ಕೃಷಿ ವಿವಿ ಜಮೀನಿನಲ್ಲಿ ಅಯ್ಯಪ್ಪ ಮೂರ್ತಿ ಪ್ರತಿಷ್ಠಾನ ವಿವಾದ: ಸ್ಥಳಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ‌ ಮುತಾಲಿಕ್ ಭೇಟಿ

Dharwad News: ಕೃಷಿ ವಿಶ್ವವಿದ್ಯಾಲಯದ ಜಮೀನಿನಲ್ಲಿ ಎರಡು ದಿನ ಹಿಂದೆ ಅಪರಿಚಿತರು ಶ್ರೀ ಅಯ್ಯಪ್ಪ ಹಾಗೂ ನಾಗದೇವರ ಮೂರ್ತಿ ಪ್ರತಿಷ್ಠಾನ ಮಾಡಿದ್ದು, ವಿವಾದಿತ ಸ್ಥಳಕ್ಕೆ ಶ್ರೀ ರಾಮ ಸೇನೆ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಶುಕ್ರವಾರ ತಡ ಸಂಜೆ ಕೃಷಿ ವಿವಿ ಜಮೀನಿನ ಮೂರ್ತಿ‌ ಪ್ರತಿಷ್ಠಾನ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಮೂರ್ತಿಗಳ ಪರಿಶೀಲಿಸಿದರು. ಈ ವೇಳೆ ಶ್ರೀ ಅಯ್ಯಪ್ಪ ಸ್ವಾಮಿ ಪರ ಘೋಷಣೆ ಕೂಗಿ, ಮೂರ್ತಿ ಬಳಿ ಕಂಬ ನೇಡಲು ತಾವೇ ಸ್ವತಃ ಗುಂಡಿ‌ತೆಗೆದು ದೇವಸ್ಥಾನ‌ ನಿರ್ಮಿಸಲು ಒತ್ತಾಯಿಸಿದರು. ‌ ದೇವರ ಆರಾಧನೆ ಸೇರಿ ದೇವಸ್ಥಾನ ನಿರ್ಮಿಸಲು ಯಾರು ವಿರೋಧ ಮಾಡಬಾರದು. ಒಂದು ವೇಳೆ ಕೃಷಿ ವಿ.ವಿ, ಸರ್ಕಾರ ವಿರೋಧಿಸಿದರೆ ಪ್ರತಿಭಟಿಸುವುದಾಗಿ ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ನೀಡಿದರು. ಅಲ್ಲದೆ ಮೂರ್ತಿ ತೆರವುಗೊಳಿಸುವುದಾದರೆ ಮಸೀದಿ, ಗೋರಿಗಳನ್ನು ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು.

About The Author