Tuesday, April 15, 2025

Latest Posts

ಬಹದ್ದೂರ್ ಗಂಡು ಈಗ ಭರ್ಜರಿ ಗಂಡು

- Advertisement -

ಕಿರುತೆರೆ ಲೋಕದಲ್ಲಿ ತಮ್ಮದೇ ಅದ ಛಾಪು ಮೂಡಿಸಿರುವ ಕಿರಣ್ ರಾಜ್ ಅಭಿನಯದ ಚಿತ್ರ “ಭರ್ಜರಿ ಗಂಡು”.

ಈ ಮೊದಲು ” ಬಹದ್ದೂರ್ ಗಂಡು” ಎಂಬ ಹೆಸರಿನಿಂದ ಆರಂಭವಾದ ಈ ಚಿತ್ರದ ಶೀರ್ಷಿಕೆ ಈಗ “ಭರ್ಜರಿ ಗಂಡು” ಎಂದು ಬದಲಾಗಿದೆ.‌

ಕಿರಣ್ ರಾಜ್ ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಇನ್ನಷ್ಟು ಸ್ಲಿಮಾಗಿ ಕಾಣಿಸಿಕೊಂಡಿದ್ದಾರೆ. ದೊಣ್ಣೆ ವರಸೆ ಮುಂತಾದ ಸಾಹಸ ವಿದ್ಯೆಗಳ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ. ಚಿತ್ರ ಉತ್ತಮವಾಗಿ ಬರಲು ನಾಯಕ‌ನೊಬ್ಬ ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಈ ಚಿತ್ರದಲ್ಲಿ ಅವರು ಎರಡು ಲುಕ್ ಗಳಲ್ಲಿ ಗಮನ‌ ಸೆಳೆಯಲಿದ್ದಾರೆ. ಎರಡು ರೀತಿಯ ಪಾತ್ರಗಳಿಗೂ ಬೇಕಾದ ಪೂರ್ವ ತಯಾರಿ ಮಾಡಿಕೊಂಡು ಸೈ ಅನಿಸಿಕೊಂಡಿದ್ದಾರೆ. ಈ ಚಿತ್ರದ ಮೊದಲ ಜಲಕ್ ನೋಡಿಯೇ ಕಿರಣ್ ರಾಜ್ ಅವರಿಗೆ ಸಾಕಷ್ಟು ಆಫರ್ ಬರುತ್ತಿದೆ.

ಪ್ರಸಿದ್ಧ್ ನಿರ್ದೇಶನದ ಈ ಚಿತ್ರದ ‌ಚಿತ್ರೀಕರಣ ಬಹುತೇಕ ಮುಗಿದಿದೆ. ಪ್ರಸಿದ್ದ್ ಸಿನಿಮಾಸ್, ಮದನ್ ಗೌಡ ಹಾಗೂ ಅನಿಲ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಸುಮಧುರ ಹಾಡುಗಳಿಗೆ ಗುಮ್ಮಿನೇನಿ‌ ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ವೆಂಕಿ ಯುಡಿವಿ ಸಂಕಲನವಿರುವ ಈ‌ ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ.

ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಯಶಾ ಶಿವಕುಮಾರ್ ಇದ್ದಾರೆ. ರಮೇಶ್ ಭಟ್ , ರಾಕೇಶ್ ರಾಜ್, ಸುರೇಖ, ವೀಣಾ ಸುಂದರ್, ಜಯಶ್ರೀ, ನಾಗೇಶ್ ರೋಹಿತ್, ಸೌರಭ್ ಕುಲಕರ್ಣಿ, ಮಡೆನೂರು ಮನು, ಗೋವಿಂದೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

- Advertisement -

Latest Posts

Don't Miss