Friday, December 5, 2025

Latest Posts

ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ, ಮೂವರ ಬಂಧನ

- Advertisement -

Bengaluru News: ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ, ನಾಲ್ಕೈದು ಜನ ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ, ಅಂಗಡಿ ಮಾಲೀಕನಿಗೆ ಆವಾಜ್ ಹಾಕಿದ್ದಾರೆ.

ಈ ಮೂಲಕ ಜಗಳ ಶುರುಮಾಡಿ, ಬಳಿಕ ಕಾಲರ್ ಹಿಡಿದು, ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ರೋಹಿತ್, ಸುಲೇಮಾನ್, ಶಹಜಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ನಗರತ್ ಪೇಟೆಯ ಅಂಗಡಿಯಲ್ಲಿ ವ್ಯಕ್ತಿಯೋರ್ವ ಹನುಮಾನ್ ಚಾಲೀಸಾ ಹಾಾಕಿದ್ದ. ಆಗ ಅಂಗಡಿಗೆ ಬಂದ ಆರು ಜನ, ನಾವು ನಮಾಜ್ ಮಾಡುತ್ತಿದ್ದೇವೆ. ಹಾಡು ಇಷ್ಟು ಜೋರಾಗಿ ಹಾಕಬೇಡ ಎಂದಿದ್ದಾರೆ. ಈ ಮೂಲಕ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.

ಘಟನೆ ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ದೂರು ದಾಖಲಿಸಿದ್ದು, ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅದರಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮತ್ತೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್: ಇನ್ನು 6 ವರ್ಷ ವ್ಲಾದಿಮೀರ್ ಪಟ್ಟ ಗಟ್ಟಿ..

ಖ್ಯಾತ ಗಾಯಕಿ ಮಂಗ್ಲಿ ಕಾರು ಅಪಘಾತ

ಟ್ರೋಫಿ ಗೆದ್ದ WPL ಚಾಂಪಿಯನ್ಸ್‌ಗೆ ವಿಶ್ ಮಾಡಿದ ರಾಜಕೀಯ ಗಣ್ಯರು..

- Advertisement -

Latest Posts

Don't Miss