Hubli News: ಹುಬ್ಬಳ್ಳಿ: ಹಿಂದೂಗಳ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಕಾರ್ಯಕರ್ತೆ ಬೈತುಲ್ಲಾ ಕಿಲ್ಲೇದಾರ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಬೈತುಲ್ಲಾಳನ್ನು ನ್ಯಾಾಯಾಧೀಶರು ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.
ಅಂಗನವಾಡಿ ಆಹಾರ ಕದ್ದ ಪ್ರಕರಣದಲ್ಲಿ ಬೈತುಲ್ಲಾ ಪ್ರಮುಖ ಆರೋಪಿಯಾಗಿದ್ದಳು. ಆಹಾರ ಕದ್ದ ಪ್ರಕರಣದಲ್ಲಿ 32 ಜನರನ್ನು ಬಂಧಿಸಲಾಗಿತ್ತು. ಆದರೆ ಬೈತುಲ್ಲಾ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದಳು. ಹೀಗಾಗಿ ಈಕೆಯ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ನ್ಯಾಯಾಲಯ ಒಂದು ಪ್ರಕರಣವನ್ನು ರದ್ದುಗೊಳಿಸಿತ್ತು. ಮತ್ತೊಂದು ಪ್ರಕರಣದಲ್ಲಿ ಬೈತುಲ್ಲಾ ಜಾಮೀನು ಪಡೆದಿದ್ದಳು. ಆದರೆ ಇಂದು ಪತಿಯೊಂದಿಗೆ ಬೈತುಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದಳು. ಇದೀಗ ನ್ಯಾಯಾಧೀಶರು ಬೈತುಲ್ಲಾಳನ್ನು ಏಪ್ರಿಲ್ 2ರವರೆಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಬೈತುಲ್ಲಾ ಕಿಲ್ಲೇದಾರ್, ನನ್ನನ್ನ ಬಲಿಪಶು ಮಾಡಲಾಗಿದೆ. ಈ ಪ್ರಕರಣದಲ್ಲಿ ಬಹುದೊಡ್ಡ ಕೈವಾಡವಿದೆ. ಈ ಪ್ರಕರಣದ ಹಿಂದೆ ಬಹಳಷ್ಟು ಜನರ ಕೈವಾಡವಿದೆ. ನನ್ನನ್ನ ಈ ಪ್ರಕರಣದಲ್ಲಿ ಬಲಿಪಶು ಮಾಡಲಾಗಿದೆ ಎಂದು ಬೈತುಲ್ಲಾ ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಹುಬ್ಬಳ್ಳಿ ಪೊಲೀಸ್ ಕಮಿಷನರ್ ಶಶಿಕುಮಾರ್, ಬೈತುಲ್ಲಾ ಕಿಲೆದಾರ್ ಮೇಲೆ ಒಟ್ಟು ಮೂರು ಪ್ರಕರಣ ದಾಖಲಾಗಿತ್ತು. ಮೂರು ಪ್ರಕರಣ ಕೂಡ ಕಸಬಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಧಾರ್ಮಿಕ ಭಾವನೆಗಳನ್ನು ನೋಯಿಸುವ ರೀತಿ ಮಾತನಾಡಿದ್ದಾರೆ ಅಂತ ಪ್ರಕರಣ ದಾಖಲಾಗಿತ್ತು. ಬೆದರಿಕೆಯ ಪ್ರಕರಣ ಕೂಡ ಅದರಲ್ಲಿ ಒಳಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕೆ ಹಾಜರಾಗಿದ್ದಾರೆ ಅನ್ನೋ ಮಾಹಿತಿ ನಮಗೆ ಬಂದಿತ್ತು. ನಾವು ಕೂಡ ನಮ್ಮ ಪಿಪಿ ಅವರಿಗೆ ಪ್ರೆಸೆಂಟ್ ಮಾಡಿದ್ವಿ. ನ್ಯಾಯಾಧೀಶರು ಜುಡಿಸಿಯಲ್ ಕಸ್ಟಡಿ ಆರ್ಡರ್ ಮಾಡಿದ್ದಾರೆ.
ಸಂಬಂಧಪಟ್ಟ ಆರೋಪಿಯನ್ನ ನಮ್ಮ ಸಿಬ್ಬಂದಿ ಧಾರವಾಡ ಮಹಿಳಾ ಜೈಲಿಗೆ ಬಿಟ್ಟು ಬರುವ ಕೆಲಸ ಮಾಡಿದ್ದಾರೆ. ಈಗಾಗಲೇ ನಾವು ಪೊಲೀಸ್ ಕಸ್ಟಡ್ಗೆ ಕೂಡ ಕೊಟ್ಟಿದ್ದೇವೆ. ಅದನ್ನು ಕೋರ್ಟಲ್ಲಿ ಹಿಯರಿಂಗ್ ಮಾಡಿ ಕನಿಷ್ಠ ಒಂದು ವಾರ ಕಸ್ಟಡಿಗೆ ಬೇಕು ಅಂತ ಕೇಳಿದ್ದೇವೆ. ಎಷ್ಟು ದಿನ ಕೊಡ್ತಾರೆ ಅಂತ ನೋಡಿಕೊಂಡು ನಾವು ತನಿಖೆಯನ್ನು ಮಾಡುತ್ತೇವೆ. ಮೊದಲನೇ ಪ್ರಕರಣದಲ್ಲಿ ಹೈಕೋರ್ಟ್ ಇಂದ ಆದೇಶ ಆಗಿತ್ತು. ಆದೇಶದ ಮೇಲ್ಮನವಿ ಸಲ್ಲಿಸೋಕೆ ಜಿಲ್ಲಾಡಳಿತದ ವತಿಯಿಂದ ರೆಡಿಮಾಡಿಕೊಂಡು ನಮ್ಮ ಎಸ್ಪಿಪಿ ಇಂದ ತಯಾರಿ ಮಾಡಿಕೊಂಡಿದ್ದೇವೆ. ಇನ್ನು ಎರಡು ಪ್ರಕರಣಗಳಲ್ಲಿ ತನಿಖೆ ಮುಂದುವರಿಯುತ್ತೆ ಎಂದು ಶಶಿಕುಮಾರ್ ಹೇಳಿದ್ದಾರೆ.
ನಮ್ಮ ಕಮಿಷನರ್ ರೇಟ್ ವ್ಯಾಪ್ತಿಯಲ್ಲಿ ಪ್ರತಿ ವರ್ಷ 3 ರಿಂದ 4 ಸಾವಿರ ಪ್ರಕರಣಗಳು ದಾಖಲಾಗುತ್ತೆ. ನಾವು ಯಾವುದೇ ಪ್ರಕರಣದಲ್ಲಿ ಪರ್ಸನಲ್ ಆಗಿ ತೆಗೆದುಕೊಳ್ಳುವುದಿಲ್ಲ. ಕ್ರಮ ಏನು ಕೈಗೊಳ್ಳಬೇಕು ಅನ್ನೋದ್ರ ಬಗ್ಗೆ ಮಾತ್ರ ಫೋಕಸ್ ಇರುತ್ತೆ. ಈ ಪ್ರಕರಣ ಅತ್ಯಂತ ಗಂಭೀರ ಪ್ರಕರಣ ಆಗಿರೋದ್ರಿಂದ ತನಿಖೆ ಸಮಗ್ರವಾಗಿ ಆಗಬೇಕು. ಈ ಪ್ರಕರಣದಲ್ಲಿ ಆರೋಪಿ ರಕ್ಷಣೆ ಅಥವಾ ತನಿಖೆ ಸಮಗ್ರ ಆಗಬಾರದು ಅಂತ ಯಾರು ಕೂಡ ಒತ್ತಡ ಹಾಕಿಲ್ಲ. ನಾವು 32 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ವಿ ಪ್ರಮುಖ ಎರಡು ಆರೋಪಗಳ ನಮ್ಮಿಂದ ತಪ್ಪಿಸಿಕೊಂಡಿದ್ದರು. ಆರೋಪಿಗಳನ್ನ ಹಿಡಿಯಲು ಸಾಕಷ್ಟು ಪ್ರಯತ್ನ ಪಟ್ಟರು ಕೂಡ ನಮಗೆ ಸಿಕ್ಕಿರಲಿಲ್ಲ.
ಶಾಸಕರ ಹೇಳಿಕೆಯಲ್ಲಿ ಈ ಆರೋಪಿಯನ್ನ ಹಿಡಿಯೋಕೆ ಆಗಿಲ್ಲ ಅನ್ನೋದನ್ನು ಅಷ್ಟೇ ಹೇಳಿದ್ದಾರೆ. ಅದನ್ನು ಹೊರತು ಬೇರೆ ಅರ್ಥ ಕಲ್ಪಿಸುವಂತದ್ದು ಬೇಡ. ನಾನು ನಮ್ಮ ಸಿಬ್ಬಂದಿಗೂ ಕೂಡ ಹೇಳಿದೆ. ಪ್ರಮುಖ ಆರೋಪಿಗಳು ತಪ್ಪಿಸಿಕೊಂಡರೆ ಸಾರ್ವಜನಿಕರಿಗೆ ಇಲಾಖೆ ಮೇಲೆ ನಂಬಿಕೆ ಹೋಗುತ್ತೆ. ಪ್ರಮುಖ ಆರೋಪಿ ಬಂಧನ ಆಗುತ್ತೋ ಇಲ್ವೋ ಅಂತ ಯಾವುದೇ ಪ್ರಕರಣವಾಗಲಿ ಜನರು ನೋಡ್ತಾ ಇರ್ತಾರೆ. ಈಗ ಆಕೆ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.
ಮುಂದಿನ ಕ್ರಮ ಯಾವ ರೀತಿ ತೆಗೆದುಕೊಳ್ಳಬೇಕು, ತೆಗೆದುಕೊಳ್ಳಲಾಗುತ್ತೆ. ನಮಗೆ ಆರೋಪಿಗಳಿಂದ ಸೆಟಿಫಿಕೇಶನ್ ಬೇಕಾಗಿಲ್ಲ. ಆರೋಪಿಗಳನ್ನು ನಾವು ಆರೋಪಿಗಳನ್ನಾಗಿ ಅಷ್ಟೇ ನೋಡುವುದು. ಆರೋಪಿ ಏನು ಹೇಳುತ್ತಾರೆ ಅನ್ನೋದು ನಮ್ಮ ತನಿಖಾಧಿಕಾರಿಗಳ ಮುಂದೆ ಹೇಳಬೇಕು. ನಮಗೆ ಅದು ಅನಾವಶ್ಯಕ ಎಂದ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಾರೆ.