www.karnatakatv.net:ಡಾಲಿ ಧನಂಜಯ ಅಭಿನಯದ ಅತ್ಯಂತ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಬಡವ ರಾಸ್ಕಲ್ , ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು , ಯಶಸ್ವಿ ಪ್ರದರ್ಶನ ಕಂಡಿದೆ. ಮುಖ್ಯ ಚಿತ್ರ ಮಂದಿರ ಬೆಂಗಳೂರಿನ ತ್ರಿವೇಣಿ ಥೇಟರ್ ಗೆ ಆಟೋದಲ್ಲೀ ಬೇಟಿ ನೀಡಿದ ಧನಂಜಯ ಅಭಿಮಾನಿಗಳ ಜೊತೆ ಚಿತ್ರವನ್ನು ವೀಕ್ಷಿಸಿದರು.
ಇನ್ನೂ ಬಡವ ರಾಸ್ಕಲ್ ಸಿನಿಮಾದ ಬಗ್ಗೆ ಹೇಳುವುದಾದರೆ, ಬಡವ ರಾಸ್ಕಲ್ ಇದು ಒಂದು ಪಕ್ಕಾ ಮದ್ಯಮ ವರ್ಗದ ಯುವಕನ ಕಥೆ. ತನ್ನ ಬದುಕಿನಲ್ಲಿ ಆದ ಘಟನೆಗಳು, ತಂದೆ ತಾಯಿಯ ಪ್ರೀತಿ ಕಾಳಜಿ, ಮನೆಯಲ್ಲಿ ನಡೆಯುವ ವಿಷಯಗಳು, ಸ್ನೇಹಿತರೊಡನೆ ಇರುವ ಬಾಂಧವ್ಯ, ಪ್ರಿಯತಮೆ ಜೊತೆಗಿನ ವಡನಾಟ ಜಂಜಾಟ, ಬದುಕಿನಲ್ಲಿ ಯಾಕೆ ಈಗೆ ಆಗುತ್ತಿದೆ ಅನ್ನುವ ಗೊಂದಲಗಳು, ಜೀವನದಲ್ಲಿ ಏನೆಲ್ಲಾ ಆಯಿತು ಎಂಬ ವಿಷಯವನ್ನು ಹೊಸದಾಗಿ ಆದ ಗೆಳೆಯರೊಡನೆ ಹಂಚಿಕೊಳ್ಳುತ್ತಾನೆ ನಾಯಕ. ನಂತರ ನಾಯಕ ಶಂಕರ ಮತ್ತು ಅವನ ಪ್ರೀತಿಯನ್ನು ಒಂದು ಮಾಡುವ ಸಲುವಾಗಿ ಮುಂದಾಗುವ ಸ್ನೇಹಿತರು ನಿಜವಾಗಿ ನಾಯಕನ ಪ್ರೀತಿಯಲ್ಲಿ ಆದ ಅಸಲಿ ವಿಷಯವನ್ನು ಶಂಕರನಿಗೆ ತಿಳಿಸಿ ನಾಯಕ ನಾಯಕಿಯನ್ನು ಹೇಗೆ ಒಂದುಮಾಡುತ್ತಾರೆ ಎನ್ನುವುದೇ ಬಡವ ರಾಸ್ಕಲ್ ಸಿನಿಮಾ.
ಇದು ಒಂದು ಪಕ್ಕ ಎಂಟರ್ಟೈನ್ ಸಿನಿಮಾ, ಸಾಮಾನ್ಯವಾಗಿ ಬಳಸುವ ಮಾತುಗಳು, ಅರ್ಥಗರ್ಭಿತವಾದ ಸಂಭಾಷಣೆ, ಭಾವನಾತ್ಮಕ ಸನ್ನಿವೇಶಗಳು, ತಂದೆ ತಾಯಿ ಪ್ರೀತಿ, ಸ್ನೇಹ ಸ್ನೇಹಿತರು, ಪ್ರಿಯತಮೆ ಇದೆಲ್ಲವೂ ತೆರೆಮಲೆ ಅಚ್ಚುಕಟ್ಟಾಗಿ ಮೂಡಿಬಂದಿವೆ. ನೋಡುಗರಲ್ಲಿ ನಾಯಕನ ಕಥೆ ಏನಿರಬಹುದು ಎಂಬ ಕುತೂಹಲ ಮೂಡಿಸುವ ಚಿತ್ರವಾಗಿದೆ ಬಡವ ರಾಸ್ಕಲ್.
ಚಿತ್ರದಲ್ಲಿ ವಾಸುಕಿ ವೈಭವ್ ಸಂಗೀತ, ಧನಂಜಯ ಮತ್ತು ನಿರ್ದೇಶಕ ಶಂಕರ್ ಅವರ ಸಾಹಿತ್ಯ, ಜನರ ಮನ ಮುಟ್ಟಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲಾ ಹಾಡುಗಳೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾದಲ್ಲಿನ ದೃಶ್ಯಗಳು, ಆಟೋ ಡ್ರೈವರ್ ಪಾತ್ರದಲ್ಲಿ ಡಾಲಿ ಧನಂಜಯ ಅದ್ಬುತವಾಗಿ ಕಾಣಿಸಿದ್ದಾರೆ, ಎಲ್ಲಾ ಹೇಳುವಂತೆ ನಟರಾಕ್ಷಾಸ ಡಾಲಿ ಅಭಿನಯ ಮಾತ್ರ ವಲ್ಲದೆ, ಸಕ್ಕತ್ ಸ್ಟೆಪ್ಸ್ ಹಾಕಿದ್ದಾರೆ. ನಿರ್ದೇಶಕ ಶಂಕರ್ ಅವರ ಮೊದಲ ನಿರ್ದೇಶನ, ಕಥೆ ಹೇಳಿರುವ ರೀತಿ ಜನರ ಮನ ಮುಟ್ಟಿದೆ. ಒಟ್ಟಿನಲ್ಲಿ ಬಡವ ರಾಸ್ಕಲ್ ಒಂದು ಪಕ್ಕ ಮನೋರಂಜನೆಯ ಚಿತ್ರವಾಗಿದೆ.
ರೂಪೇಶ್ ಫಿಲಂ ಬ್ಯೂರೋ, ಕರ್ನಾಟಕ ಟಿವಿ.