Political News: ಇಂಡುವಾಳು ಸಚ್ಚಿದಾನಂದ ಸಂದರ್ಶನದಲ್ಲಿ ಮಾತನಾಡಿದ್ದು, ತಮಗೆ ಮುಂದಿನ ಚುನಾವಣೆಯಲ್ಲಿ ಟಿಕೇಟ್ ಸಿಗದಿದ್ರೆ ಯಾವ ನಿರ್ಧಾರ ತೆಗೆದುಕ`ಳ್ಳುತ್ತಾರೆ ಎನ್ನುವ ಬಗ್ಗೆ ವಿವರಿಸಿದ್ದಾರೆ.
ನಾನು ಬಿಜೆಪಿ ಪಕ್ಷದ ಕಟ್ಟಾಳು. ರಾಜಕೀಯ ನಿಂತ ನೀರಲ್ಲ. ಇಂದು ನಾಳೆ ಮುಗಿಯುವ ವಿಷಯವಲ್ಲ. ನಮಗಿನ್ನು ಚಿಕ್ಕ ವಯಸ್ಸು, ಈ ಬಾರಿ ಅವಕಾಶ ಸಿಗದಿದ್ದಲ್ಲಿ, ಮುಂದಿನ ಬಾರಿ ಪ್ರಯತ್ನಿಸಬಹುದು. ಆದರೆ 1 ಪಕ್ಷ, 1 ದೇಶದ ಅಭಿವೃದ್ಧಿಗೆ ಶ್ರಮಿಸುವಾಗ, ನಾವು ಅದಕ್ಕಾಗಿ ಸಾಥ್ ನೀಡಬೇಕು. ಹಾಗಾಗಿ ನನಗೆ ಚುನಾವಣೆಗೆ ನಿಲ್ಲಲು ಅವಕಾಶ ಸಿಗದಿದ್ದಲ್ಲಿ, ನಾನು ಪಕ್ಷದ ಗೆಲುವಿಗಾಗಿ ಶ್ರಮಿಸಲು ಸಿದ್ಧನಿದ್ದೇನೆ. ಪಕ್ಷ ಹೇಳಿದ್ರೆ, ನಾನು ಅವಕಾಶವನ್ನು ಬಿಡಲು ಸಿದ್ಧನಿದ್ದೇನೆ ಅಂತಾರೆ ಸಚ್ಚಿದಾನಂದ.
ಈ ಮುನ್ನ ನಾನು ಯುವಕನಾಗಿದ್ದಾಗಲೂ, ಯಾರ ಮನೆಬಾಗಿಲಿಗೂ ಅಲೆಸದೇ, ಪಕ್ಷ ನನಗೆ ಟಿಕೇಟ್ ನೀಡಿದೆ. ನನಗೂ ನನ್ನ ಬೆಂಬಲಿಗರನ್ನೂ ಬಿಜೆಪಿ ಪಕ್ಷದವರು ಪ್ರೀತಿ ಪೂರ್ವಕವಾಗಿ ನಡೆಸಿಕಂಡಿದ್ದಾರೆ. ನಮ್ಮಲ್ಲಿ 1 ಮಾತಿದೆ ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂದು. ಹಾಗಾಗಿ ದೇಶಕ್ಕಾಗಿ ಪಕ್ಷ ಯಾವುದೇ ನಿರ್ಧಾರ ತೆಗೆದುಕ`ಡರೂ ಅದಕ್ಕಾಗಿ ನಾನು ತಲೆಬಾಗುವ ಮನಸ್ಥಿತಿಯಲ್ಲಿದ್ದೇನೆ. ಯಾಕಾಗಿ ನನಗೆ ಎಲ್ಲಕ್ಕೂ ಮುಖ್ಯವಾಗಿ ಪಕ್ಷ. ಹಾಗಾಗಿ ಪಕ್ಷ ಹೇಳಿದ ಹಾಗೆ, ಪಕ್ಷಕ್ಕಾಗಿ ಕೆಲಸ ಮಾಡಬೇಕು ಎನ್ನುತ್ತಾರೆ ಸಚ್ಚಿದಾನಂದ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




