ದೇಶದ ಪ್ರತಿಷ್ಠಿತ, ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಮೊನ್ನೆ ಮೊನ್ನೆ ತಾನೇ ದೊಡ್ಡ ಪಾರ್ಟಿ ಅರೇಂಜ್ ಮಾಡಿದ್ದರು. ಅದರಲ್ಲಿ ಬಾಲಿವುಡ್ ಹಾಲಿವುಡ್ ಗಣ್ಯರು ಸೇರಿ, ಹಲವು ಉದ್ಯಮಿಗಳು ಭಾಗವಹಿಸಿದ್ದರು. ಈ ವೇಳೆ ಅವರು ನೀಡಿದ ಸಿಹಿ ತಿಂಡಿಯ ಬಗ್ಗೆ ಟ್ವಿಟರ್‌ನಲ್ಲಿ ಚರ್ಚೆ ಶುರುವಾಗಿದೆ.
ಉತ್ತರ ಭಾರತದವರು ದೌಲತ್ ಕೀ ಚಾಟ್ ಅನ್ನೋ ಹಾಲಿನ ಸಿಹಿ ತಿಂಡಿಯನ್ನು ಮಾಡುತ್ತಾರೆ. ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಇದನ್ನ ವಿಭಿನ್ನ ರೀತಿಯಲ್ಲಿ ಉಣ ಬಡಿಸಲಾಗತ್ತೆ. ಅದೇ ರೀತಿ ಅಂಬಾನಿ ಮನೆಯ ಪಾರ್ಟಿಯಲ್ಲೂ ಕೂಡ ಈ ರೀತಿಯಾಗಿ ದೌಲತ್ ಚಾಟ್ ಸರ್ವ್ ಮಾಡಲಾಗಿತ್ತು. ಇದರ ಫೋಟೋ ತೆಗೆದು ಓರ್ವ ವ್ಯಕ್ತಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಟ್ವಿಟರ್‌ನಲ್ಲಿ ದೌಲತ್ ಕೀ ಚಾಟ್ ಪಕ್ಕ ಟಿಶ್ಯೂ ಪೇಪರ್ ಇರಬೇಕಾದ ಜಾಗದಲ್ಲಿ, 500ರ ನೋಟಿವೆ.
Ambani ji ke party mein tissue paper ki jagah 500 ke notes hote hain 😭 pic.twitter.com/3Zw7sKYOvC
— R A T N I S H (@LoyalSachinFan) April 2, 2023
ಈ ಫೋಟೋ ಹಾಕಿದ ಆ ವ್ಯಕ್ತಿ, ಅಂಬಾನಿಯ ಮನೆ ಪಾರ್ಟಿಯಲ್ಲಿ ಟಿಶ್ಯೂ ಇರುವ ಜಾಗದಲ್ಲಿ 500 ನೋಟುಗಳಿದೆ ಎಂದು ಶೀರ್ಶಿಕೆ ಹಾಕಿದ್ದಾನೆ. ಹಾಗಾದ್ರೆ ನಿಜವಾಗಲೂ ಅಂಬಾನಿ ಟಿಶ್ಯೂ ಇಡುವ ಜಾಗದಲ್ಲಿ ದುಡ್ಡಿಟ್ಟಿದ್ದಾರಾ..? ಅಂತಾ ದೆಹಲಿ ಬಿಟ್ಟು, ಬೇರೆ ರಾಜ್ಯದಲ್ಲಿರುವ ಜನ ಚರ್ಚೆ ಮಾಡುತ್ತಿದ್ದಾರೆ. ಆದರೆ ದೆಹಲಿಗರು ಮಾತ್ರ ಮುಸಿ ಮುಸಿ ನಕ್ಕಿದ್ದಾರೆ.
ಯಾಕಂದ್ರೆ ದೆಹಲಿಯ ಇಂಡಿಯನ್ ಆ್ಯಕ್ಸೆಂಟ್ ಎಂಬ ಹೊಟೇಲ್‌ನಲ್ಲಿ ದೌಲತ್ ಕೀ ಚಾಟ್‌ನ್ನು ಈ ರೀತಿಯಾಗಿಯೇ ಸರ್ವ್ ಮಾಡಲಾಗತ್ತೆ. ಮತ್ತು ಇದು ನಿಜವಾದ 500ರ ನೋಟಲ್ಲ, ಬದಲಾಗಿ ನಕಲಿ ನೋಟು ಎಂಬುದು ಕೆಲವರಿಗೆ ಗೊತ್ತಿತ್ತು. ಹೌದು, ಇಲ್ಲಿ ಅಂಬಾನಿಯವರು ಕೂಡ ನಕಲಿ 500 ನೋಟನ್ನೇ ಇಟ್ಟಿದ್ದಾರೆ. ಇದು ಶ್ರೀಮಂತರ ಸಿಹಿ ತಿಂಡಿ ಎಂದೇ ಗುರುತಿಸಲ್ಪಟ್ಟ ಕಾರಣ, ಇದನ್ನ ಇದೇ ರೀತಿ ನೀಡಲಾಗತ್ತೆ. ಆದ್ರೆ ಕೆಲವರು ಇದನ್ನು ನಿಜವಾದ 500 ನೋಟೆಂದು ತಿಳಿದಿದ್ದರು.