ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ‌ ಕಂದಾಯ ನಿರೀಕ್ಷಕರ ಮೇಲೆ ಹಲ್ಲೆ!

Mysuru News: ಮೈಸೂರು: ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ‌ ವ್ಯಕ್ತಿಯೋರ್ವ ಸರ್ಕಾರಿ ಕಚೇರಿಗೆ ನುಗ್ಗಿ ಕಂದಾಯ ನಿರೀಕ್ಷಕನ ಮೇಲೆ‌ ಹಲ್ಲೆ ನಡೆಸಿರುವ ಘಟನೆ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿಯಲ್ಲಿ ನಡೆದಿದೆ.

ನಂದಕುಮಾರ್ ಹಲ್ಲೆಗೊಳಗಾದ ಕಂದಾಯ ನಿರೀಕ್ಷಕ. ಕುಂಬಾರಕೊಪ್ಪಲಿನ ಧನುಷ್ ಎಂಬಾತನಿಂದ ಹಲ್ಲೆ ನಡೆದಿದೆ. ಧನುಷ್ ಮಹಾನಗರ ಪಾಲಿಕೆ ವಲಯ ಕಚೇರಿ 5ರ ಬಾಗಿಲು ಮುಂಭಾಗ ಸಿಗರೇಟ್ ಸೇದುತ್ತಿದ್ದ. ಈ ವೇಳೆ ಹೊರಗೆ ಹೋಗಿ ಸಿಗರೇಟ್ ಸೇದಿ ಎಂದು RI ನಂದಕುಮಾರ್ ತಿಳಿಸಿದ್ದಾರೆ. ಇದಕ್ಕೆ ಸಿಟ್ಟಾದ ಧನುಷ್ ಆಯುಕ್ತರ ಚೇಂಬರ್ನಲ್ಲಿ RI ಇದ್ದ ವೇಳೆ ಒಳ ಪ್ರವೇಶ ಮಾಡಿ ನೀನು ಯಾವ ಸೀಮೆ RI ಎಂದು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ನಡೆಸಿದ್ದಾನೆ. ಸ್ಥಳದಲ್ಲಿದ್ದವರು ಬಿಡಿಸಲು ಬಂದರೂ ಬಿಡದೆ ಹಲ್ಲೆ ಮಾಡಿದ್ದಾನೆ.

ಆರೋಪಿ ಧನುಷ್ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ನಿಂದನೆ ಸೇರಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ವಿಜಯನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಲ ನಾಯಿ ನರಿಗಳಿಂದ ಸ್ವಲ್ಪ ವ್ಯತ್ಯಾಸವಾಯಿತು : ವಿ. ಸೋಮಣ್ಣ

ಆರೋಪ ಸಾಬೀತು ಮಾಡದಿದ್ದಲ್ಲಿ ಪಾಕಿಸ್ತಾನಕ್ಕೆ ಪಲಾಯನ ಮಾಡ್ಬೇಕು: ಧರ್ಮಗುರು ಸವಾಲು ಸ್ವೀಕರಿಸ್ತಾರಾ ಯತ್ನಾಳ್?

ಆಡಳಿತದಲ್ಲಿ ನಾನು ಮೊದಲು ಸ್ಟ್ರಾಂಗ್ ಆಗಿದ್ದೆ ಅಂತ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ: ಸಿದ್ದರಾಮಯ್ಯ

About The Author