Tuesday, April 15, 2025

Latest Posts

ರೈತರ ಮೇಲಿನ ದಾಳಿ ಖಂಡನೀಯ. ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಇದು ʼಇಂಡಿಯಾʼ ಗ್ಯಾರಂಟಿ: ಡಿಸಿಎಂ ಡಿಕೆಶಿ

- Advertisement -

Political News: ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದ ರೈತರನ್ನು ತಡೆದಿದ್ದು, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ರೈತರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಈ ಕೆಲಸಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ಹೊರಹಾಕಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೃಷಿಕ, ಕಾರ್ಮಿಕ, ಸೈನಿಕನಿಲ್ಲದೆ ದೇಶ ಕಟ್ಟಲು ಸಾಧ್ಯವಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಅವಕಾಶವಿದೆ. ಬಿಜೆಪಿ ಸರ್ಕಾರ ನ್ಯಾಯ ಕೇಳಲು ಪ್ರತಿಭಟನೆ ಮಾರ್ಗ ಅನುಸರಿಸುತ್ತಿರುವ ರೈತಾಪಿ ವರ್ಗದ ಮೇಲೆ ಬುಲೆಟ್‌, ಶೆಲ್‌ ದಾಳಿ ನಡೆಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಸಿ ಬಳಿಯಲು ಹೊರಟಿದೆ. ಇಂದು ರೈತ ಚೇತನ, ಹಸಿರು ಶಾಲಿನ ಹರಿಕಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಜನ್ಮದಿನ. ಇದೇ ದಿನ ರೈತರ ಮೇಲೆ ನಡೆಯುತ್ತಿರುವ ಅಮಾನವೀಯ ದಾಳಿ ಖಂಡನೀಯ, ನಾಚಿಕೆಗೇಡು ಎಂದು ಡಿಸಿಎಂ ಡಿಕೆಶಿ ಅಸಮಾಧಾನ ಹೊರಹಾಕಿದ್ದಾರೆ.

ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಇದು ʼಇಂಡಿಯಾʼ ಗ್ಯಾರಂಟಿ. ಕರ್ನಾಟಕದಲ್ಲಿ ಐದು ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾಗಿವೆ. ʼಇಂಡಿಯಾ ಮೈತ್ರಿಕೂಟʼ ಅಧಿಕಾರಕ್ಕೆ ಬಂದರೆ ದೇಶದಲ್ಲೂ ಕೂಡ ಇನ್ನಷ್ಟು ಗ್ಯಾರಂಟಿಗಳು ಜಾರಿಯಾಗಲಿವೆ. ನಮ್ಮ ನಾಯಕರಾದ ಶ್ರೀ ರಾಹುಲ್‌ ಗಾಂಧಿ ಅವರು ಇಂದು ಅನ್ನದಾತರಿಗಾಗಿ ಮಹತ್ವದ ಗ್ಯಾರಂಟಿಯೊಂದನ್ನು ಘೋಷಿಸಿದ್ದಾರೆ. ನಮ್ಮ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು ಖಚಿತ ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.

ಕ್ರಿಕೇಟಿಗ ರವಿಂದ್ರ ಜಡೇಜಾ ವಿರುದ್ಧ ಅಪ್ಪನ ಆರೋಪ: ಸೊಸೆ ರಿವಾಬ ಹೇಳಿದ್ದೇನು..?

ಬಾಲಕರಾಮನ ದರ್ಶನ ಪಡೆದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್

ಅಭಿಮಾನಿಯ ಮೊಬೈಲ್ ಕಸಿದು ಎಸೆದ ಬಾಲಿವುಡ್ ಗಾಯಕ ಆದಿತ್ಯ ನಾರಾಯಣ್

- Advertisement -

Latest Posts

Don't Miss