Monday, June 16, 2025

Latest Posts

Bagalakote News: ತಾಳಿ ಕಟ್ಟಿ 20 ನಿಮಿಷಕ್ಕೆ ಹೃದಯಾಘಾತದಿಂದ ವರ ಸಾ*ವು

- Advertisement -

Bagalakote News: ಸಾವು ಹೇಗೆ, ಯಾವಾಗ, ಯಾವ ರೀತಿ ಬರುತ್ತದೆ ಅಂತಾ ಹೇಳಲು ಬರೋದಿಲ್ಲ. ಆರಾಮವಾಗಿ ಮಲಗಿದವರು ನಿದ್ರೆಯಲ್ಲೇ ಸಾವನ್ನಪ್ಪಬಹುದು. ಖುಷಿ ಖುಷಿಯಾಗಿ ನೃತ್ಯ ಮಾಡುತ್ತಿದ್ದವರು ಅಲ್ಲೇ ಕುಸಿದು ಬೀಳಬಹುದು. ಹೀಗೆ ಹಲವು ಘ’’ನೆಗಳು ನಡೆಯುವುದನ್ನು ನಾವು ನೀವು ನೋಡಿರುತ್ತೇವೆ.

ಆದರೆ ಇದೀಗ ನಡೆದಿರುವ ಘ’’ನೆ ಬಗ್ಗೆ ನೀವು ಕೇಳಿದ್ರೆ, ಶಾಕ್ ಆಗ್ತೀರಿ. ಸಂಭ್ರಮದ ಮದುವೆ ಮನೆಯಲ್ಲಿ ವರ ವಧುವಿಗೆ ಖುಷಿ ಖುಷಿಯಿಂದಲೇ ತಾಳಿ ಕಟ್ಟಿದ್ದ, ವಧು ಕೂಡ ವಿವಾಹವಾದ ಸಂಭ್ರಮದಲ್ಲಿದ್ದಳು. ಹೀಗೆ ಮದುವೆ ಶಾಸ್ತ್ರ ಮುಂದುವರಿದಿತ್ತು. ಸಂಬಂಧಿಕರು, ಸ್ನೇಹಿತರು ವಧು ವರರಿಗೆ ಅಭಿನಂದಿಸುತ್ತಿದ್ದರು. ಆದರೆ ಆ ಯಮಕಿಂಕರರ ದೃಷ್ಟಿ ವರನ ಮೇಲೆ ಬಿದ್ದಿದು, ವರ ಮದುವೆ ನಡೆದ 20 ನಿಮಿಷಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

26 ವರ್ಷದ ಪ್ರವೀಣ್ ಕುರ್ನೆ ಎಂಬಾತ ಮೃತ ವರನಾಗಿದ್ದಾನೆ. ಬಾಲಗಕೋಟೆ ಜಿಲ್ಲೆಯ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಈ ಮದುವೆ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನಿಂತಿದ್ದ ವಧು ವರ ಎರಡರಿಂದ ಮೂರು ಫೋಟೋ ಕ್ಲಿಕ್ಕಿಸಿಕ“ಂಡಿದ್ದಾರೆ ಅಷ್ಟೇ.

ವರನಿಗೆ ಕಾಲು ನಡುಕ, ಎದೆನೋವು ಶುರುವಾಗಿದೆ. ಕೂಡಲೇ ವರನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅದಾಗಲೇ ಪ್ರವೀಣ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಸಂಭ್ರಮದಿಂದಿದ್ದ ಮದುವೆ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಮದುವೆಗಾಗಿ ಮಾಡಿಸಿದ್ದ ಸಿಹಿಯೂ’’ವನ್ನು, ಸ್ಥಳಾಂತರಿಸಲಾಗಿದೆ.

ಜಮಖಂಡಿಯ ಕುಂಬಾರಹಳ್ಳ ಗ್ರಾಮದವರಾದ ಪ್ರವೀಣ್ ಬ್ಯಾಂಕ್ ಉದ್ಯೋಗಿಯಾಗಿದ್ದ. ವಧು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದವರು.

ಸೋದರ ಮಾವನ ಮಗಳನ್ನು ಮದುವೆಯಾಗಿ, ಸುಖದ ಸಂಸಾರ ನಡೆಸಬೇಕು ಎಂದು ಕನಸು ಕಂಡಿದ್ದ ವರ ಯಮನ ಕರೆಗೆ ಓಗೋಟ್ಟು ಹೋದರೆ, ಮದುವೆಯಾದ ಕೆಲವೇ ಕ್ಷಣಗಳಲ್ಲಿ ಪತಿಯನ್ನು ಕಳೆದುಕ“ಂಡು ಮುಂದಿನ ಜೀವನ ಹೇಗೆ ಅನ್ನುವ ಯೋಚನೆಯಲ್ಲಿ ವಧು ಮತ್ತು ಆಕೆಯ ಮನೆಯವರಿದ್ದಾರೆ.

- Advertisement -

Latest Posts

Don't Miss