ
ಸರಕಾರಿ ಕಾರ್ಯಕ್ರಮಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್: ಅಂಗನವಾಡಿ ಕಾರ್ಯಕರ್ತೆಯ ‘ಗ್ಯಾರಂಟಿ’ ಬೆದರಿಕೆ