political story :
ರಾಜ್ಯದಲ್ಲಿ ಕೆಲವು ದಿನಗಳಿಂದ ಧರ್ಮ ದಂಗಲ್ ಹೆಚ್ಚಾಗುತ್ತಲೇ ಇದೆ. ಈ ನಡುವೆ ಪ್ರಧಾನಿ ಮೋದಿ ಮುಸ್ಲಿಂ ದ್ವೇಷ ಬೇಡ ಎಂಬ ಹೇಳಿಕೆಯನ್ನ ನೀಡಿದ್ದಾರೆ. ಇದೇ ಹೇಳಿಕೆಯನ್ನ ಇಟ್ಟುಕೊಂಡು ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ. ಮುಸ್ಲಿಂ ದ್ವೇಷ ಬೇಡ ಎಂಬುದು ಭೂತದ ಬಾಯಿಯಲ್ಲಿ ಭಗವದ್ಗೀತೆ ಬಂದಂತೆ ಎಂದು ಪ್ರಧಾನಿ ಮೋದಿ ಹೇಳಿಕೆಗೆ ಬಿ.ಕೆ.ಹರಿಪ್ರಸಾದ್ ಟಾಂಗ್ ಕೊಟ್ಟಿದ್ದಾರೆ. ಇವರ ಮಾತನ್ನು ಯಾರೂ ನಂಬುವುದಿಲ್ಲ. ಬಿಜೆಪಿಯವರು ಸುಳ್ಳೇ ಮನೆ ದೇವರು ಎಂದು ನಂಬಿಕೊಂಡವರು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಬಿಜೆಪಿಯವರ ರಾಜಕಾರಣವೇ ದ್ವೇಷ, ಪ್ರತೀಕಾರದ ರಾಜಕಾರಣವಾಗಿದೆ. ಚುನಾವಣೆ ಹತ್ತಿರ ಬಂದಿದೆ. ಲವ್ ಜಿಹಾದ್, ಹಿಜಾಬ್, ಹಲಾಲ್ ವಿವಾದ ಚುನಾವಣೆಯಲ್ಲಿ ಹೊಡೆತ ನೀಡುತ್ತದೆ ಎಂದು ಬಿಜೆಪಿಗೆ ಗೊತ್ತಾಗಿದೆ. ಯಡಿಯೂರಪ್ಪ ಅವರು ಟಿಪ್ಪು ಪೇಟ ಧರಿಸಿದ್ದವರು. ಹೀಗಾಗಿ ಅವರನ್ನು ವಾಪಸ್ ಕರೆಸಿಕೊಂಡಿದ್ದಾರೆ. ಮುಸ್ಲಿಮರು ಯಡಿಯೂರಪ್ಪ ಅವರ ಮಾತನ್ನು ಕೇಳುತ್ತಾರೆಂದು ಮುಂದೆ ಬಿಟ್ಟಿದ್ದಾರೆ ಎಂದರು
ನಾನೇನು ಅಸಭ್ಯವಾಗಿ ವರ್ತಿಸಿಲ್ಲ, ವೇಶ್ಯೆ ಪದ ಬಳಸಿಲ್ಲ – ಬಿ.ಕೆ ಹರಿಪ್ರಸಾದ್

