International News: ಅಮೆರಿಕದಲ್ಲಿ ಭಾರತೀಯ ವ್ಯಕ್ತಿಯ ಮೇಲೆ ಅಲ್ಲಿನ ಸ್ಥಳಿಯನೋರ್ವ ಹಲ್ಲೆ ಮಾಡಿದ್ದು, ಭಾರತೀಯ ಮೂಲದ ವಿವೇಕ್ ಸಾವನ್ನಪ್ಪಿದ್ದಾನೆ.
ಭಾರತೀಯ ಮೂಲದ ವಿವೇಕ್ ತನೇಜಾ(41) ಮೃತ ವ್ಯಕ್ತಿಯಾಗಿದ್ದು, ವಾಷಿಂಗ್ಟನ್‌ನ ಒಂದು ರೆಸ್ಟೋರೆಂಟ್‌ಗೆ ಹೋಗಿದ್ದರು. ಅದೇ ಸಮಯಕ್ಕೆ ಅಲ್ಲಿ ಓರ್ವ ವ್ಯಕ್ತಿಯೂ ಅದೇ ರೆಸ್ಟೋರೆಂಟ್‌ಗೆ ಬಂದಿದ್ದಾನೆ. ಆ ವ್ಯಕ್ತಿ ಜೊತೆ ವಿವೇಕ್‌ಗೆ ಜಗಳವಾಗಿದೆ.
ಬಳಿಕ ರೆಸ್ಟೋರೆಂಟ್‌ನಿಂದ ಹೊರಗೆ ಬಂದು, ಇಬ್ಬರು ಹೊಡೆದಾಡಿಕೊಂಡಿದ್ದಾರೆ. ವ್ಯಕ್ತಿ ವಿವೇಕ್‌ನನ್ನು ನೆಲಕ್ಕೆ ಹಾಕಿ, ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ದಾಳಿಯ ರಭಸಕ್ಕೆ ವಿವೇಕ್ ತಲೆಯಿಂದ ರಕ್ತ ಸೋರುತ್ತಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ವಿವೇಕ್‌ನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ, ವಿವೇಕ್ ಸಾವನ್ನಪ್ಪಿದ್ದಾರೆ. ಇವರನ್ನು ಕೊಲೆ ಮಾಡಿದ ಆ ವ್ಯಕ್ತಿ ಯಾರು..? ಯಾಕೆ ಕೊಲೆ ಮಾಡಿದನೆಂದು ಇನ್ನಷ್ಟೇ ತಿಳಿಯಬೇಕಿದೆ. ಕಳೆದ ಹಲವು ದಿನಗಳಲ್ಲಿ ಅಮೆರಿಕದಲ್ಲಿ ಹಲವು ಭಾರತೀಯ ಮೂಲದವರು ಕೊಲೆಯಾಗುತ್ತಿರುವುದು ಭಯ ಹುಟ್ಟಿಸುವ ವಿಷಯವಾಗಿದೆ.
Pakistan Election Result: ಲಾಹೋರ್‌ನಲ್ಲಿ ನವಾಜ್ ಷರೀಫ್‌ಗೆ 55ಸಾವಿರ ಮತಗಳ ಅಂತರದಿಂದ ಗೆಲುವು
ಬ್ರಿಟನ್ ರಾಜ ಮೂರನೇ ಚಾರ್ಲ್ಸ್‌ಗೆ ಕ್ಯಾನ್ಸರ್: ಶೀಘ್ರ ಗುಣಮುಖರಾಗಲೆಂದು ಪ್ರಧಾನಿ ಮೋದಿ ಹಾರೈಕೆ
ಚಿಲಿಯಲಿ ಸಂಭವಿಸಿದ ಕಾಡ್ಗಿಚ್ಚಿಗೆ 100ಕ್ಕೂ ಹೆಚ್ಚು ಜನ ಬಲಿ, 200ಕ್ಕೂ ಹೆಚ್ಚು ಜನರು ಕಾಣೆ




