Friday, December 27, 2024

Latest Posts

ಕೃಷ್ಣರಾಜನಗರದಲ್ಲಿ ಬಕ್ರೀದ್‌ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರು..

- Advertisement -

ಕೃಷ್ಣರಾಜನಗರ :- ಇಂದು ಕೃಷ್ಣರಾಜನಗರದಲ್ಲಿ ಎಲ್ಲಾ ಮುಸಲ್ಮಾನ ಬಾಂಧವರು ಸೇರಿ ಬಕ್ರಿದ್ ಹಬ್ಬವನ್ನು ಬಾರಿ ವಿಜೃಂಭಣೆಯಿಂದ ಆಚರಿಸಲಾಗಿತ್ತು ಇದೇ ಸಂದರ್ಭದಲ್ಲಿ ನೂತನ ಶಾಸಕರಾದಂತಹ ಡಿ. ರವಿಶಂಕರ್ ಅವರು ಭಾಗವಹಿಸಿ ಮಾತನಾಡಿದರು

ಬಕ್ರೀದ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈದ್-ಉಲ್-ಅಧಾ ಮುಸ್ಲಿಮರ ಎರಡು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನ ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

ಬಕ್ರೀದ್ ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಹಬ್ಬವಾದ ಈದ್-ಉಲ್-ಅಧಾ ಎರಡು ಮತ್ತು ನಾಲ್ಕು ದಿನಗಳ ನಡುವೆ ಆಚರಿಸಲಾಗುತ್ತದೆ ಮತ್ತು ಇಸ್ಲಾಮಿಕ್ ಚಂದ್ರನ ತಿಂಗಳ ಧು ಅಲ್-ಹಿಜ್ಜಾದ ಹತ್ತನೇ ದಿನದಂದು ಆಚರಿಸಲಾಗುತ್ತದೆ.

ಬಕ್ರೀದ್ ಹಬ್ಬವು ತ್ಯಾಗದ ಸಂದೇಶವನ್ನು ನೀಡುತ್ತದೆ. ಅಂದರೆ ದೇವರು ತೋರಿಸಿದ ದಾರಿಯಲ್ಲಿ ನಡೆಯಬೇಕು ಎಂಬುದು ಅದರ ಅರ್ಥವಾಗಿದ್ದು, ಈ ಬಾರಿ ಜೂನ್​ 19ರದ್ದು ಬಕ್ರೀದ್​ ಹಬ್ಬವನ್ನ ಆಚರಿಸಲಾಗುತ್ತದೆ.

ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಈದ್ ಅಲ್-ಅಧಾ ಯಾವಾಗಲೂ ಒಂದೇ ದಿನದಲ್ಲಿ ಬರುತ್ತದೆ, ಗ್ರೆಗೋರಿಯನ್ ಕ್ಯಾಲೆಂಡರ್ ಚಂದ್ರನ ಬದಲಿಗೆ ಸೌರ ವರ್ಷವನ್ನು ಬಳಸುತ್ತದೆ, ಆದ್ದರಿಂದ ಈದ್ ಅಲ್-ಅಧಾ ದಿನಾಂಕವು ಪ್ರತಿ ವರ್ಷ ಬದಲಾಗುತ್ತದೆ

ಸಾಮಾನ್ಯವಾಗಿ ಪವಿತ್ರ ರಂಜಾನ್ ತಿಂಗಳ ನಂತರ ಸುಮಾರು 70 ದಿನಗಳ ನಂತರ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ. ಬಕ್ರೀದ್ ದಿನಾಂಕವನ್ನು ಚಂದ್ರನ ದರ್ಶನದಿಂದ ನಿರ್ಧರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ವಿವಿಧ ಆಚರಣೆಗಳನ್ನ ಮಾಡಲಾಗುತ್ತದೆ.

ವರದಿ :-ರಂಗಸ್ವಾಮಿ. ಡಿ ಆರ್ ಕೃಷ್ಣರಾಜನಗರ

ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಸೇಡು ತೀರಿಸಿಕೊಳ್ಳಲು ತಮ್ಮ ಶಿಷ್ಯನನ್ನೇ ಕರೆತರಲು ಮುಂದಾದ್ರಾ ಶೆಟ್ಟರ್?

‘175 ರೂಪಾಯಿ ಜೊತೆಗೆ ಇನ್ನೂ175 ರೂಪಾಯಿ ಹಣ ಹಾಕ್ಬೇಕು’

‘ಖಾಸಗಿಯವರಿಗೆ 15ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾರುವುದಕ್ಕಿದೆಯಾ?’

- Advertisement -

Latest Posts

Don't Miss