Friday, December 27, 2024

Latest Posts

BC Patil : ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿರುದ್ಧ ಕಿಡಿ..!

- Advertisement -

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ (Congress mekedatu hikeing) ವಿರುದ್ಧ ಸಚಿವ ಬಿ ಸಿ ಪಾಟೀಲ್ (Minister B C Patil) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಪಾದಯಾತ್ರೆ ಕೊರೊನಾ (corona) ಕಾರಣದಿಂದ ಅರ್ಧಕ್ಕೆ ನಿಂತಿತ್ತು. ಈಗ ಕಾಂಗ್ರೆಸ್ ನಾಯಕರ ಪಾದಯಾತ್ರೆಯನ್ನು ಮತ್ತೆ ನಿನ್ನೆಯಿಂದ ಆರಂಭಿಸಿದ್ದಾರೆ. ಜನವರಿ 9 ರಿಂದ ಶುರುವಾಗಿದ್ದ ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ನಿಲ್ಲಿಸಲಾಗಿತ್ತು. ರಾಮನಗರದಲ್ಲಿ (ramanagara) ನಿಂತಿದ್ದ ಮೇಕೆದಾಟು ಪಾದಯಾತ್ರೆಗೆ ನಿನ್ನೆ ಚಾಲನೆ ಸಿಕ್ಕಿದೆ. 2ನೇ ಹಂತದ ಪಾದಯಾತ್ರೆ ಮಾರ್ಚ್ 3ನೇ ತಾರೀಕು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ (National College grounds) ತಲುಪಲಿದೆ. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿರುದ್ಧ ಸಚಿವ ಬಿ ಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರು ಕಾಂಗ್ರೆಸ್ ಪಕ್ಷಕ್ಕೆ ಛೀ ಥೂ ಅಂತಿದ್ದಾರೆ. ಈಗಾಗಲೇ ಕಾಂಗ್ರೆಸ್ ಮೂರು ದಿನ ವಿಧಾನಸೌಧದಲ್ಲಿ (Vidhana Soudha) ನಿದ್ದೆ ಮಾಡಿದೆ ಇನ್ನೂ ಎಚ್ಚರ ಆಗಿಲ್ಲ. ಆರು ದಿನ ಕಲಾಪ ಹಾಳು ಮಾಡಿದ್ದಾರೆ. ಯಾವ ಪುರುಷಾರ್ಥಕ್ಕೆ ಮಾಡಿದ್ರೋ ಅಂತ ಗದಗದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಯಾವ ಅಭಿವೃದ್ಧಿ, ಸಮಸ್ಯೆ ಬಗ್ಗೆ ಚರ್ಚೆ ಮಾಡಲಿಲ್ಲ. ಅದಕ್ಕೆ ಜನರು ಕಾಂಗ್ರೆಸ್ ಅಂದ್ರೆ ತಿರಸ್ಕಾರ ಭಾವನೆಯಿಂದ ನೋಡುತ್ತಿದ್ದಾರೆ. ಜನರ ಗಮನ ಸೆಳೆಯಲು ಮೇಕೆದಾಟು ಪಾದಯಾತ್ರೆ 2.0 ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಯಾರೂ ವಿರೋಧ ಮಾಡಿದ್ದಾರೆ. ಬಿಜೆಪಿ ಮೇಕೆದಾಟುಗೆ ವಿರೋಧ ಇಲ್ಲ. ಈಗಾಗಲೇ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕ ತಕ್ಷಣ ಕೆಲಸ ಆರಂಭ ಆಗುತ್ತೆ ಅಂತ ಹೇಳಿದ್ದಾರೆ.

- Advertisement -

Latest Posts

Don't Miss