ಯಾವ ವಯಸ್ಸಿನಲ್ಲಿ ಮನೆ ಖರೀದಿಸೋದು ಸೂಕ್ತ? | Dr Bharath Chandra Podcast

Finance Knowledge: ಇತ್ತೀಚೆಗೆ ಚಿನ್ನ, ಬೆಳ್ಳಿ, ಆಸ್ತಿ, ಭೂಮಿ, ಮನೆ ಎಲ್ಲದರ ಬೆಲೆ ಹೆಚ್ಚುತ್ತಿದೆ. ಹಾಗಾಗಿ ಇಂದಿನ ಯುವ ಜನತೆಗೆ ಹೂಡಿಕೆ ಮಾಡದಿದ್ದಲ್ಲಿ, ಮುಂದೆ ಆಹಾರ, ವಸ್ತ್ರಕ್ಕೂ ಪರದಾಡಬೇಕಾಗುತ್ತದೆ ಅನ್ನೋ ಬುದ್ಧಿ ಬಂದಿದೆ. ಹಾಗಾಗಿ ಹೂಡಿಕೆ ಕಡೆ ಯುವ ಜನತೆ ಗಮನ ನೀಡುತ್ತಿದೆ. ಅದರಲ್ಲ ಹಲವರಿಗೆ ಮದುವೆಗೂ ಮುನ್ನ ಮನೆ ಖರೀದಿಸಬೇಕು ಅನ್ನೋ ಆಸೆ ಹೆಚ್ಚಾಗಿದೆ. ಹಾಗಾದ್ರೆ ಯಾವ ವಯಸ್ಸಿನಲ್ಲಿ ಮನೆ ಖರೀದಿಸಬೇಕು ಎಂದು ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು ವಿವರಿಸಿದ್ದಾರೆ.

ಇತ್ತೀಚೆಗೆ ಮದುವೆಗೂ ಮುನ್ನ ಕೆಲವರು ಕೇಳುವ ಪ್ರಶ್ನೆ ಅಂದ್ರೆ, ಹುಡುಗನ ಬಳಿ ಸ್ವಂತ ಮನೆ ಇದೆಯಾ ಅಂತಾ. ಇಂದಿನ ಕಾಲದಲ್ಲಿ ಮನೆ ಬೆಲೆ 50 ಲಕ್ಷದ ತನಕ ಇದ್ದು, 29ರಿಂದ 32 ವರ್ಷ ವಯಸ್ಸಿನ ಯುವಕನ ಬಳಿ ಅಷ್ಟು ಹಣ ಇರಲು ಹೇಗೆ ಸಾಧ್ಯ..? ಇದು ಸಾಧ್ಯವಾಗದ ಮಾತು. ಆದರೆ ಮನೆ ಮಂದಿ ಲೋನ್ ತೆಗೆದು ಮನೆ ಕಟ್ಟು ಅಂತಾ ಹೇಳ್ತಾರೆ.

ಲೋನ್ ತೆಗೆದ ಮೇಲೆ ಇಎಂಐ ಶುರುವಾಗುತ್ತದೆ. ಆಗ ಶುರುವಾಗುತ್ತದೆ ಚಾಲೆಂಜ್. ಆ ಕೆಲಸ ಬಿಡುವ ಹಾಗಿಲ್ಲ. ಆ ಊರು ಬಿಡುವ ಹಾಗಿಲ್ಲ. ಬೇರೆ ಸಾಹಸಕ್ಕೆ ಕೈ ಹಾಕುವ ಹಾಗಿಲ್ಲ. ಬೆಂಗಳೂರಿನಲ್ಲಿ 1 ಜಾಗದಲ್ಲಿ ಮನೆ ಖರೀದಿಸಿ, ದೂರದ ಪ್ರದೇಶದಲ್ಲಿ ಕೆಲಸವಿದ್ದಲ್ಲಿ, ಅಲ್ಲಿ ಹೋಗುವ ಮನಸ್ಸು ನೀವು ಮಾಡುವುದಿಲ್ಲ. ಹಾಗಾಗಿ ಮನೆ ಖರೀದಿ ಬದಲು ಮ್ಯೂಚೂವಲ್ ಫಂಡ್‌ನಲ್ಲಿ ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟ್ ಮಾಡಿದರೆ, ಉತ್ತಮವಾದ ಲಾಭ ಗಳಿಸಿ, ಮತ್ತೆ ನಿಶ್ಚಿಂತೆಯಿಂದ ಮನೆ ಖರೀದಿಸಬಹುದು ಅಂತಾರೆ ತಜ್ಞರು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author