Wednesday, July 30, 2025

Latest Posts

ಅಯ್ಯಪ್ಪ ಸ್ವಾಮಿ ಭಕ್ತರು  ಕಪ್ಪು ಬಟ್ಟೆ ಧರಿಸೋದ್ಯಾಕೆ..?!ಏನಿದರ ಮಹತ್ವ

- Advertisement -

Special Story:

ಜಗತ್ತಿಗೆ ವ್ಯಾಪಿಸಿದ್ದ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡ ನಂತರ ಇದೀಗ ಮತ್ತೆ ಶಬರಿಮಲೆಯತ್ತ ಭಕ್ತರ ದಂಡು ಧಾವಿಸಿ ಬರುತ್ತಿದೆ.ಆದರೆ ಇಲ್ಲಿ ವಿಶೇಷವೆಂದರೆ  ಸಹಸ್ರಾರು ಇತಿಹಾಸದಿಂದಲೂ ಅಯ್ಯಪ್ಪ ಮಾಲಾಧಾರಿಗಳು ಧರಿಸುವುದು ಕಪ್ಪು ಬಟ್ಟೆಯನ್ನೇ ಹಾಗಿದ್ರೆ ಈ  ಬಣ್ಣದ ಹಿಂದಿನ ರಹಸ್ಯವೇನು..?ಏನಿದರ ಮಹತ್ವ..?! ಹೇಳ್ತೀವಿ ಈ ಸ್ಟೋರಿಯಲ್ಲಿ…

ಸಂಕ್ರಾಂತಿ ಸಮಯಕ್ಕೆ ಸರಿಯಾಗಿ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತಾಧಿಗಳ  ದಂಡು ಹರಿದು ಬರುತ್ತದೆ.ಅವರೆಲ್ಲರೂ  ಕಪ್ಪು ಬಟ್ಟೆಯನ್ನು ಧರಿಸಿರುವುದು ವಿಶೇಷವಾಗಿಯೇ ಕಾಣಿಸುತ್ತದೆ. ಹೌದುನೀವು ಸಾಮಾನ್ಯವಾಗಿ ಗಮನಿಸಿರಬಹುದು ಅಯ್ಯಪ್ಪ ಸ್ವಾಮಿಯ ಮಾಲೆ ಹಾಕುವ ಭಕ್ತಾಧಿಗಳು ಹೆಚ್ಚಾಗಿ ಕಪ್ಪು ಬಟ್ಟೆಯನ್ನು ಧರಿಸುತ್ತಾರೆ. ಮಾಲಾಧಾರಿಗಳು ಯಾತ್ರೆ ಮುಗಿಯುವ ತನಕ ಕಪ್ಪು ಬಣ್ಣದ ಬಟ್ಟೆಯಲ್ಲಿಯೇ ಇರುತ್ತಾರೆ.

ಮಲೆಯ ಸುತ್ತಲೂ ಭಕ್ತಿಯ ಬೆಳಕಲ್ಲಿ ಕಪ್ಪು ಬಣ್ಣವೇ ಕಂಗೊಳಿಸಿರುತ್ತದೆ. ಸ್ವಾಮಿಯೇ ಶರಣಂಅಯ್ಯಪ್ಪ  ಅನ್ನೋ ಶರಣು ಉದ್ಘಾರದೊಂದಿಗೆ ಶಬರಿ ಮಲೆ ಸುತ್ತಲೂ ಭಕ್ತರ ದಂಡು ಹರಿದು ಬರುತ್ತದೆ. ಹಾಗಿದ್ರೆ  ಈ ಶಬರಿಮಲೆಗೂ ಅಯ್ಯಪ್ಪ ಭಕ್ತಾಧಿಗಳ ಬಟ್ಟೆಯ ಬಣ್ಣಕ್ಕೂ ಏನ್ ಸಂಬಂಧ..? ಇದಕ್ಕೆ ಸಹ ಒಂದು ಕಾರಣವಿದೆ. ಅಯ್ಯಪ್ಪ ಸ್ವಾಮಿಯ ಭಕ್ತರು ಕಪ್ಪು ಬಟ್ಟೆ ಧರಿಸುವುದು ಏಕೆ ಎಂಬುದು ಹೇಳ್ತೀವಿ.

ಡಿಸೆಂಬರ್ ಅಂತ್ಯ ಹಾಗೂ ಜನವರಿ ಆರಂಭ ಸಮಯದಲ್ಲಿ ಸಾವಿರಾರು ಭಕ್ತಾಧಿಗಳು ಅಯ್ಯಪ್ಪ ಮಾಲೆಯನ್ನು ಧರಿಸಿರುವುದನ್ನ ನಾವು ನೋಡುತ್ತೇವೆ. ಶಬರಿಮಲೆ ಯಾತ್ರೆ ಹೋಗುವ ಮೊದಲು ಸುಮಾರು 41 ದಿನಗಳ ಕಾಲ ಕಠಿಣ ವ್ರತ ಆಚರಣೆ ಮಾಡಿ, ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುತ್ತಾರೆ. ಹಾಗೆಯೇ ಈ ಸಮಯದಲ್ಲಿ ಕಡ್ಡಾಯವಾಗಿ ಕಪ್ಪು ಬಟ್ಟೆ ಧರಿಸುವುದು ಸಹ ಒಂದು.

ಹಿರಿಯರು ಕಪ್ಪು ಬಟ್ಟೆಯನ್ನು ಧರಿಸುವುದು ಅಶುಭ ಎನ್ನುತ್ತಾರೆ, ಆದರೆ ಅಯ್ಯಪ್ಪ ಮಾಲಾಧಾರಿಗಳು ಮಾತ್ರ ಕಡ್ಡಾಯವಾಗಿ ಕಪ್ಪು ಹಾಕಲೇ ಬೇಕು. ಇದಕ್ಕೆ ಕಾರಣ ಶನಿ. ಹೌದು, ಶನಿ ಹಾಗೂ ಅಯ್ಯಪ್ಪನಿಗೂ ಏನು ಸಂಬಂಧ ಎಂಬ ಅನುಮಾನ ಬರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ನಂಬಿಕೆಗಳ ಪ್ರಕಾರ ಅಯ್ಯಪ್ಪನ ದೀಕ್ಷೆ ತೆಗೆದುಕೊಳ್ಳುವುದರಿಂದ ಶನಿಯ ಕಾಟ ಇರುವುದಿಲ್ಲ ಎನ್ನಲಾಗುತ್ತದೆ. ಜೀವನದಲ್ಲಿ ಶನಿಯೊಬ್ಬ ಆವರಿಸಿದರೆ ಮನುಷ್ಯ  ಕಷ್ಟವನ್ನು  ಅನುಭವಿಸಬೇಕಾಗುತ್ತದೆ. ಈ ಕಾರಣದಿಂದಲೇ ಅಯ್ಯಪ್ಪ  ಸ್ವಾಮಿ ತನ್ನ ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆಗಳನ್ನು ಮಾಡಬಾರದು ಎಂದು ಶನಿಗೆ ಆಜ್ಞಾಪಿಸಿದ್ದಾನೆ ಎಂದು ಹೇಳಲಾಗುತ್ತದೆ.

ಅಲ್ಲದೇ ಅಯ್ಯಪ್ಪನ ಈ ಮಾತಿಗೆ ಒಪ್ಪಿಕೊಂಡ ಶನಿ ಸಹ ವ್ರತ ಮಾಡುವಾಗ ಕಪ್ಪು ಬಟ್ಟೆ ಧರಿಸಬೇಕು ಎಂಬ ಶರತ್ತು ಹಾಕಿದ್ದ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಮಾಲಾಧಾರಿಗಳು ಕಪ್ಪು ಬಟ್ಟೆ ಧರಿಸುತ್ತಾರೆ .ಸಾಮಾನ್ಯವಾಗಿ ಸಾಡೇಸಾತಿ ಆರಂಭವಾದರೆ 7 ವರ್ಷಗಳ ಕಾಲ ಹಿಂಸೆ ಅನುಭವಿಸಬೇಕಾಗುತ್ತದೆ. ಜೀವನದಲ್ಲಿ ಕಷ್ಟಗಳು ಸಾಲು ಸಾಲಾಗಿ ಬರುತ್ತದೆ. ಆದರೆ ಅಯ್ಯಪ್ಪನ ಮಾಲೆ ಹಾಕುವುದರಿಂದ ಶನಿಯ ಪ್ರಭಾವ ಕಡಿಮೆ ಆಗುತ್ತದೆ ಹಾಗೂ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನಲಾಗುತ್ತದೆ.

ಅಲ್ಲದೇ ಈ ಕಪ್ಪು ಬಟ್ಟೆಯೂ ಎಲ್ಲಾ ಲೌಕಿಕ ಆಸೆಗಳನ್ನು ಮರೆತು, ಅಯ್ಯಪ್ಪನ ಧ್ಯಾನದಲ್ಲಿ ಮಗ್ನರಾಗುವುದರ ಸಂಕೇತ ಸಹ ಎಂದು ಹೇಳಲಾಗುತ್ತದೆ. ಹಾಗೆಯೇ ಚಳಿಗಾಲದಲ್ಲಿ ವ್ರತ ಮಾಡುವುದರಿಂದ ದೇಹದ ಉಷ್ಣಾಂಶ ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.ಇನ್ನು ಈ 41 ದಿನಗಳ ವ್ರತ ಮಾಡಿದ ನಂತರ ಶಬರಿಮಲೆಗೆ ಯಾತ್ರೆ ಹೋಗಲಾಗುತ್ತದೆ. ಅಲ್ಲಿ ಮಕರ ಸಂಕ್ರಾಂತಿಯ ದಿನ ಮಕರ ಜ್ಯೋತಿಯನ್ನು ನೋಡಿ, ಅಯ್ಯಪ್ಪನ ದರ್ಶನ ಪಡೆದು ವ್ರತ ಪೂರ್ಣಗೊಳಿಸಲಾಗುತ್ತದೆ,.

ಮಕರ ಸಂಕ್ರಾಂತಿಯ ರಾತ್ರಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಬಳಿ ಆಕಾಶದಲ್ಲಿ ಒಂದು ಬೆಳಕು ಅದ್ಭುತವಾಗಿ ಗೋಚರಿಸುತ್ತದೆ. ದಟ್ಟ ಕತ್ತಲೆಯಲ್ಲೂ ಬೆಳಕು ಪ್ರಕಾಶಮಾನವಾಗಿ ಬೆಳಗುತ್ತಿರುತ್ತದೆ. ಈ ಬೆಳಕನ್ನು ನೋಡಿದಾಗಲೆಲ್ಲಾ ಅದರ ಜೊತೆಯಲ್ಲಿ ಶಬ್ದವೂ ಕೇಳಿಸುತ್ತದೆ ಎಂದು ಹೇಳಲಾಗುತ್ತದೆ. ಒಟ್ಟಾರೆ ತರ್ಕಕ್ಕೆ ನಿಲುಕದ ಅದೆಷ್ಟೋ ಸಂಗತಿಗಳು ಇನ್ನೂ  ನಡೆಯುತ್ತಿರುವುದು ಅಮೋಘ.

ಸಂಕ್ರಾಂತಿಯ ವಿಶೇಷತೆಗಳು ಹಾಗೂ ಪೂಜಾ ವಿಧಾನ..!

ಗುಡ್ ಲಕ್ ಗಾಗಿ ಸಂಕ್ರಾಂತಿಯದಿನ ಯಾವ ರಾಶಿಯವರು ಏನು ದಾನಮಾಡಬೇಕು..?

ಸಂಕ್ರಾಂತಿ ಆಚರಣೆಯಲ್ಲಿ ಖಾದ್ಯಗಳಿಗೆ ವಿಶೇಷ ಸ್ಥಾನ…ಇದರ ಹಿಂದಿರುವ ಆರೋಗ್ಯ ರಹಸ್ಯವೇನು ಗೊತ್ತಾ..?

- Advertisement -

Latest Posts

Don't Miss