Political News: ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರು ಹೇಳಿದರೆಂಬ ಕಾರಣಕ್ಕೆ ವಂದೇ ಮಾತರಂ ಎರಡು ಚರಣಗಳನ್ನು ಮಾತ್ರ ಹಾಡದೇ ಪೂರ್ತಿ ಹಾಡಿರುವುದಕ್ಕೆ ಸಚಿವ ತಂಗಡಗಿ ಅಧಿಕಾರಿಯನ್ನು ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ವಂದೇ ಮಾತರಂ 2 ಚರಣ ಮಾತ್ರ ಹಾಡಬೇಕು ಎನ್ನುವ ನಿಯಮವಿದೆ ಬಿಜೆಪಿ ನಾಯಕರಿಗಾಗಿ, ರಾಜ್ಯದ ಆದೇಶವನ್ನು ಮೀರಿ ವಂದೇ ಮಾತರಂ ಹಾಡನ್ನ ಪೂರ್ತಿಯಾಗಿ ಹಾಡಿದರೆ, ಕ್ರಮ ಕೈಗ“ಳ್ಳಬೇಕಾಗುತ್ತದೆ ಎಂದು ನಿನ್ನೆ ತಂಗಡಗಿ ಎಚ್ಚರಿಕೆ ನೀಡಿದ್ದರು.
ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವಂದೇ ಮಾತರಂ ಪೂರ್ಣ ಹಾಡಿದ್ರೆ ಅಧಿಕಾರಿಗಳ ಸಸ್ಪೆಂಡ್, ಇನ್ನೊಂದು ಕಡೆ ಸಚಿವರ ಫೋಟೋ ಹಾಕಿಲ್ಲ ಎನ್ನುವ ಕಾರಣಕ್ಕೆ ಡಿಎಚ್ಒ ಸಸ್ಪೆಂಡ್.. ಈ ಸಸ್ಪೆಂಡ್ ಸರ್ಕಾರದಲ್ಲಿ ಅಧಿಕಾರಿಗಳು ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡುವ ಸಂದಿಗ್ದತೆಗೆ ಸಿಲುಕಿದ್ದಾರೆ.
ರಾಜ್ಯದಲ್ಲಿ ಬರ, ರೈತರ ಆತ್ಮಹತ್ಯೆ, ಕುಡಿಯುವ ನೀರಿನ ಪೂರೈಕೆಗೆ, ರೈತರ ಗುಳೆ ಹೋಗುವುದನ್ನು ತಪ್ಪಿಸಿ ಉದ್ಯೋಗ ದೊರಕಿಸಬೇಕಾದ ಸರ್ಕಾರ ಅಧಿಕಾರಿಗಳ ಸಸ್ಪೆಂಡ್ ಮಾಡೋದ್ರಲ್ಲಿ ಕಾಲ ಕಳೆಯುತ್ತಿರುವುದು ವಿಪರ್ಯಾಸ ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ವಂದೇ ಮಾತರಂ ಈ ದೇಶದ ಜನರನ್ನು ಒಗ್ಗೂಡಿಸಿದ, ಸ್ವಾತಂತ್ರ ಜಾಗೃತಿ ಮೂಡಿಸಿರುವ ಗೀತೆ. ಸ್ವಾತಂತ್ರ ಹೋರಾಟಗಾರರ ಪಕ್ಷ ಎಂದು ತನ್ನ ಬೆನ್ನು ಚಪ್ಪಸಿರಿಕೊಳ್ಳುತ್ತಿರುವ ಕಾಂಗ್ರೆಸ್ ವಂದೇ ಮಾತರಂ ವಿರೋಧಿಸುತ್ತಿರುವುದು ದೇಶದ ಜನತೆಗೆ ಮಾಡುವ ಅಪಮಾನ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ವಂದೇ ಮಾತರಂ ಹಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ಇದೆಯಾ..? ಎಂದು ಪ್ರಶ್ನಿಸಿರುವ ವಿಜಯೇಂದ್ರ, ಕೇವಲ ಬ್ಯಾನರ್ ನಲ್ಲಿ ಫೋಟೋ ಹಾಕಿಲ್ಲ ಎನ್ನುವ ಕಾರಣಕ್ಕಾಗಿ ಜಿಲ್ಲಾ ಆರೋಗ್ಯ ಅಧಿಕಾರಿಯನ್ನೇ ಅಮಾನತು ಮಾಡಿರುವ ನಿರ್ಧಾರ ಅಕ್ಷಮ್ಯ. ಕೂಡಲೇ ಸರ್ಕಾರ ಈ ಅಧಿಕಾರಿಗಳ ಅಮಾನತು ಆದೇಶ ವಾಪಾಸ್ ಪಡೆಯಬೇಕು. ಅಧಿಕಾರಿಗಳಿಗೆ ಭಯಮುಕ್ತ ವಾತಾರಾವಣದಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ನೀಡಬೇಕು. ಅಲ್ಲದೇ ನಾವು ಮಾಡುವ ಕೆಲಸ ಜನರು ಮಾತಾಡಬೇಕು, ಕೇವಲ ಬ್ಯಾನರ್ ನಲ್ಲಿ ಫೋಟೋ ಹಾಕಿಸಿಕೊಳ್ಳುವುದಲ್ಲ ಎಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.




