Sunday, September 8, 2024

Latest Posts

‘ಹುಬ್ಬಳ್ಳಿಯ ರಾಮ ಜನ್ಮಭೂಮಿ ಹೋರಾಟ ಬಂಧನ ಮತ್ತು ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ’

- Advertisement -

Hubballi News: ಹುಬ್ಬಳ್ಳಿ: 31ವರ್ಷಗಳ ಹಿಂದೆ ನಡೆದ ರಾಮಜನ್ಮಭೂಮಿ ಹೋರಾಟದ ಗಲಭೆಗೆ ಸಂಬಂಧಿಸಿದಂತೆ ಮತ್ತೇ ಮರು ಜೀವ ಬಂದಿದ್ದು ಓರ್ವ ಕರಸೇವಕನನ್ನು ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ.

ಅಂದು ಗಲಭೆಯ ಸಂದರ್ಭದಲ್ಲಿ 13 ಜನ ಕರಸೇವಕರನ್ನು ಬಂಧನ ಮಾಡಲಾಗಿತ್ತು, ಈ ಪೈಕಿ 8 ಕರಸೇವಕರಾದ ರಾಜು ಧರ್ಮದಾಸ್, ಶ್ರೀಕಾಂತ ಪೂಜಾರಿ, ಅಶೋಕ ಕಲಬುರ್ಗಿ, ಷಣ್ಮುಖ ಕಾಟಗಾರ, ಗುರುನಾಥ ಕಾಟೆಗಾರ, ರಾಮಚಂದ್ರಸಾ ಕಲಬುರ್ಗಿ ಹಾಗೂ ಅಮೃತ ಕಲಬುರ್ಗಿ ಇವರು ಅಂದಿನ ಗಲಭೆಯಲ್ಲಿ ಭಾಗಿಯಾಗಿದ್ದರು.

8 ಜನರಲ್ಲಿ ಐವರು ಅನಾರೋಗ್ಯ ವಯೋಸಹಜ ಖಾಯಿಲೆಯಿಂದ ಸಾವನ್ನಪ್ಪಿದ್ದಾರೆ.ಉಳಿದ ಮೂವರಲ್ಲಿ ರಾಮಚಂದ್ರಸಾ ಕಲಬುರ್ಗಿ ವಯೋಸಹಜ ಖಾಯಿಲೆಯಿಂದ ಇದ್ದರೆ, ಒಬ್ಬರು ರಾಜೀವ್ ಧರ್ಮದಾಸ್ ಎಂಬುವರಿಗೆ ಜಾಮೀನು ನೀಡಲಾಗಿದೆ ಇನ್ನೋರ್ವರಾದ ಶ್ರೀಕಾಂತ ಪೂಜಾರಿ ಎಂಬವರನ್ನು ಬಂಧನ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಮಾಹಿತಿ ನೀಡಿದ್ದು, 31 ವರ್ಷಗಳ ಬಳಿಕ ಪ್ರಕರಣ ತಿರುವು ಪಡೆದುಕೊಂಡಿದ್ದು, ಸರ್ವೇಸಾಮಾನ್ಯವಾಗಿ ಹಳೇ ಪ್ರಕರಣಗಳ ಕಡತಗಳು ವಿಲೇವಾರಿ ಬಾಕಿ ಇರುವ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸ್ ಇಲಾಖೆಯಿಂದ ಪ್ರಕರಣ ಕೈಗತ್ತಿಕೊಳ್ಳಲಾಗಿದೆ.

ಜನವರಿ 24 ರಂದು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ರಾಮಮಂದಿರ ಉದ್ಘಾಟನೆಗೂ ಹಾಗೂ ರಾಜಕೀಯ ಗಿಮಿಕ್ ಸೇರಿದಂತೆ ಯಾವುದೇ ಕಾರಣವಲ್ಲ ಹೀಗಾಗಿ ಹಳೇ ಪ್ರಕರಣಗಳ ಕಡತಗಳ ವಿಲೇವಾರಿ ಬಾಕಿಯಿರುವದರಿಂದ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದೊಂದು ಸಹಜ ಪ್ರಕ್ರಿಯೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಯೋಧ್ಯಾ ರಾಮ ಮಂದಿರದ ಮೇಲೆ ಬಾಂಬ್ ದಾಳಿ ಬೆದರಿಕೆ, ಯೋಗಿ ಆದಿತ್ಯನಾಥ್ ಹತ್ಯೆಗೂ ಸಂಚು..!

ಚುನಾವಣಾ ರಾಜಕಾರಣ ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಿ: ಬಿ.ವೈ.ವಿಜಯೇಂದ್ರ ಆಗ್ರಹ

ಫೋಟೋಶೂಟ್ ಮಾಡಿಸಬೇಡ ಎಂದಿದ್ದಕ್ಕೆ, ಯುವತಿ ಆತ್ಮಹತ್ಯೆ..

- Advertisement -

Latest Posts

Don't Miss