Saturday, April 19, 2025

Latest Posts

ಉತ್ತರಪ್ರದೇಶದಲ್ಲಿ ಸ್ಪೋಟಕ್ಕೆ ಪ್ರಯತ್ನ ಪ್ರಕರಣ: ಆರೋಪಿ ಮಹಿಳೆ ಅರೆಸ್ಟ್

- Advertisement -

National News: ಎರಡು ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ಸ್ಪೋಟ ನಡೆಸಲು ಸಜ್ಜಾಗಿದ್ದ ಇಬ್ಬರು ಉಗ್ರರನ್ನು ಅಲ್ಲಿನ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ಅವರ ವಿಚಾರಣೆ ನಡೆಸುವ ವೇಳೆ ಬಾಂಬ್‌ ತಯಾರಿಸಲು ನಮಗೆ ಓರ್ವ ಮಹಿಳೆ ಹೇಳಿದ್ದಳು. ಅದಕ್ಕಾಗಿ ನಾನು ಬಾಂಬ್ ತಯಾರಿಸಿದ್ದೆ ಎಂದು ಆ ಉಗ್ರರು ಹೇಳಿದ್ದರು.

ಮಜೀದ್ ಮತ್ತು ಜಾವೇದ್ ಎಂಬುವವರನ್ನು ಬಂಧಿಸಿದ್ದು, ಇವರು ಕೊಟ್ಟ ಹೇಳಿಕೆಯ ಆಧಾರದ ಮೇಲೆ ಈಗ ಆ ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ. ಈ ಮಹಿಳೆ ಜಾವೇದ್‌ಗೆ ಟೈಂ ಬಾಂಬ್ ತಯಾರಿಸಲು ಹಣ ನೀಡಿದ್ದಳು. ಜಾವೇದ್ ರೇಡಿಯೋ ರಿಪೇರಿ ಮಾಡುತ್ತಿದ್ದು, ಪಟಾಕಿ ತಯಾರಿಸುವ ಚಿಕ್ಕಪ್ಪನಿಂದ ಮತ್ತು ಯ್ಯೂಟ್ಯೂಬ್ ನೋಡಿ, ಬಾಂಬ್ ತಯಾರಿಸುವುದನ್ನು ಕಲಿತಿದ್ದ.

ಹೀಗಾಗಿ ಈ ಮಹಿಳೆ ಜಾವೇದ್‌ ಬಳಿ ಬಾಂಬ್ ತಯಾರಿಸುವಂತೆ ಹೇಳಿ, 10 ಸಾವಿರ ರೂಪಾಯಿ ಕೊಟ್ಟಿದ್ದಳು. ಬಾಂಬ್ ತಯಾರಿಸಿ ಕೊಟ್ಟ ಬಳಿಕ, 40 ಸಾವಿರ ರೂಪಾಯಿ ಕೊಡುವುದಾಗಿ ಹೇಳಿದ್ದಳು. ಈಗಾಗಲೇ ಈಕೆಯ ಮನೆಯಲ್ಲಿ ಇನ್ನಷ್ಟು ಬಾಂಬ್ ಇರುವುದಾಗಿ ಈಕೆ ಒಪ್ಪಿಕೊಂಡಿದ್ದು, ಈಕೆಯ ಪ್ಲಾನ್ ಏನು..? ಈಕೆ ಯಾಕೆ ಬಾಂಬ್ ತಯಾರಿಸಲು ಹೇಳಿದ್ದಳು ಎಂಬುವುದು ವಿಚಾರಣೆ ಬಳಿಕ ಗೊತ್ತಾಗಬೇಕಿದೆ.

ಈ ಮೊದಲು ಜಾವೇದ್ ವಿಚಾರಣೆ ನಡೆಸಿದಾಗ, ಮುಜಾಫರ್‌ ನಗರದಲ್ಲಿ ಬಾಂಬ್ ಸ್ಪೋಟಕ್ಕೆ ತಯಾರಿ ನಡೆಸುತ್ತಿರುವುದಾಗಿ, ಆರೋಪಿಗಳು ಒಪ್ಪಿಕೊಂಡಿದ್ದರು. ಇನ್ನು ಬಂಧಿತ ಮಹಿಳೆಯ ಹೆಸರು ಇಮ್ರಾನಾ ಆಗಿದೆ.

ನಟಿ ರಶ್ಮಿಕಾ ಮಂದಣ್ಣ ಚಲಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ನಟ ಜಗ್ಗೇಶ್ ನಿಂದನೆಗೆ ವರ್ತೂರು ಸಂತೋಷ್ ಹೇಳಿದ್ದೇನು..?

ಮೋದಿ ಸಾಹೇಬರು ಟಿವಿಯಲ್ಲಿ ಬರಲಾರದೆ ಒಂದು ವೋಟ್ ಕೇಳಿ: ಪ್ರಧಾನಿಗೆ ಲಾಡ್ ಸವಾಲ್

- Advertisement -

Latest Posts

Don't Miss