Thursday, December 26, 2024

Latest Posts

ಮರದ ಕೆಳಗೆ ಪ್ರೆಸ್‌ಮೀಟ್ ಮಾಡಿ ಎಡವಟ್ಟು ಮಾಡಿಕೊಂಡ ಭೂಪ- ವೀಡಿಯೋ ವೈರಲ್…

- Advertisement -

ಇಲ್ಲೆಲ್ಲಾ ಹೊಟೇಲ್, ಹಾಲ್, ಇತ್ಯಾದಿ ಸ್ಥಳಗಳಲ್ಲಿ ರಾಜಕಾರಣಿಗಳು, ಸಿನಿ ಕಲಾವಿದರು ಪ್ರೆಸ್ ಮೀಟ್ ಮಾಡೋದನ್ನ ನಾವು ನೋಡಿದಿವಿ. ಪ್ರೆಸ್‌ಮೀಟ್ ವೇಳೆ ಕೆಲವರಿಗೆ ಮುಜುಗರವಾಗುವುದನ್ನೂ ನೋಡಿದ್ದೀವಿ. ಅಂಥ ಮುಜುಗರದ ಸಂಗತಿಯೊಂದು ವಿದೇಶದಲ್ಲಿ ನಡೆದಿದ್ದು, ಈಗ ಇಂಟರ್‌ನ್ಯಾಷನಲ್ ಲೇವಲ್‌ನಲ್ಲಿ ಸುದ್ದಿಯಾಗಿದೆ. ವಿದೇಶದಲ್ಲಿ ಓರ್ವ ವ್ಯಕ್ತಿ ಮರದ ಕೆಳಗೆ ಪ್ರೆಸ್‌ಮೀಟ್ ಮಾಡಿ, ಇಂಟರ್‌ನ್ಯಾಷನಲ್ ಲೆವಲ್‌ನಲ್ಲಿ ಮುಜುಗರಕ್ಕೊಳಗಾಗಿದ್ದಾನೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದೆ.

 ಕ್ವೀನ್ಸ್‌ಲ್ಯಾಂಡ್ ಮುಖ್ಯಸ್ಥ ಅನ್ನಾಸ್ಟಾಸಿಯಾ ಪಲಾಸ್‌ಝಕ್, ಬ್ರಿಸ್ಬೇನ್ ಎಂಬಲ್ಲಿ ಮರದ ಕೆಳಗೆ ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಈ ವೇಳೆ ಸ್ಟೀವನ್ ಎಂಬುವರು ಮಾತನಾಡುತ್ತಿದ್ದು, ಇದನ್ನು ಮೈಕ್ ಎಂಬುವವರು ಮೂಕರಿಗೆ ಅರ್ಥವಾಗಲು ಮೂಕಾಭಿನಯ ಮಾಡುತ್ತಿದ್ದರು. ಈ ವೇಳೆ ಗೂಬೆ ಮೈಕ್ ತಲೆ ಮೇಲೆ ಹಿಕ್ಕೆ ಹಾಕಿದೆ. ಇದು ಪ್ರೆಸ್‌ಮೀಟ್‌ಗೆ ಬಂದಿದ್ದ ಪತ್ರಕರ್ತರ ಕ್ಯಾಮೆರಾದಲ್ಲಿ ಸೆರೆಯಾಗಿ, ವಿಶ್ವದಾದ್ಯಂತ ಸುದ್ದಿಯಾಗಿದೆ.

ಇನ್ನು ಹಿಕ್ಕೆ ಬಿದ್ದ ತಕ್ಷಣ ಮೈಕ್, ಅದನ್ನ ಕರ್ಚೀಫಿನಿಂದ ಒರೆಸಿಕೊಂಡು, ತಕ್ಷಣ ತಮ್ಮ ಕೆಲಸವನ್ನು ಮುಂದುವರೆಸಿದರು. ಪ್ರೆಸ್‌ಮೀಟ್ ಬಳಿಕ ಈ ಬಗ್ಗೆ ಟ್ವೀಟ್ ಮಾಡಿರುವ ಮೈಕ್, ಈ ಘಟನೆಯ ತಪ್ಪಿತಸ್ಥ ಗೂಬೆ ಎಂದು ತಮಾಷೆ ಮಾಡಿದ್ದಾರೆ. ಇನ್ನು ಈ ಟ್ವೀಟ್‌ಗೆ ಹಲವರು ಕಾಮೆಂಟ್ ಮಾಡಿದ್ದು, ಗೂಬೆ ಮತ್ತು ಮೈಕ್ ಬಗ್ಗೆ ತಮಾಷೆ ಮಾಡಿದ್ದಾರೆ.

- Advertisement -

Latest Posts

Don't Miss