ಬೆಂಗಳೂರು : ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಾದ ರಾಮಮುರ್ತಿನಗರದ ನಾಗಪ್ಪ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೆರೆ ಪ್ರದೇಶದಲ್ಲಿ ಬಡಾವಣೆಗಳನ್ನು ನಿರ್ಮಿಸುವ ಸಂಬಂಧ ಹಿರಡಿಸಲಾಗಿದ್ದ ಅಧಿಸೂಚನೆಯನ್ನು ರದ್ದು ಮಾಡಲಾಗಿದೆ....
ಬೆಂಗಳೂರು: ತುಮಕೂರು ಮೂಲದ ಕನ್ನಡಿಗ ಚಂದ್ರ ಆರ್ಯ, ಈಗ ಕೆನಡಾ ಸಂಸತ್ ನಲ್ಲಿ ಸಂಸದರಾಗಿದ್ದಾರೆ. ಅವರು ಕನ್ನಡಾಭಿಮಾನವನ್ನು ಕೆನಡಾದಲ್ಲಿಯೂ ಮೆರೆದಿದ್ದಾರೆ. ಸಂಸತ್ ನಲ್ಲಿ ಕನ್ನಡದಲ್ಲೇ ಮಾತನಾಡಿ, ಕನ್ನಡ ಕಸ್ತೂರಿಯ ಡಿಂಡಿಮವನ್ನು ಮೊಳಗಿಸಿದ್ದಾರೆ.
ಅವರು ಕೆನಡಾ ಸಂಸತ್ ನಲ್ಲಿ ಮಾತನಾಡಿದಂತ ಕನ್ನಡ ಭಾಷಣ ಈ ಕೆಳಗಿನಂತಿದೆ..
ನಮಸ್ಕಾರ,
ನಾನು ಇಂದು ಕೆನಡಾ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ..
ಮಾನ್ಯ ಸಭಾಪತಿ,
ಕೆನಡಾ...
ಇಸ್ತಾನ್ ಬುಲ್(ಟರ್ಕಿ):ಭಾರತದ ಮಹಿಳಾ ನಿಖಾತ್ ಜರೀನ್ ಬಾಕ್ಸಿಂಗ್ ವಿಶ್ವ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾರೆ.
ಗುರುವಾರ ನಡೆದ ಮಹಿಳಾ 52ಕೆ.ಜಿ.ವಿಭಾಗದಲ್ಲಿ ನಿಖಾತ್, ಥಾಯ್ಲೆಂಡ್ನ ಜಿಟ್ಪೊಂಗ್ ಜುಟ್ಮಾಸ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು.
ತಲಾ 3 ನಿಮಿಗಷಗಳ ಮೂರು ಸುತ್ತುಗಳಲ್ಲಿ ನಿಖಾತ್ ಪ್ರಾಬಲ್ಯ ಮೆರೆದರು. ಮೂರು ಸುತ್ತುಗಳಲ್ಲಿ 5 ತೀರ್ಪುಗಾರರು ನೀಖಾತ್ ಪರ ಹೆಚ್ಚು ಅಂಕ ನೀಡಿದರು. ಟೂರ್ನಿಯಲ್ಲಿ ಆಡಿದ...
ಮುಂಬೈ:ಐಪಿಎಲ್‍ನ 68ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ತಂಡ ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ.
ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಯುವ ಆಟಗಾರರಿಗೆ ಅವಕಾಶ ಕೊಟ್ಟು ಬೆಂಚ್ ಪರೀಕ್ಷೆ ಮಾಡುತ್ತಿದೆ. ಇತ್ತ ರಾಜಸ್ಥಾನ ತಂಡ 13 ಪಂದ್ಯಗಳಿಂದ ...
ಮುಂಬೈ:ರನ್ ಮಷೀನ್ ವಿರಾಟ್ ಕೊಹ್ಲಿ ಅವರ ಸೊಗಸಾದ ಅರ್ಧ ಶತಕದ ನೆರೆವಿನಿಂದ ಆರ್ಸಿಬಿ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಗೆಲುವಿನೊಂದಿಗೆ ಆರ್ಸಿಬಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದು ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಜಿಗಿದಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿತು....
ಮೊದಲ ಭಾಗದಲ್ಲಿ ನಾವು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ 8 ಪ್ರಮುಖ ವಿಷಯಗಳಲ್ಲಿ ನಾಲ್ಕು ವಿಷಯಗಳ ಬಗ್ಗೆ ಮಾಹಿತಿ ತಿಳಿದಿದ್ದೆವು. ಈಗ ಮುಂದುವರಿದ ಭಾಗವಾಗಿ ಇನ್ನುಳಿದ 4 ವಿಷಯಗಳ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ..
ಐದನೇಯದಾಗಿ ರೋಗವನ್ನು, ಹಾವನ್ನು ಮತ್ತು ಶತ್ರುವನ್ನು ಅರ್ಧಕ್ಕೆ ಬಿಡಬಾರದಂತೆ. ಅಂದ್ರೆ ರೋಗ ಬಂದಾಗ, ಅದಕ್ಕೆ ಅರ್ಧ ಚಿಕಿತ್ಸೆ ಕೊಟ್ಟು...
ಕುಟಿಲ ಶಾಸ್ತ್ರವನ್ನು ಕಂಡುಹಿಡಿದ ಕೌಟಿಲ್ಯರೇ ಆಚಾರ್ಯ ಚಾಣಕ್ಯರು. ಚಣಕರ ಮಗನಾದ ಕಾರಣ ಚಾಣಕ್ಯ ಎಂಬ ಹೆಸರು ಬಂತು. ಅತೀ ಚತುರರಾಗಿದ್ದ ಚಾಣಕ್ಯ, ಓರ್ವ ಸಾಮಾನ್ಯ ಯುವಕನನ್ನು ರಾಜನಾಗಿ ಮಾಡುವಲ್ಲಿ ಯಶಸ್ವಿಯಾದವರು. ಇದಕ್ಕೆ ಕಾರಣ ಅವರು ಜೀವಿಸಿದ ರೀತಿ, ಅವರು ಕಲಿತ ಜೀವನ ಪಾಠ. ಆ ಜೀವನ ಪಾಠ ಮತ್ತು ಅವರ ಅನುಭವವೇ ಕುಟಿಲ ನೀತಿ...
ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ಜೀವನ ಪಾಠವನ್ನು ಹೇಳಿದ್ದಾರೆ. ಹೇಗೆ ಇರಬೇಕು..? ವಿವಾಹವಾಗಬೇಕಾದರೆ ಯಾವ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು..? ವರ ವಧುವಿಗೆ ಮತ್ತು ವಧು ವರನಿಗೆ ಕೇಳಬೇಕಾದ ಪ್ರಶ್ನೆಗಳೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಮೌನಿಯಾಗಿರುವವರ ಬಗ್ಗೆ ಮತ್ತು ಹೆಚ್ಚು ಮಾತನಾಡುವವರ ಬಗ್ಗೆ ಕೆಲ...
ಲಂಡನ್: ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ-2020) ಅಳವಡಿಕೆಯಲ್ಲಿ ಹೇಗೆ ಇಡೀ ಭಾರತದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ವಿವಿಧ ದೇಶಗಳ ಶೈಕ್ಷಣಿಕ ಹಿತಾಸಕ್ತಿದಾರರ ಮುಂದೆ ಗುರುವಾರ ಎಳೆಎಳೆಯಾಗಿ ಅನಾವರಣಗೊಳಿಸಿದರು.
ಇಲ್ಲಿನ ಥೇಮ್ಸ್ ನದಿ ದಂಡೆಯಲ್ಲಿರುವ ‘ಪಾರ್ಕ್ ಪ್ಲಾಜಾ ಲಂಡನ್ ರಿವರ್ ಬ್ಯಾಂಕ್’ ಹೋಟೆಲ್ ನಲ್ಲಿ...
ಬೆಂಗಳೂರು: ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ. 85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು ತಿಳಿಸಿದರು.
ಮಲ್ಲೇಶ್ವರದಲ್ಲಿರುವ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಗುರುವಾರ (ಮೇ 19) ಸುದ್ದಿಗೋಷ್ಠಿಯಲ್ಲಿ ಪರೀಕ್ಷೆ ಫಲಿತಾಂಶದ ಕುರಿತು ಸಚಿವರು ಮಾಹಿತಿ ನೀಡಿದರು.
‘ಪರೀಕ್ಷೆಗೆ ಹಾಜರಾದ 8,53,436...