Hubballi News: ಹುಬ್ಬಳ್ಳಿ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಮಾತನಾಡಿದ್ದು, ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರ ಪ್ರಯತ್ನ ವಿಫಲವಾಗಿದೆ. ಸಂತ್ರಸ್ತರಿಗೆ ದುಡ್ಡು ಕೊಟ್ಟು ಆಮಿಷ ಒಡ್ಡಿ ಕಂಪ್ಲೇಂಟ್ ಹಿಂಪಡೆಯಲು ಹೇಳಿದ್ದು ಬಹಿರಂಗವಾಗಿದೆ. ಪ್ರಕರಣವನ್ನು ಎಸ್. ಐ. ಟಿ ಗೆ ಮಾಡಲು ಹೇಳುತ್ತೇನೆ. ಸ್ಥಳೀಯ ಪೊಲೀಸರು ಮುಚ್ಚಿಹಾಕಲು ನೋಡುತ್ತಾರೆ. ಮುಖ್ಯಮಂತ್ರಿಗಳು ಹಾವೇರಿಗೆ ಬಂದಾಗ ಪ್ರಕರಣವನ್ನು ಎಸ್. ಐ. ಟಿ. ಗೆ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷೆ ಮಾಡುತ್ತೇನೆ. ವಿಚಾರಣೆ ನೆಪದಲ್ಲಿ ಸಂತ್ರಸ್ತ ಮಹಿಳೆಯನ್ನು ಶಿಫ್ಟ್ ಮಾಡುತ್ತಿದ್ದಾರೆ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಾವೇರಿ ಸಂತ್ರಸ್ತ ಭವನದಲ್ಲಿ ಬಿಜೆಪಿ ಮಹಿಳಾ ನಿಯೋಗ ಭೇಟಿಯಾಗುತ್ತೆ ಎಂದು ಸಂತ್ರಸ್ತ ಮಹಿಳೆಯನ್ನು ಶಿಫ್ಟ್ ಮಾಡುವ ಕೆಲಸ ಪೊಲೀಸರಿಂದ ಆಗುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ರಾಮ ಮಂದಿರ ಉದ್ಘಾಟನೆ ವೇಳೆ ರಾಮ ಪೂಜೆ ನಮಸ್ಕಾರ ಸಿಎಂ ಹೇಳಿಕೆಗೆ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ತಡವಾಗಿ ಆದರೂ ಬುದ್ದಿ ಬಂದಿದೆ. ಅವರ ಹೆಸರಿನಲ್ಲಿ ಸಿದ್ಧರಾಮ ಇದೆ. ರಾಮ ಇದ್ದಾನೆ. ರಾಜಕರಣಕ್ಕಾಗಿ ಅಧಿಕಾರದ ರಾಜಕರಣಕ್ಕಾಗಿ . ಅವರ ಹೆಸರಿನಲ್ಲಿ ಇರುವ ರಾಮನನ್ನ ಅವರು ಕಡೆಗಣಿಸಿದ್ದರು. ಕೊನೆಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯವಾಗಿದೆ. 22 ನಂತರ ರಾಮಮಂದಿರಕ್ಕೆ ಸಮಯ ನೋಡಿಕೊಂಡು ಹೋಗುತ್ತೇನೆ ಅನ್ನುತ್ತಿದರು ಇವಾಗ ಇಲ್ಲ ಎನ್ನುತ್ತಿದ್ದಾರೆ . ಅವರು ಬಂಧನದಲ್ಲಿ ಸಿಲುಕಿದ್ದಾರೆ. ಅವರ ಆತ್ಮ ಸಾಕ್ಷಿ ಹೋಗಬೇಕು ಅನ್ನುತ್ತಿದೆ . ಆದರೆ ಪಕ್ಷದ ವರಿಷ್ಠರು ಹೋಗಬೇಡ ಎನ್ನುತ್ತಿದ್ದಾರೆ. ಇದಕ್ಕೆ ಅವರ ಗೊಂದಲಮಯ ಹೇಳಿಕೆಗಳು ಸಾಕ್ಷಿ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯಗೆ,ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ ಬ್ರಿಟೀಷ್ ರಾಯಭಾರಿ: ಆಕ್ಷೇಪ ವ್ಯಕ್ತಪಡಿಸಿದ ಭಾರತ
ವಿಹೆಚ್‌ಪಿಯಿಂದ ಅಮಿತ್ ಷಾಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ

