Wednesday, July 9, 2025

Latest Posts

ಡ್ಯಾಮೇಜ್ ಕಂಟ್ರೋಲ್​​ಗೆ ಯತ್ನ – ಸಿಎಂ ಸಿದ್ದರಾಮಯ್ಯ ಖಡಕ್ ಕ್ಲಾಸ್!

- Advertisement -

 

ಶಾಸಕರ ಅಸಮಾಧಾನಕ್ಕೆ ದೆಹಲಿಯಿಂದ ವಾಪಸ್ ಆಗ್ತಿದ್ದಂತೆ ಸಿಎಂ ಸಿದ್ದರಾಮಯ್ಯ, ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ನಿನ್ನೆ ಕಾವೇರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಿ.ಆರ್. ಪಾಟೀಲ್, ರಾಜು ಕಾಗೆ, ಜಮೀರ್ ಅಹಮದ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕವಾಗಿ ಹೇಳಿಕೆ ಕೊಡುವ ಮೊದಲು ತಮ್ಮೊಂದಿಗೆ ಚರ್ಚಿಸೇಕು ಅಂತಾ ಸಿದ್ದರಾಮಯ್ಯನವರೇ ಕಟ್ಟಪ್ಪಣೆ ಮಾಡಿದ್ದಾರೆ.

ವಸತಿ ಯೋಜನೆಗಳಲ್ಲಿ ಮನೆ ಹಂಚಿಕೆ ಮಾಡಲು ಫಲಾನುಭವಿಗಳಿಂದ ಲಂಚ ಪಡೆಯುತ್ತಿದ್ದಾರೆ ಅಂತಾ ಬಿ.ಆರ್. ಪಾಟೀಲ್ ಆರೋಪಿಸಿದ್ರು. ಈ ಆರೋಪವನ್ನ ರಾಜು ಕಾಗೆ ಬೆಂಬಲಿಸಿದ್ರು. ಇದಾದ ಬಳಿಕ ಜಮೀರ್ ಅಹಮದ್ ಸುದ್ದಿಗೋಷ್ಠಿ ನಡೆಸಿ, ನಾನು ಸತ್ಯ ಹರಿಶ್ಚಂದ್ರ ಅಲ್ಲ. ಆರೋಪ ಸಾಬೀತು ಮಾಡಿದ್ರೆ ರಾಜೀನಾಮೆ ನೀಡಲು ಸಿದ್ಧ ಎಂದು ಸಮರ್ಥನೆ ಕೊಟ್ಟಿದ್ರು.

ಇದಾದ ಬಳಿಕ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ರು. ರಾಜ್ಯದಲ್ಲಿ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ತರಿಸುವಂತ ಘಟನೆಗಳು ನಡೀತಿದ್ರು ಸುಮ್ಮನಿರೋದೇಕೆ ಅಂತಾ ಪ್ರಶ್ನಿಸಿದ್ದಾರೆ. ತಕ್ಷಣವೇ ಡ್ಯಾಮೇಜ್ ಕಂಟ್ರೋಲ್ ಮಾಡುವಂತೆ ನಿರ್ದೇಶನ ನೀಡಿದ್ರು.
ಇಷ್ಟು ದಿನ ಸುಮ್ಮನಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಕಾವೇರಿ ನಿವಾಸದಲ್ಲಿ ದಿಢೀರ್ ಸಭೆ ನಡೆಸಿದ್ದಾರೆ. ಆದರೆ ಶಾಸಕರ ಜೊತೆ ಯಾವೆಲ್ಲಾ ವಿಚಾರ ಚರ್ಚಿಸಲಾಯ್ತು ಅನ್ನೋದನ್ನ ಮಾತ್ರ ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಬಿ.ಆರ್. ಪಾಟೀಲ್, ರಾಜುಕಾಗೆ, ಜಮೀರ್ ಕೂಡ ಮೌನವಹಿಸಿದ್ದಾರೆ.
ಮತ್ತೊಂದು ಇಂಟರೆಸ್ಟಿಂಗ್ ವಿಷ್ಯ ಅಂದ್ರೆ, ಸಿಎಂ ಭೇಟಿಗೂ ಮೊದಲೇ, ಡಿಕೆಶಿಯನ್ನ ಬಿಆರ್. ಪಾಟೀಲ್ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಭೇಟಿಯಾಗಿ, ವಸತಿ ಇಲಾಖೆಯಲ್ಲಿ ಲಂಚ ಪಡೆಯುತ್ತಿರುವ ಬಗ್ಗೆ, ಕೆಲ ದಾಖಲೆಗಳ್ನೂ ನೀಡಿದ್ದಾರೆ ಎನ್ನಲಾಗಿದೆ.

ಇನ್ನು, ಕರ್ನಾಟಕ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಇನ್ನೊಂದು ವಾರದಲ್ಲಿ ರಾಜ್ಯಕ್ಕೆ ಬರುತ್ತಿದ್ದು, ಅಸಮಾಧಾನಿತ ಶಾಸಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.

 

- Advertisement -

Latest Posts

Don't Miss