Friday, July 4, 2025

Latest Posts

ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಉಪ್ಪಿ..!

- Advertisement -

www.karnatakatv.net : ಚಂದನವನದ ಬುದ್ದಿವಂತ, ರಿಯಲ್ ಸ್ಟಾರ್ ಉಪೇಂದ್ರ. ಶ್, ಓಂ, ಏ, ಸೂಪರ್, ಇಂತಹ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್‌ನಲ್ಲಿ ಬೇರೆ ರೀತಿಯ ಕಥೆ ಹಾಗೂ ವಿಭಿನ್ನ ಸ್ಟೈಲ್‌ಗಳಿಂದ ಹೊಸ ಟ್ರೆಂಡ್ ಸೃಷ್ಟಿಸಿದ ಕಲಾವಿದ.

ಸೂಪರ್ ಸ್ಟಾರ್ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಫೇಮಸ್. ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ರಾಜಕೀಯ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿ, ಪ್ರಜಾಕೀಯ ಪಕ್ಷದ ಮೂಲಕ ನಾಡಿನ ಜನರ ಮುಂದೆ ನಿಂತಿದ್ದಾರೆ. ಕೆಲದಿನಗಳ ಹಿಂದೆ ಮತ್ತೆ ನಿರ್ದೇಶನದ ಬಗ್ಗೆ ಉಪ್ಪಿ ಮಾಹಿತಿ ನೀಡಿದ್ರು.  ತಮ್ಮ ಬರ್ತ್ ಡೇ ದಿನವೇ ಒಂದು ಪೋಸ್ಟರ್ ರಿಲೀಸ್ ಮಾಡೋ ಮೂಲಕ ತಮ್ಮ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದ ಉಪ್ಪಿ, ಆ ಪೋಸ್ಟರ್ ಯಾವ ಚಿತ್ರದ ಬಗ್ಗೆ ಅನ್ನೋ ಸಣ್ಣ ಹಿಂಟ್ ಕೂಡ ಕೊಡದೆ ಕನ್ಫ್ಯೂಸ್ ಮಾಡಿದ್ರು.  ಯಾಕೆಂದರೆ ಆ ಪೋಸ್ಟರ್ ನಲ್ಲಿ “ಯು”  ಮತ್ತು  ಐ ಮಾತ್ರ ಬರೆಯಲಾಗಿತ್ತು.  ಈ ಪೋಸ್ಟರ್ ಗೆ ತಮ್ಮದೇ ವ್ಯಾಖ್ಯಾನ್ನ ನೀಡಿದ್ದ ಅಭಿಮಾನಿಗಳು ಯು ಅಂದ್ರೆ ನೀನು ಐ ಅಂದ್ರೆ ನಾನು ಅಂತ ಅರ್ಥ ಮಾಡಿಕೊಂಡಿದ್ರು. ಆದ್ರೆ ಪಂಗನಾಮದ ರೀತಿಯ ಪೋಸ್ಟರ್ ಬಗ್ಗೆ ಯಾವುದೇ ಕ್ಲಾರಿಫಿಕೇಷನ್ ನೀಡದ ಉಪ್ಪಿ ಅಭಿಮಾನಿಗಳ ಕ್ಯೂರಿಯಾಸಿಟಿಯನ್ನ ಇನ್ನಷ್ಟು ಹೆಚ್ಚಿಸಿದ್ದಾರೆ.

ಯಾಕಂದ್ರೆ ಎಲ್ಲರಿಗಿಂತ ತುಂಬಾ ಡಿಫರೆಂಟ್ ಆಗಿ ಥಿಂಕ್ ಮಾಡೋ ಉಪ್ಪಿ, ಒಂಥರಾ ಅನ್ ಪ್ರಿಡಿಕ್ಟಬಲ್ ಅಂತಾನೇ ಕರೆಸಿಕೊಳ್ತಾರೆ. ಇನ್ನು ಪ್ರಜಾಕೀಯದಿಂದ ರಾಜಕೀಯದ ಬಗ್ಗೆ ಜನರ ಅಭಿಪ್ರಾಯವನ್ನೇ ಬದಲಾಗುವಂತೆ ಮಾಡಿದ್ದಾರೆ. ಹೀಗಾಗಿ ಉಪ್ಪಿಯ ಮುಂದಿನ ಸಿನಿಮಾ ರಾಜಕೀಯ ಕುರಿತಾದ ಲಿಂಕ್ ಹೊಂದಿದ್ಯಾ, ಈ ಮೂಲಕ ಜನಕ್ಕೆ ಹೊಸದೇನಾದ್ರೂ ಸಂದೇಶ ನೀಡೋಕೆ ಹೊರಟಿದ್ದಾರಾ ಅನ್ನೋದಕ್ಕೆ ಈ ಬುದ್ಧಿವಂತನೇ ಕ್ಲಾರಿಫಿಕೇಷನ್ ನೀಡ್ಬೇಕು.

ಸದ್ಯ ರಿಯಲ್ ಸ್ಟಾರ್ ಬಳಿ  ತ್ರಿಶೂಲಂ, ಹೋಮ್ ಮಿನಿಸ್ಟರ್, ಲಗಾಮ್, ಬುದ್ಧಿವಂತ-2, ಸೇರಿದಂತೆ ಸಾಕಷ್ಟು ಚಿತ್ರಗಳಿವೆ. ಅಷ್ಟೇ ಅಲ್ಲದೆ  ಆರ್.ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಮೂವಿ ಕಬ್ಜ ದಲ್ಲಿ ಸುದೀಪ್ ಜೊತೆ ನಟಿಸ್ತಿದ್ದಾರೆ.  ಜೊತೆಗೆ ಶಶಾಂಕ್ ಜೊತೆ ಉಪ್ಪಿಯ 54ನೇ ಸಿನಿಮಾ ಮಾಡ್ತಾರೆ ಅಂತ ಹೇಳಲಾಗ್ತಿದೆ.  ಇನ್ನು ಡೈರೆಕ್ಟರ್  ಮಂಜು ಮಾಂಡವ್ಯ ಕತೆಯನ್ನು ಕೂಡ ಉಪ್ಪಿ ಕೇಳಿದ್ದು, ಅವರ ಜೊತೆಗೂ ಸಿನಿಮಾ ಮಾಡಬಹುದು ಅನ್ನೋ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.

ಈಗಾಗಲೇ ತೆಲುಗಿನಲ್ಲೂ ಖ್ಯಾತಿ ಪಡೆದಿರೋ ಉಪ್ಪಿ,  ಕಿರಣ್ ಕರ‍್ರಪಾಟಿ ನಿರ್ದೇಶನದ ತೆಲುಗಿನ  ಗಣಿ ಚಿತ್ರದಲ್ಲಿ ವರುಣ್ ತೇಜಾ ಜೊತೆ ನಟಿಸಲಿದ್ದಾರೆ. ಈಗಾಗಲೆ ಕೆಲ ಚಿತ್ರಗಳು ಶೂಟಿಂಗ್ ಮುಗಿಸಿದ್ದು ಯಾವ ಚಿತ್ರ ಮೊದಲು ರಿಲೀಸ್ ಆಗುತ್ತೆ ,  ಜೊತೆಗೆ ಪ್ರಜಾಕೀಯದಲ್ಲಿ ಸಿಕ್ಕಾಪಟ್ಟ ಬ್ಯುಸಿಯಾಗಿರೋ ಉಪ್ಪಿ ಈಗಾಗಲೇ  ಅನೌನ್ಸ್ ಆಗಿರೊ ಫಿಲಂಗಳಿಗೆ ಹೇಗೆ ಟೈಮ್ ಕೊಡ್ತಾರೆ, ಎಲ್ಲವನ್ನು ಹೇಗೆ ನಿಭಾಹಿಸಲಿದ್ದಾರೆ ಅನ್ನೋದನ್ನ  ಕಾದು ನೋಡಬೇಕಿದೆ.

ರೂಪೇಶ್. ಫಿಲಂ ಬ್ಯೂರೋ, ಕರ್ನಾಟಕ ಟಿವಿ.

- Advertisement -

Latest Posts

Don't Miss