Hubli News: ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ ಭಾರಿ ಬೆಲೆ ಹಿನ್ನೆಲೆ ಹೊಲದಲ್ಲಿನ ಮೆಣಸಿನಕಾಯಿ ಬೆಳೆಗೆ ಕಳ್ಳಕಾಟ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಧಾರವಾಡದ ರೈತನೊಬ್ಬ ಹೈಟೆಕ್ ಪ್ಲಾನ್ ಮಾಡಿದ್ದು, ಕಳ್ಳರ ಮೇಲೆ ನಿಗಾ ವಹಿಸಲು ಜಮೀನಿಗೆ ಬಂತು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದ್ದಾನೆ..
ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಶಿವಪುತ್ರಪ್ಪ ದ್ಯಾಮಣ್ಣವರ ತಮ್ಮ ಜಮೀನಿಗೆ ಸಿಸಿ ಕ್ಯಾಮರಾ ಹಾಕಿಸಿ ಸುದ್ದಿಯಾಗಿದ್ದಾರೆ.. ಶಿವಪುತ್ರಪ್ಪ ತಮ್ಮ ಐದು ಎಕರೆ ಜಮೀನಿನಲ್ಲಿ ಮೆಣಸಿನಕಾಯಿಯನ್ನು ಬೆಳೆದಿದ್ದಾರೆ.. ಸದ್ಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಭಾರಿ ಬೇಡಿಕೆಯಿದ್ದು ಪ್ರತಿ ಕ್ವಿಂಟಲ್ ಗೆ 80ರಿಂದ 90 ಸಾವಿರ ರೂಪಾಯಿ ದರವಿದೆ. ಹೀಗಾಗಿ ಮೆಣಸಿನಕಾಯಿ ಬೆಳೆಗಳ ಮೇಲೆ ಕಳ್ಳಕಾಕರ ಕಣ್ಣುಬಿದಿದ್ದು, ಇದನ್ನು ತಡೆಗಟ್ಟಲು ಶಿವಪುತ್ರಪ್ಪ ಸಿಸಿ ಕ್ಯಾಮರಾದ ಮೊರೆ ಹೋಗಿದ್ದಾರೆ. ಸೋಲಾರ್ ಸಹಾಯದಿಂದ
ಸಿಸಿ ಕ್ಯಾಮರಾ ಜಮೀನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಮತ್ತೊಂದು ವಿಶೇಷ.
ಡ್ರೋನ್ ಪ್ರತಾಪ್ ವಿನ್ನರ್ ಆಗದ ಕಾರಣ, ಚಾಲೆಂಜ್ ಸೋತ ಅಭಿಮಾನಿ: ಅರ್ಧ ಗಡ್ಡ, ಮೀಸೆಗೆ ಕತ್ತರಿ




