Sunday, September 8, 2024

Latest Posts

ಟ್ರಯಲ್ಸ್ ಆಡಲು ನಿರಾಕರಿಸಿದ ಸೈನಾ ನೆಹ್ವಾಲ್

- Advertisement -

ಹೊಸದಿಲ್ಲಿ: ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮುಂಬರುವ ಪ್ರತಿಷ್ಠಿತ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಪ್ರಶಸ್ತಿ ಉಳಿಸಿಕೊಳ್ಳುವುದು ಅನುಮಾನದಿಂದ ಕೂಡಿದ್ದು  ಮುಂಬರುವ  ಟ್ರಯಲ್ಸ್‍ಗಳನ್ನು ಆಡದಿರಲು ನಿರಾಕರಿಸಿದ್ದಾರೆ.

ಕಾಮನ್‍ವೆಲ್ತ್‍, ಏಷ್ಯಡ್ ಹಾಗೂ ಉಬೇರ್ ಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲು ಒಂದೇ ಮಾನದಂಡವಾಗಿರುವುದರಿಂದ ಟ್ರಯಲ್ಸ್‍ಗಳನ್ನು ಆಡದಿರಲು ನಿರಾಕರಿಸಿರುವುದನ್ನು ಸೈನಾ ಬ್ಯಾಡ್ಮಿಂಟನ್ ಅಸೋಸಿಯೇಷನ್  ಇಂಡಿಯಾಕ್ಕೆ ಪತ್ರ ಬರೆದಿದ್ದಾರೆ.

ಈ ಸಮಯದಲ್ಲಿ  ಟ್ರಯಲ್ಸ್  ಆಡಿಸುವುದರಲ್ಲಿ ಅರ್ಥವಿಲ್ಲ.ಹಾಗಾದ್ರೆ ರಾಂಕಿಂಗ್ ಯಾಕೆ ಬೇಕೆಂದು ಮಾಜಿ ವಿಶ್ವದ ನಂ.1 ಆಟಗಾರ್ತಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ, ಬಿಡ್ಬ್ಲ್ಯುಎಫ್  ಟಾಪ್ 15ರ ರಾಂಕಿಂಗ್ ಒಳಗಿರುವ ಆಟಗಾರರನ್ನು ನೇರವಾಗಿ ಆಯ್ಕೆ ಮಾಡುತ್ತೇವೆ. ಉಳಿದವರನ್ನು ಟ್ರಯಲ್ಸ್ ಮೂಲಕ ಆಯ್ಕೆ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.

ಕಾಮನ್‍ವೆಲ್ತ್ ಗೇಮ್ಸ್ ಹಾಗೂ ಏಷ್ಯ ಗೇಮ್ಸ್ ಕ್ರೀಡಾಕೂಟ ಆಡದಿರಲು ನಿರಾಕರಿಸಿರುವ ಸೈನಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಡಲು ಹೋರಾಡುತ್ತೇನೆ ಎಂದಿದ್ದಾರೆ.  ನನ್ನ ಬದಲು ಬೇರೆಯವರು ಕಾಮನ್‍ವೆಲ್ತ್ ಹಾಗೂ ಏಷ್ಯನ್ ಗೇಮ್ಸ್‍ಗೆ ಅರ್ಹರಾಗಿದ್ದಲ್ಲಿ  ಅವರನ್ನು ಆಯ್ಕೆ ಮಾಡಲಿ ನಾನು ಪ್ರಶ್ನಿಸುವುದಿಲ್ಲ ಎಂದಿದ್ದಾರೆ.  ಕಳೆದ ಕೆಲವು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿರುವ ಸೈನಾ 23ನೇ ಸ್ಥಾನದಲ್ಲಿದ್ದಾರೆ.

- Advertisement -

Latest Posts

Don't Miss